11:12 AM Thursday 4 - September 2025

ಬೆಂಗಳೂರು ವಿವಿ: ‘ಸಂಕ್ರಾಂತಿ ಸಂಭ್ರಮ’ ಆಚರಣೆ

sankranti
18/01/2024

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ‘ಸಂಕ್ರಾಂತಿ ಸಂಭ್ರಮ’ ಹಬ್ಬ ಆಯೋಜಿಸಲಾಗಿತ್ತು.

ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಪ್ರೊ.ಡಾ. ಬಿ. ಶೈಲಶ್ರೀ, ಸಹಾಯಕ ಪ್ರಾಧ್ಯಾಪಕರಾದ ಡಾ. ವಸುಂಧರಾ ಪ್ರಿಯದರ್ಶಿನಿ ಮತ್ತು ಬೋಧಕೇತರ ಸಿಬ್ಬಂದಿಗಳಾದ ನಾಗೇಶ್ ಕೆ.ಎಸ್, ಮಂಜುನಾಥ್, ರವಿ, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವಿ ವಿದ್ಯಾರ್ಥಿ – ವಿದ್ಯಾರ್ಥಿನಿಯರು, ಮತ್ತಿತರ ವಿದ್ಯಾರ್ಥಿ ಸಮೂಹದವರು ಪಾಲ್ಗೊಂಡಿದ್ದರು.

sankranti

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಹಗ್ಗ ಜಗ್ಗಾಟ, ಮಡಿಕೆ ಹೊಡೆಯುವ, ರಂಗೋಲಿ ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಲಾಯಿತು.

ಇತ್ತೀಚಿನ ಸುದ್ದಿ

Exit mobile version