ಬಾಳೂರು: ಮಕ್ಕಳ ಹಕ್ಕುಗಳ ಗ್ರಾಮ ಸಭೆ | ಮಕ್ಕಳ ಸಮಸ್ಯೆ ಅರಿಯಲು ಗ್ರಾಮ ಸಭೆ ಸೂಕ್ತ: ಮಾರ್ಗರೇಟ್ ಡಿಸೋಜ

baluru
18/11/2024

ಕೊಟ್ಟಿಗೆಹಾರ: ಮಕ್ಕಳ ಗ್ರಾಮ ಸಭೆಯಲ್ಲಿ ಶಾಲಾ ಮಕ್ಕಳ ಸಮಸ್ಯೆಯನ್ನು ಆಲಿಸಲು ಸೂಕ್ತ ವೇದಿಕೆಯಾಗಿದೆ’ ಎಂದು ನಿವೃತ್ತ ಶಿಕ್ಷಕಿ ಮಾರ್ಗರೇಟ್ ಡಿಸೋಜ ಅಭಿಪ್ರಾಯ ಪಟ್ಟರು.

ಅವರು ಬಾಳೂರು  ಶಾಲೆಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

‘ಶಾಲಾ ಮಕ್ಕಳ ಬೌದ್ಧಿಕ ಮಟ್ಟದ ಅಭಿವೃದ್ಧಿಗಾಗಿ ಶಾಲಾ ಮಕ್ಕಳ ಸಮಸ್ಯೆಗಳನ್ನು ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಆಲಿಸಲಾಗುತ್ತದೆ. ಮಕ್ಕಳ ಸಮಸ್ಯೆಯನ್ನು ಪೋಷಕರು ಹಾಗೂ ಶಿಕ್ಷಕರು ಗುರುತಿಸುವುದು ಸೂಕ್ತವಾಗಿದೆ. ಇದರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ. ಮಹಿಳೆಯರು ಕೂಡ ಮಹಿಳಾ ಹಕ್ಕುಗಳ ಬಗ್ಗೆ ತಿಳಿದು ಸಮಾಜದಲ್ಲಿ ನಡೆದರೆ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ’ ಎಂದರು.

ಬಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಬಿ.ಮಂಜುನಾಥ್ ಮಾತನಾಡಿ ‘ಮಕ್ಕಳಿಗೆ ಸಾಂಸ್ಕೃತಿಕ ಕಲೆ,ಸಾಹಿತ್ಯ ಕ್ರೀಡೆಗಳ ಬಗ್ಗೆ ಆಸಕ್ತಿ ಮೂಡಲು ಪ್ರೇರಣೆ ನೀಡಬೇಕು. ಇದರಿಂದ ಮಕ್ಕಳ ಬೌದ್ಧಿಕ ಮಟ್ಟ ವೃದ್ದಿಯಾಗುತ್ತದೆ’ಎಂದರು.

ಬಿಜೆಪಿ ಮುಖಂಡ ಬಿ.ಎಂ.ಭರತ್ ಮಾತನಾಡಿ, ಶಾಲೆ ಬಿಟ್ಟ ಮಕ್ಕಳನ್ನು ಕಡ್ಡಾಯವಾಗಿ  ಶಾಲೆಗೆ ಸೇರಿಸುವುದು.ಬಾಲ್ಯ ವಿವಾಹಗಳ ತಡೆಗಟ್ಟಲು ಮಾಹಿತಿ ನೀಡುವುದು. ಮಕ್ಕಳ ಹಕ್ಕುಗಳ ರಕ್ಷಣೆಗೆ ಗ್ರಾಮಾಡಳಿತ ಮಕ್ಕಳ ಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು’ಎಂದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಗೀತಾ, ಸದಸ್ಯರಾದ ಮನೋಜ್, ಪ್ರಕಾಶ್, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ

Exit mobile version