ಬಿಜೆಪಿ ಸೇರಲು ನಿರಾಕರಿಸಿದ್ದಕ್ಕೆ ನನಗೆ ಚಿತ್ರಹಿಂಸೆ: ರಾಜ್ಯಸಭಾ ಸದಸ್ಯರಿಂದಲೇ ಗಂಭೀರ ಆರೋಪ - Mahanayaka

ಬಿಜೆಪಿ ಸೇರಲು ನಿರಾಕರಿಸಿದ್ದಕ್ಕೆ ನನಗೆ ಚಿತ್ರಹಿಂಸೆ: ರಾಜ್ಯಸಭಾ ಸದಸ್ಯರಿಂದಲೇ ಗಂಭೀರ ಆರೋಪ

01/05/2024

ಬಿಜೆಪಿ ಸೇರಲು ಮತ್ತು ಮಾರಾಟವಾಗಲು ನಿರಾಕರಿಸಿದ್ದಕ್ಕಾಗಿ ಜೈಲಿನಲ್ಲಿ ನನಗೆ ಹೊಡೆದು, ಚಿತ್ರಹಿಂಸೆ ನೀಡಲಾಯಿತು ಎಂದು ರಾಜ್ಯಸಭಾ ಸದಸ್ಯ, ಟಿಎಂಸಿ ನಾಯಕ ಸಾಕೇತ್ ಗೋಖಲೆ ಆರೋಪಿಸಿದ್ದಾರೆ.

ಹಿರಿಯ ವಕೀಲ ಕಪಿಲ್ ಸಿಬಲ್‌ ಅವರೊಂದಿಗೆ ತಮ್ಮ ನೋವನ್ನು ಹಂಚಿಕೊಂಡಿರುವ ಸಾಕೇತ್ ಗೋಖಲೆ, ಸುಮಾರು ಒಂದು ವರ್ಷ ತಾವು ಜೈಲಿನಲ್ಲಿ ಅನುಭವಿಸಿದ ಸಂಕಷ್ಟಗಳ ಬಗ್ಗೆ ವಿವರಿಸಿದ್ದಾರೆ. ಜೊತೆಗೆ, ಬಿಜೆಪಿ ಮತ್ತು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಅಡಳಿತದಲ್ಲಿ ವಿಪಕ್ಷಗಳ ನಾಯಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರು ಬಿಚ್ಚಿಟ್ಟಿದ್ದಾರೆ.

ಇಂತಹ ಹಿಂಸೆಗಳು ನನಗೆ ಮಾತ್ರವಲ್ಲ ಅಥವಾ ನಾನೊಂದು ನಿದರ್ಶನವೂ ಅಲ್ಲ. ಆದರೆ, ಭಾರತೀಯ ರಾಜಕೀಯದಲ್ಲಿ ಹೆಚ್ಚುತ್ತಿರುವ ಸರ್ವಾಧಿಕಾರಿದ ಲಕ್ಷಣವನ್ನು ನಾನು ಎದುರಿಸಿದ ಸಂಕಷ್ಟಗಳು ಎತ್ತಿ ತೋರಿಸುತ್ತವೆ” ಎಂದಿದ್ದಾರೆ.
ಕ್ರೌಡ್ ಫಂಡ್ ಮಾಡಿದ ಹಣವನ್ನು ವೈಯಕ್ತಿಕ ಬಳಕೆಗಾಗಿ ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಗೋಖಲೆ ಅವರನ್ನು ಬಂಧಿಸಿ, ಜೈಲಿನಲ್ಲಿರಿಸಲಾಗಿತ್ತು.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ