ಬಾಂಬ್ ಬ್ಲಾಸ್ಟ್ ಆದ ನಂತರ ಬಾಂಬರ್ ಹೋಗಿದೆಲ್ಲಿಗೆ?

rameshwaram cafe
07/03/2024

ಬಳ್ಳಾರಿ: ಬೆಂಗಳೂರಿನ ಕೆಫೆಯೊಂದರಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪತ್ತೆ ಹಚ್ಚಲು ಎನ್ ಐಎ ತಂಡ ತನಿಖೆ ಚುರುಕುಗೊಳಿಸಿದೆ.

ಆರೋಪಿಯ ಪತ್ತೆಗಾಗಿ ನಿನ್ನೆ ತುಮಕೂರಿನಲ್ಲಿ ತನಿಖೆ ನಡೆಸಿದ್ದ ಎನ್ ಐಎ ತಂಡ ತಡ ರಾತ್ರಿಯಿಂದ ಬೆಳಗಿನ ಜಾವದವರೆಗೂ ತನಿಖೆ ಮುಂದುವರಿಸಿದ್ದು, ಬಳಿಕ ಬಳ್ಳಾರಿ ನಿಲ್ದಾಣದ ಮಾಹಿತಿ ಪಡೆದುಕೊಂಡಿದೆ.

ಬಳ್ಳಾರಿ ಮತ್ತು ತುಮಕೂರಿನ ಪೊಲೀಸರ ಸಹಕಾರದೊಂದಿಗೆ ಎನ್ ಐಎ ಬಾಂಬರ್ ನ ಪತ್ತೆ ಹಚ್ಚಲು ಬಿರುಸಿನ ತನಿಖೆ ನಡೆಸುತ್ತಿದೆ.

ಬಾಂಬರ್ ಕೃತ್ಯದ ಬಳಿಕ ತುಮಕೂರಿನ ಮೂಲಕ ಬಳ್ಳಾರಿ ಬಸ್ ನಿಲ್ದಾಣಕ್ಕೆ ಬಂದಿದ್ದಾನೆ ಎಂದು ಹೇಳಲಾಗಿದೆ. ಬಳಿಕ ಬಳ್ಳಾರಿ ಬಸ್ ನಿಲ್ದಾಣದಿಂದ ಮಂತ್ರಾಲಯ, ಗೋಕರ್ಣ ಬಸ್ ಮೂಲಕ ಭಟ್ಕಳಕ್ಕೆ ತೆರಳಿದ್ದಾನೆ ಎನ್ನುವ ಶಂಕೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಳ್ಳಾರಿ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ.

ಬಳ್ಳಾರಿಯಿಂದ ಬಾಂಬರ್ ಆಂಧ್ರಕ್ಕೂ ಪ್ರಯಾಣಿಸಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಹಲವು ಶಂಕೆಗಳ ಆಧಾರದಲ್ಲಿ  ಎನ್ ಐಎ ಪೊಲೀಸರು ನಗರದ ಪ್ರತಿ ಪೊಲೀಸ್ ಠಾಣೆಯಲ್ಲೂ ಮಾಹಿತಿ ಪಡೆಯುತ್ತಿದ್ದಾರೆ.

ಸದ್ಯ ಆರೋಪಿಯ ರೇಖಾ ಚಿತ್ರವನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಶೀಘ್ರವೇ ಬಾಂಬರ್ ಎನ್ ಐಎ ಅಧಿಕಾರಿಗಳ ಬಲೆಗೆ ಬೀಳುವ ಸಾಧ್ಯತೆ ಕಂಡು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version