10:46 AM Saturday 23 - August 2025

ಮ್ಯಾನ್ ಹೋಲ್ ಗೆ ಬಿದ್ದ ಬಾಲಕ, ರಕ್ಷಣೆಗೆ ಹೋದ ನಾಲ್ವರು ಸೇರಿದಂತೆ 5 ಜನರ ದುರ್ಮರಣ!

17/03/2021

ಲಕ್ನೋ: ಮ್ಯಾನ್ ಹೋಲ್ ಗೆ ಬಿದ್ದ 10 ವರ್ಷದ ಬಾಲಕ ಸಾವನ್ನಪ್ಪಿದ್ದು, ಬಾಲಕನನ್ನು ರಕ್ಷಿಸಲು ಹೋದ ನಾಲ್ವರು ಕೂಡ ಸಾವನ್ನಪ್ಪಿರುವ ಘಟನೆ  ಆಗ್ರಾದ ಫತೇಹಾಬಾದ್ ನಲ್ಲಿ ನಡೆದಿದೆ.

10 ವರ್ಷದ ಅನುರಾಗ್  ಆಟವಾಡುತ್ತಿದ್ದ ವೇಳೆ ಮ್ಯಾನ್ ಹೋಲ್ ಗೆ ಬಿದ್ದಿದ್ದಾನೆ. ಈತ ಮ್ಯಾನ್ ಹೋಲ್ ಗೆ ಬಿದ್ದ ತಕ್ಷಣವೇ ಈತನನ್ನು ಸೋನು(25) , ರಮ್ ಖಿಲಾಡಿ, ಹರಿಮೋಹನ್ (16), ಅವಿನಾಶ್(12) ಎಂಬವರು ಕೂಡ ಒಬ್ಬರ ಹಿಂದೊಬ್ಬರಂತೆ ಮ್ಯಾನ್ ಹೋಲ್ ಗೆ ಇಳಿದಿದ್ದಾರೆ.

ಮ್ಯಾನ್ ಹೋಲ್ ನೊಳಗೆ ವಿಷಾನಿಲ ಇರುತ್ತದೆ. ಈ ವಿಷಾನಿಲದಿಂದಾಗಿಯೇ ಈ ಐವರು ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮ್ಯಾನ್ ಹೋಲ್ ನೊಳಗೆ ಒಟ್ಟು 5 ಜನರು ಸಿಲುಕಿದ್ದಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಕಾರ್ಯಾಚರಣೆ ನಡೆಸಿ ಅವರನ್ನು ಹೇಗೋ ಮೇಲೆತ್ತಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವ್ಯದ್ಯರು ದೃಢಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version