ವಿಶ್ವ ಶೌಚಾಲಯ ದಿನದಂದು ಬ್ರಸೆಲ್ಸ್ ನ ಚರಂಡಿಗೆ ಇಳಿದ ಬಿಲಿಯನೇರ್ ಬಿಲ್ ಗೇಟ್ಸ್..!

22/11/2023

ವಿಶ್ವ ಶೌಚಾಲಯ ದಿನದ ಅಂಗವಾಗಿ ಅಮೆರಿಕಾದ ಬಿಲಿಯಾಧಿಪತಿ ಬಿಲ್‌ ಗೇಟ್ಸ್‌ ಅವರು ಬ್ರಸ್ಸೆಲ್ಸ್‌ನ ಒಳಚರಂಡಿಯೊಂದಕ್ಕೆ ಇಳಿದ ಘಟನೆ ನಡೆದಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತ ವೀಡಿಯೋ ಶೇರ್‌ ಮಾಡಿದ ಬಿಲ್‌ ಗೇಟ್ಸ್‌,  ಒಳಚರಂಡಿಯನ್ನು ಪ್ರವೇಶಿಸಿ ಬ್ರಸ್ಸೆಲ್ಸ್‌ ನಗರದ ಒಳಚರಂಡಿ ವ್ಯವಸ್ಥೆಯ ಇತಿಹಾಸವನ್ನು ಅನ್ವೇಷಿಸಿರುವುದಾಗಿ ಹೇಳಿದ್ದಾರೆ. ಇದೇ ವೇಳೆ ಒಳ ಚರಂಡಿಯು ಗಬ್ಬು ನಾರುವುದಾಗಿ ಹೇಳಿಕೊಂಡ ಅವರು ನಗರದ ಒಳಚರಂಡಿ ವ್ಯವಸ್ಥೆಯ ಕುರಿತಂತೆ ಅವರು ತಂತ್ರಜ್ಞರ ಜೊತೆ ಚರ್ಚೆ ಕೂಡಾ ನಡೆಸಿದ್ದಾರೆ.

ನಗರದಲ್ಲಿ 200 ಮೈಲಿ ಉದ್ದದ ಒಳಚರಂಡಿ ಜಾಲ ಇದ್ದು, ಇದು ನಗರದ ತ್ಯಾಜ್ಯಗಳನ್ನು ಸಂಸ್ಕರಿಸುವ ಘಟಕಗಳನ್ನು ಸಹ ಒಳಗೊಂಡಿದೆ. ನೈರ್ಮಲ್ಯ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನಿಟ್ಟುಕೊಂಡು ಬಿಲ್‌ ಗೇಟ್ಸ್‌ ಹಲವಾರು ಇಂತಹ ತಂತ್ರಗಳನ್ನೂ ಈ ಹಿಂದೆ ಕೂಡಾ ಮಾಡಿದ್ದರು.

ಇತ್ತೀಚಿನ ಸುದ್ದಿ

Exit mobile version