5:05 PM Wednesday 17 - December 2025

ಮಾಸ್ಕ್ ಧರಿಸಿಲ್ಲ ದಂಡ ಕಟ್ಟು ಎಂದು ದುಪ್ಪಟ್ಟ ಎಳೆದ ಸಿಬ್ಬಂದಿ | ಕೋಪಗೊಂಡ ಮಹಿಳೆ ಮಾಡಿದ್ದೇನು?

mask
20/03/2021

ಮುಂಬೈ: ಕೆಲವೊಮ್ಮೆ ಕೊರೊನಾ ನಿಯಮಗಳೇ ಕೊರೊನಾಕ್ಕಿಂತ ಭಯಂಕರವಾಗಿದೆ ಎಂದು ಜನರಿಗೆ ಅನ್ನಿಸುತ್ತಿದೆ. ಈ ನಡುವೆ ಮಹಾರಾಷ್ಟ್ರದಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹಾರಾಷ್ಟ್ರದಲ್ಲಿ ಮಾಸ್ಕ್ ತೊಡದೇ ಓಡಾಡುತ್ತಿರುವವರಿಗೆ ದಂಡ ಹಾಕಲು ಮಾರ್ಷಲ್ ಗಳನ್ನು ನೇಮಿಸಲಾಗಿದೆ. ಆದರೆ, ಇಲ್ಲೊಬ್ಬ ಮಾರ್ಷಲ್ ದಂಡ ವಿಧಿಸುವ ನೆಪದಲ್ಲಿ ಮಹಿಳೆಯೋರ್ವರ ದುಪ್ಪಟ್ಟ ಎಳೆದಿದ್ದು, ಇದರಿಂದ ಆಕ್ರೋಶಗೊಂಡ ಮಹಿಳೆ ಮಾರ್ಷಲ್ ಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ.

ಮಹಿಳೆಯೊಬ್ಬರು ಆಟೋ  ಹತ್ತಲು ಪ್ರಯತ್ನಿಸುತ್ತಿದ್ದ ವೇಳೆ ಮಾರ್ಷಲ್ ಆಗಮಿಸಿದ್ದಾನೆ. ನೀನು ಮಾಸ್ಕ್ ಧರಿಸಿಲ್ಲ, ದಂಡ ಕಟ್ಟು ಎಂದು ಹೇಳಿದ್ದಾನೆ. ಈ ವೇಳೆ ಮಹಿಳೆ ನಾನು ದಂಡಕಟ್ಟುವುದಿಲ್ಲ ಎಂದು ಹೇಳಿದ್ದಾಳೆ. ಆಟೋ ಹತ್ತಿ ಕುಳಿತೇ ಬಿಟ್ಟಿದ್ದಾಳೆ.

ಮಹಿಳೆ ದಂಡಕಟ್ಟಲು ನಿರಾಕರಿಸುತ್ತಿದ್ದಂತೆಯೇ ಮಾರ್ಷಲ್ ಮಹಿಳೆಯ ಕೈ ಹಿಡಿದುಕೊಂಡಿದ್ದಾನೆ. ಈ ವೇಳೆ ಮಹಿಳೆ ಆತನನ್ನು ಹಿಂದಕ್ಕೆ ತಳ್ಳಿದ್ದು, ಈ ವೇಳೆ ಮಹಿಳೆಯ ದುಪ್ಪಟ್ಟ ಮಾರ್ಷಲ್ ಎಳೆದುಕೊಂಡಿದ್ದಾನೆ.

ಮಾರ್ಷಲ್ ನ ಈ ಕೆಲಸದಿಂದ ತೀವ್ರವಾಗಿ ಕೋಪಗೊಂಡ ಮಹಿಳೆ ಮಾರ್ಷಲ್ ಗೆ ಮೂರು-ನಾಲ್ಕು ಬಾರಿ ಝಾಡಿಸಿ ಒದ್ದಿದ್ದಾಳೆ. ನಾಲ್ಕೈದು ಬಾರಿ ಕಪಾಳಕ್ಕೆ ಕೈ ಬೀಸಿ ಹೊಡೆದಿದ್ದಾಳೆ. ಈ ವೇಳೆಯೂ ಮಾರ್ಷಲ್ ಮಹಿಳೆಯ ದೇಹವನ್ನು ಮುಟ್ಟಿದ್ದಾನೆ. ಮಹಿಳೆ ಕೂದಲಲ್ಲಿ ಹಿಡಿದುಕೊಂಡಿದ್ದು ಆದರೂ ಮಾರ್ಷಲ್ ಮಹಿಳೆಯ ಬಟ್ಟೆಯನ್ನು ಬಿಗಿಯಾಗಿ ಹಿಡಿದುಕೊಂಡೇ ಇದ್ದ. ಕೊನೆಗೆ ಮಹಿಳೆ ತನ್ನ ಕೂದಲು ಬಿಟ್ಟರೆ ಬಟ್ಟೆ ಬಿಡುತ್ತೇನೆ ಎಂದು ಹೇಳಿದ್ದಾನೆ. ಬಳಿಕ ಮಹಿಳೆ ಕೂದಲು ಬಿಟ್ಟಿದ್ದು, ಇಲ್ಲಿಗೆ ಇವರಿಬ್ಬರ ಭಯಂಕರ ಕಾಳಗ ನಿಂತು ಹೋಗಿದೆ.

ಘಟನೆ ಸಂಬಂಧ ಕಾಂದಿವಿಲಿಯ ಚಾಕೋರ್ಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದ್ದು, ಈ ಮಹಿಳೆ ಯಾರು ಎಂದು ಪತ್ತೆ ಮಾಡಲು ಬಿಎಂಸಿ ಅಧಿಕಾರಿಗಳು ಮುಂದಾಗಿದ್ದಾರೆ.

ಇತ್ತೀಚಿನ ಸುದ್ದಿ

Exit mobile version