ಬುರ್ಖಾ ಮತ್ತು ಮಾಸ್ಕ್ ಧರಿಸಿ ಬರುವ ಮತದಾರರನ್ನು ಪರಿಶೀಲಿಸಿ: ಚುನಾವಣಾಧಿಕಾರಿಗೆ ಬಿಜೆಪಿ ಮನವಿ

23/05/2024

ಬುರ್ಖಾ ಮತ್ತು ಮಾಸ್ಕ್ ಧರಿಸಿ ಬರುವ ಮತದಾರರನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಈ ಕುರಿತಂತೆ ಮುಖ್ಯ ಚುನಾವಣಾ ಅಧಿಕಾರಿಗೆ ಅದು ಮನವಿ ಸಲ್ಲಿಸಿದೆ.

ಮೇ 25ರಂದು ದೆಹಲಿಯಲ್ಲಿ ನಡೆಯುವ ಮತದಾನದ ವೇಳೆ ಬುರ್ಖಾ ಮತ್ತು ಮಾಸ್ಕ್ ಧರಿಸಿದವರನ್ನು ಮಹಿಳಾ ಅಧಿಕಾರಿಗಳ ನೆರವಿನಿಂದ ಪರಿಶೀಲನೆ ನಡೆಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ದೆಹಲಿಯಲ್ಲಿ ಏಳು ಲೋಕಸಭಾ ಕ್ಷೇತ್ರಗಳಿಗೆ ಮೇ 25 ರಂದು ಚುನಾವಣೆ ನಡೆಯಲಿದ್ದು ಇಂತಹ ಪರಿಶೀಲನೆಯು ನಕಲಿ ಮತದಾನವನ್ನು ತಡೆಯುವುದಕ್ಕೆ ನೆರವಾಗುತ್ತದೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ. ಹೈದರಾಬಾದಿನಲ್ಲಿ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಮತದಾರರ ಮುಖ ಪರದೆಯನ್ನು ಸರಿಸಿ ಪರಿಶೀಲಿಸಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version