ಮಾಯದಂಥ ಮಳೆಗೆ ಬಂತು ‘ಮದಗದ ಕೆರೆ’ಗೆ: ಕೋಡಿ ಬಿತ್ತು ಬೃಹತ್ ಕೆರೆ - Mahanayaka

ಮಾಯದಂಥ ಮಳೆಗೆ ಬಂತು ‘ಮದಗದ ಕೆರೆ’ಗೆ: ಕೋಡಿ ಬಿತ್ತು ಬೃಹತ್ ಕೆರೆ

madagada kere
26/07/2024

ಚಿಕ್ಕಮಗಳೂರು:  ಮಾತದಂಥ ಮಳೆಗೆ ಮದಗದ ಕೆರೆ ಕೋಡಿ ಬಿದ್ದಿದೆ. ಜಾನಪದ ಸಾಹಿತ್ಯಕ್ಕೆ ಸಾಕ್ಷಿಯಾಗಿರೋ ಮದಗದ ಕೆರೆ ಪಶ್ಚಿಮ ಘಟ್ಟಗಳ ಸಾಲಿನ ಭಾರೀ ಮಳೆಗೆ ಕೋಡಿ ಬಿದ್ದಿದೆ.


Provided by

ಮದಗದ ಕೆರೆ ತುಂಬಿದ್ದು, ನೋಡಲು ಸಮುದ್ರದಂತೆ ಬೃಹತ್ ಆಗಿ ಕಾಣಿಸುತ್ತಿದೆ. ಈ ಕೆರೆ 336 ಹೆಕ್ಟೇರ್, 2036 ಎಕರೆ ವಿಸ್ತೀರ್ಣ ಹೊಂದಿದ್ದು, ಸುತ್ತಲೂ ಮುಗಿಲೆತ್ತರದ ಬೆಟ್ಟ—ಗುಡ್ಡಗಳ ಮಧ್ಯದಲ್ಲಿ ಕೆರೆಯಿದೆ. ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದಲ್ಲಿ ಈ  ಕೆರೆಯಿದೆ.

ಪಶ್ಷಿಮಘಟ್ಟಗಳ ಸಾಲಲ್ಲಿ ಭಾರೀ ಮಳೆ ಹಿನ್ನೆಲೆ, ಕೆರೆಗೆ ನೀರು ಹರಿಯುತ್ತಿದೆ. ಈ ಕೆರೆ ತುಂಬಿದ್ರೆ ಕಡೂರು ತಾಲೂಕಿನ ನೀರಿನ ಬವಣೆ ತಪ್ಪಲಿದೆ.  ಈ ಕೆರೆ ಕೋಡಿ ಬಿದ್ದು ಮಾರಿಕಣಿವೆ ಡ್ಯಾಂಗೆ ನೀರು ಸೇರುತ್ತಿದೆ.

ಕೆರೆ ತಪ್ಪಲಿನ 34 ಹಳ್ಳಿಯ ಜನ–ಜಾನುವಾರುಗಳಿಗೆ ಈ ನೀರೇ ಜೀವಜಲವಾಗಿದೆ. ಕೆರೆಯಲ್ಲಿ ನೀರು ಕಂಡು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ