ನಾಡದೋಣಿ ಮೀನುಗಾರರಿಗೆ ಸಮುದ್ರದಲ್ಲಿ ಸಿಕ್ಕಿತು ದೈತ್ಯ ಮೀನು!

big fish
28/09/2023

ದಕ್ಷಿಣ ಕನ್ನಡ: ಮಂಗಳೂರಿನ ಉಳ್ಳಾಲ ಸಮೀಪದ ಸೋಮೇಶ್ವರ ಉಚ್ಚಿಲದ ನಾಡದೋಣಿ ಮೀನುಗಾರರಿಗೆ ದೈತ್ಯ ಗಾತ್ರದ ಪಿಲಿ ತೊರಕೆ ಎಂಬ ಮೀನು ಲಭಿಸಿದೆ.

ಉಚ್ಚಿಲ ಪೆರಿಬೈಲ್ ನಿವಾಸಿ ನಾಡದೋಣಿ ಮೀನುಗಾರರು ಸಮುದ್ರ ತೀರದಲ್ಲಿ ಮೀನಿಗಾಗಿ ಬಲೆ ಹಾಕಿದ್ದು, ಸುಮಾರು 75 ಕೆ.ಜಿ. ತೂಕದ ಮೀನು ಅವರ ಬಲೆಗೆ ಬಿದ್ದಿದೆ. ಈ ವರ್ಷದ ಮೀನುಗಾರಿಕೆ ಅವಧಿಯಲ್ಲಿ ಸಿಕ್ಕ ಅತಿದೊಡ್ಡ ಮೀನು ಇದಾಗಿದೆ.

ಅದರಲ್ಲಿ ಹಲವು ಬಗೆಯ ಮೀನುಗಳು ಬರುವ ಐತಿಹ್ಯವಿದೆ. ಈ ಬಾರಿ ದೊಡ್ಡ ಗಾತ್ರದ ಪಿಲಿತೊರಕೆ ಬಂದಿರುವುದು ಮೀನುಗಾರರಲ್ಲಿ ಉತ್ಸಾಹ ಮೂಡಿಸಿದೆ. ಮಾರಾಟ ಮಾಡುವುದಾದರೆ ಈ ಮೀನಿಗೆ ಕೆ.ಜಿ.ಗೆ 200 ರೂಪಾಯಿ ಬೆಲೆ ಇದೆ.

ಇತ್ತೀಚಿನ ಸುದ್ದಿ

Exit mobile version