ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವ ಮುನ್ನಾ ಫಲಾನುಭವಿಗಳೇ ಎಚ್ಚರಿಕೆ
ಬೆಂಗಳೂರು: ಗ್ಯಾರಂಟಿಗಳಿಗೆ ಅರ್ಜಿ ಸಲ್ಲಿಕೆ ಮಾಡುವವರ ಮಾಹಿತಿಗೆ ಕನ್ನ ಹಾಕಲು ಸೈಬರು ಕಳ್ಳರು ಕಣ್ಣಿಟ್ಟಿದ್ದಾರೆಂದು ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಸಾಕಷ್ಟು ಫೇಕ್ ಲಿಂಕ್‌ಗಳ ಜಾಲ ಕೂಡ ಹರಿದಾಡುತ್ತಿದೆ ಎಂದು ಸೈಬರ್ ತಜ್ಞರಾದ ಶುಭಾ ಮಂಗಳಾ ಮಾಹಿತಿ ನೀಡಿದ್ದಾರೆ.ಈಗಾಗಲೇ ಅರ್ಜಿ ಸಲ್ಲಿಕೆ ಎಲ್ಲೆಲ್ಲಿ ಮಾಡಬಹುದು, ಯಾವ ಲಿಂಕ್‌ನಲ್ಲಿ ಮಾಡಬೇಕು ಎನ್ನುವುದನ್ನು ಸರ್ಕಾರ ಪ್ರಕಟಿಸಿದೆ. ಹೀಗಾಗಿ ಜನ ಕೂಡ ಎಚ್ಚರಿಕೆಯಿಂದ ಇರಬೇಕು.
ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವ ಮುನ್ನಾ ಫಲಾನುಭವಿಗಳು ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ. ಅರ್ಜಿ ಸಲ್ಲಿಕೆಗೆ ಸೇವಾಸಿಂಧು ಪೋರ್ಟಲ್ ಇದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಕಳ್ಳರು, ಈಗ ಫೇಕ್ ಲಿಂಕ್‌ಗಳನ್ನು ಹರಿಯಬಿಡುತ್ತಿದ್ದಾರೆ.
ಅಪ್ಪಿ ತಪ್ಪಿ ಈ ಲಿಂಕ್ ಕ್ಲಿಕ್ ಮಾಡಿ, ಬ್ಯಾಂಕ್ ಖಾತೆ ವಿವರಗಳನ್ನು ನೀಡಿದರೆ, ಬ್ಯಾಂಕ್‌ನಲ್ಲಿರುವ ದುಡ್ಡು ಸೈಬರ್ ಚೋರರ ಪಾಲಾಗೋದು ಖಚಿತ. ಹೀಗಾಗಿ ಜನ ತುಂಬಾ ಎಚ್ಚರಿಕೆಯಿಂದ ಅರ್ಜಿ ಸಲ್ಲಿಕೆ ಮಾಡಬೇಕು. ಸಿಕ್ಕ ಸಿಕ್ಕ ಲಿಂಕ್‌ಗಳಲ್ಲಿ ಸಲ್ಲಿಕೆ ಮಾಡಬಾರದು ಎಂದೆಚ್ಚರಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























