11:43 PM Saturday 18 - October 2025

ಬಿಗ್ ಬಾಸ್ ನಿರೂಪಣೆಯಿಂದ ಹಿಂದೆ ಸರಿದ ಸುದೀಪ್ | ಕಾರಣ ಏನು ಗೊತ್ತಾ?

sudeep
16/04/2021

ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ ಮಾಡುತ್ತಿರುವ ನಟ ಕಿಚ್ಚ ಸುದೀಪ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ವಾರದ ಕಥೆ ಹೇಳಲು ಈ ಬಾರಿ ಕಿಚ್ಚ ಹಾಜರಾಗುವುದಿಲ್ಲ ಎಂದು ಹೇಳಲಾಗಿದೆ.

ಈ ವಾರದ ಬಿಗ್ ಬಾಸ್ ಶೋ ನಿರೂಪಣೆಯಿಂದ ಕಿಚ್ಚ ಸುದೀಪ್ ಹಿಂದೆ ಸರಿದಿದ್ದು, ಅನಾರೋಗ್ಯದಿಂದ ಬಳಲುತ್ತಿರುವುದರಿಂದ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎಂದು ಕಿಚ್ಚ ಸುದೀಪ್ ಸ್ವತಃ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ವೀಕೆಂಡ್​ಗೂ ಮೊದಲು ನನ್ನ ಆರೋಗ್ಯ ಸುಧಾರಿಸಬಹುದು ಎಂದು ಅಂದಾಜಿಸಿದ್ದೆ. ಆದರೆ ನನ್ನ ವೈದ್ಯರು ನನಗೆ ವಿಶ್ರಾಂತಿಯ ಅವಶ್ಯಕತೆ ಹೆಚ್ಚಿದೆ ಎಂದು ಹೇಳಿದ್ದಾರೆ. ಹೀಗಾಗಿ ನಾನು ಈ ಬಾರಿಯ ವೀಕೆಂಡ್​​ ಬಿಗ್​ಬಾಸ್​ ಶೋ ಮಿಸ್​ ಮಾಡಿಕೊಳ್ಳಲಿದ್ದೇನೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಬಿಗ್​ ಬಾಸ್​​ ನ ಕ್ರಿಯೇಟಿವ್​ ಟೀಂ ಈ ವಾರದ ಎಲಿಮಿನೇಷನ್​ಗೆ ಯಾವ ರೀತಿಯಲ್ಲಿ ಪ್ಲಾನ್​ ಮಾಡಬಹುದು ಎಂದು ನೋಡೋದಕ್ಕೆ ಉತ್ಸುಕನಾಗಿದ್ದೇನೆ ಎಂದು ಕೂಡ ಸುದೀಪ್ ತಮ್ಮ ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ.

ಸುದೀಪ್ ಅವರು ಯಾವ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿಗಳು ಈವರೆಗೆ ತಿಳಿದು ಬಂದಿಲ್ಲ. ಸುದೀಪ್ ಅನಾರೋಗ್ಯದ ಹಿನ್ನೆಲೆಯಲ್ಲಿ ಬಿಗ್ ಬಾಸ್ 8ನೇ ಸೀಸನ್ ಅವಸ್ಥೆ ಏನಾಗಬಹುದು ಎಂಬ ಮಾತುಗಳೂ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ

Exit mobile version