10:03 AM Wednesday 22 - October 2025

ಬಾಲಕಿಗೆ ತಿಂಡಿ ನೀಡುವ ನೆಪದಲ್ಲಿ ಲೈಂಗಿಕ ಕಿರುಕುಳ

bantwala news
20/03/2021

ಬಂಟ್ವಾಳ:  ವ್ಯಕ್ತಿಯೋರ್ವ ಬಾಲಕಿಗೆ ಸುಮಾರು 2 ತಿಂಗಳುಗಳಿಂದಲೂ ತಿಂಡಿ ನೀಡುತ್ತಾ, ಬಾಲಕಿಯ ಜೊತೆಗೆ ಸಲುಗೆಯಿಂದ ಇದ್ದ. ಈತನ ಚಲನವಲನಗಳನ್ನು ಗಮನಿಸಿ ಪ್ರಶ್ನಿಸಿದಾಗ ಈತನ ಅಸಲಿಯತ್ತು ಬಯಲಾಗಿದೆ.

ಕುಕ್ಕಿಪಾಡಿ ಗ್ರಾಮದ ಕುದ್ಕೋಳಿಯಲ್ಲಿ ಈ ಘಟನೆ ನಡೆದಿದ್ದು, ಬಾಲಕಿಗೆ ತಿಂಡಿ ನೀಡುವ ನೆಪದಲ್ಲಿ  ಇಲ್ಲಿನ ಕುದ್ಕೊಳಿ ನಿವಾಸಿ ಶೇಖರ ಗೌಡ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದ ಎಂದು ಹೇಳಲಾಗಿದೆ.

ಶೇಖರ ಗೌಡ ಬಾಲಕಿಯ ಜೊತೆಗೆ ಹತ್ತಿರವಾಗಿರುವ ಬಗ್ಗೆ ಅನುಮಾನಗೊಂಡು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿ

Exit mobile version