ಕೊರೊನಾ ಕೊವಿಶೀಲ್ಡ್ ವ್ಯಾಕ್ಸಿನ್ ನಿಂದ ಅಡ್ಡ ಪರಿಣಾಮ ಇದೆ: ಔಷಧ ಕಂಪನಿ ಆಸ್ಟ್ರೋಜನಿಕ ಹೇಳಿಕೆ - Mahanayaka

ಕೊರೊನಾ ಕೊವಿಶೀಲ್ಡ್ ವ್ಯಾಕ್ಸಿನ್ ನಿಂದ ಅಡ್ಡ ಪರಿಣಾಮ ಇದೆ: ಔಷಧ ಕಂಪನಿ ಆಸ್ಟ್ರೋಜನಿಕ ಹೇಳಿಕೆ

30/04/2024

ಕೊರೋನಾದ ಸಮಯದಲ್ಲಿ ಯಾರೆಲ್ಲಾ ಕೊವಿಶೀಲ್ಡ್ ವ್ಯಾಕ್ಸಿನನ್ನು ಚುಚ್ಚಿಸಿಕೊಂಡಿದ್ದಾರೋ ಅವರೆಲ್ಲರನ್ನೂ ಭೀತಿಯಲ್ಲಿ ಕೆಡಹುವ ಮಾಹಿತಿ ಹೊರಬಿದ್ದಿದೆ. ಈ ವ್ಯಾಕ್ಸಿನಲ್ಲಿ ಗಂಭೀರ ಅಡ್ಡ ಪರಿಣಾಮಗಳು ಇವೆ ಎಂದು ಇದೇ ಮೊದಲ ಬಾರಿ ವ್ಯಾಕ್ಸಿನ್ ತಯಾರಕ ಕಂಪನಿ ಆಗಿರುವ ಆಸ್ಟ್ರೋಜನಿಕ ಒಪ್ಪಿಕೊಂಡಿದೆ. ಲಂಡನ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ವೇಳೆ ಆಸ್ಟ್ರೋಜನಿಕ ಕಂಪನಿ ಈ ತಪ್ಪು ಒಪ್ಪಿಕೊಂಡ ಘಟನೆ ನಡೆದಿದೆ.

ಈ ಬಗ್ಗೆ ದ ಟೆಲಿಗ್ರಾಫ್ ಪತ್ರಿಕೆ ವಿಸ್ತೃತವಾಗಿ ವರದಿ ಮಾಡಿದೆ. ಕೊರೊನಾದ ಸಮಯದಲ್ಲಿ ಬ್ರಿಟಿಷ್ ಫಾರ್ಮಸುಟಿಕಲ್ ಕಂಪೆನಿಯಾದ ಆಸ್ಟ್ರೋಜನಿಕ ಮತ್ತು ಆಕ್ಸ್ಫರ್ಡ್ ಯೂನಿವರ್ಸಿಟಿ ಜೊತೆ ಸೇರಿ ಕೂವಿ ಶೀಲ್ಡ್ ಲಸಿಕೆಯನ್ನು ತಯಾರಿಸಿತ್ತು. ಆದರೆ ಈ ವ್ಯಾಕ್ಸಿನ್ ಸಾವಿಗೆ ಮತ್ತು ಗಂಭೀರ ಅಡ್ಡ ಪರಿಣಾಮಕ್ಕೆ ಕಾರಣವಾಗಿದೆ ಎಂದು ಹೇಳಿ ಬ್ರಿಟನಿನ ಅನೇಕ ಮಂದಿ ಕೋರ್ಟಿನಲ್ಲಿ ದಾವೆ ಹೂಡಿದ್ದರು.. ಬ್ರಿಟನಿನ ಹೈಕೋರ್ಟಿಗೆ ಅರ್ಜಿ ಹಾಕಿರುವ 51 ಮಂದಿ 100 ದಶಲಕ್ಷ ಪೌಂಡು ಪರಿಹಾರವನ್ನು ಆಗ್ರಹಿಸಿದ್ದರು. ಕೊವಿಶೀಲ್ಡ್ ಲಸಿಕೆಯು ಅಪರೂಪದಲ್ಲಿ ಮೆದುಳು ಸ್ತಂಭದ ನ ಮತ್ತು ಹೃದಯಘಾತ ಮುಂತಾದ ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಕಂಪನಿ ಇದೀಗ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ.

 


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ