12:07 AM Friday 19 - December 2025

ಜೈನಮುನಿಗಳ ಮೃತದೇಹ ಸಾಗಿಸಿದ್ದ ಬೈಕ್ ಜಪ್ತಿ

kamakumaranandi maharaja
13/07/2023

ಜೈನಮುನಿ ಕಾಮಕುಮಾರನಂದಿ ಮಹಾರಾಜರ ಹತ್ಯೆ ನಂತರ ಆರೋಪಿಗಳು ಮೃತದೇಹ ಸಾಗಿಸಲು ಬಳಸಿದ ಬೈಕ್ ಅನ್ನು ಚಿಕ್ಕೋಡಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಚಿಕ್ಕೋಡಿಯಲ್ಲಿ ಬೈಕ್‌ಗೆ ಪೆಟ್ರೋಲ್ ಹಾಕಿಸಿಕೊಂಡು ಆಶ್ರಮದತ್ತ ಪ್ರಯಾಣ ಕೈಗೊಂಡ ಆರೋಪಿಗಳು ಆಶ್ರಮದಲ್ಲಿ ಮೊದಲು ಜೈನಮುನಿಗೆ ಕರೆಂಟ್ ಶಾಕ್ ನೀಡಿ ಕೊಲ್ಲಲು ಯತ್ನಿಸಿದ್ದರು.

ಬಳಿಕ ಟವೆಲ್‌ ನಿಂದ ಕುತ್ತಿಗೆ ಬಿಗಿದು ಕಾಮಕುಮಾರನಂದಿ ಮಹಾರಾಜರ ಹತ್ಯೆ ಮಾಡಿದ್ದಾರೆ. ಹತ್ಯೆಗೈದು ಚೀಲದಲ್ಲಿ ಮೃತದೇಹ ಕಟ್ಟಿ ಬೈಕ್‌ ನಲ್ಲಿ ಹೊತ್ತೊಯ್ದಿದ್ದರು. ಜೈನಮುನಿ ಬಳಸುತ್ತಿದ್ದ ಎರಡು ಮೊಬೈಲ್ ಅಲ್ಲೇ ಬಿಟ್ಟು ಅವರ ಡೈರಿ ತೆಗೆದುಕೊಂಡಿದ್ದರು.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version