12:41 AM Thursday 21 - August 2025

ಅತ್ತೆಯೊಂದಿಗೆ ಅಕ್ರಮ ಸಂಬಂಧ: ಪತ್ನಿಗೂ ಅಳಿಯನಿಗೂ ವಿವಾಹ ಮಾಡಿಸಿದ ಮಾವ!

video viral
30/04/2024

ಬಿಹಾರ: ಅಳಿಯನ ಜೊತೆಗೆ ಅಕ್ರಮ ಸಂಬಂಧ ಹೊಂದಿದ ಪತ್ನಿಯನ್ನು ಪತಿಯೇ ತನ್ನ ಅಳಿಯನಿಗೆ ವಿವಾಹ ಮಾಡಿಕೊಟ್ಟ ಪ್ರಸಂಗವೊಂದು ಬಿಹಾರದ ಬಂಕಾದಲ್ಲಿ ನಡೆದಿದ್ದು, ಈ ಘಟನೆ ಅಚ್ಚರಿಗೆ ಕಾರಣವಾಗಿದೆ.

ಇಲ್ಲಿನ ನಿವಾಸಿ ದಿಲೇಶ್ವರ್ ದರ್ವೆ ಎಂಬವರ ಪತ್ನಿ ಗೀತಾದೇವಿ(45) ತನ್ನ ಅಳಿಯ ಸಿಕಂದರ್ ಯಾದವ್ ಜೊತೆಗೆ ಅಕ್ರಮ ಸಂಬಂಧದಲ್ಲಿದ್ದ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಪತಿಗೆ ಸಿಕ್ಕಿ ಬಿದ್ದಿದ್ದರು. ಈ ವಿಚಾರ ಊರಿಡೀ ಸುದ್ದಿಯಾದ ಬಳಿಕ ಗ್ರಾಮಸ್ಥರು ಸೇರಿ ಇವರಿಬ್ಬರಿಗೂ ಮದುವೆ ಮಾಡಿಸಿದ್ದಾರೆ.

ಅಳಿಯ ಸಿಕಂದರ್ ಯಾದವ್ ತನ್ನ ಪತ್ನಿಯನ್ನು ಕಳೆದುಕೊಂಡಿದ್ದ. ಹೀಗಾಗಿ ಅತ್ತೆ ಮನೆಯಲ್ಲಿ ವಾಸವಿದ್ದ. ಕಳೆದ ಕೆಲವು ತಿಂಗಳುಗಳಿಂದ ಅತ್ತೆ ಹಾಗೂ ಅಳಿಯ ಹತ್ತಿರವಾಗಿದ್ದರು. ಈ ಬಗ್ಗೆ ಪತಿಗೆ ಅನುಮಾನ ಬಂದಿದ್ದು, ಇವರು ಅಕ್ರಮ ಸಂಬಂಧದಲ್ಲಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಹಿಡಿದು, ಪಂಚಾಯತ್ ಗೆ ಒಪ್ಪಿಸಿದ್ದಾರೆ. ಈ ವೇಳೆ ಅತ್ತೆಯೊಂದಿಗಿನ ಪ್ರೀತಿಯನ್ನು ಸಿಕಂದರ್ ಯಾದವ್ ಧೈರ್ಯದಿಂದ ಹೇಳಿಕೊಂಡಿದ್ದಾನೆ. ಹೀಗಾಗಿ ಸಿಕಂದರ್ ಹಾಗೂ ಗೀತಾದೇವಿಗೆ ಗ್ರಾಮಸ್ಥರು ವಿವಾಹ ಮಾಡಿಸಿದ್ದಾರೆ. ಇವರ ವಿವಾಹದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version