ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ರೈತರ ಪರ ಬಿಜೆಪಿ ಹೋರಾಟ: ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ

ಬೆಂಗಳೂರು: ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ರೈತರ ಪರ ಬಿಜೆಪಿ ಹೋರಾಟ ನಡೆಸಲಿದೆ. ಈ ಬಗ್ಗೆ ಇಂದು ರಾಜ್ಯ ಬಿಜೆಪಿ ಕಚೇಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ನಿತ್ಯ ಎಲ್ಲ ಪತ್ರಿಕೆಗಳಲ್ಲೂ ನುಡಿದಂತೆ ನಡೆದ ಸರ್ಕಾರ ಎಂಬ ಜಾಹೀರಾತು ನೋಡುತ್ತಿದ್ದೇವೆ.ಆದರೆ ಇದು ನುಡಿದಂತೆ ನಡೆಯದ ಸರ್ಕಾರ. ಈ ನುಡಿದಂತೆ ನಡೆದ ಸರ್ಕಾರವನ್ನು ಎಚ್ಚರಿಸಬೇಕಿದೆ. ರಾಜ್ಯದಲ್ಲಿ ರೈತರ ಸಮಸ್ಯೆಗಳೇನು? ಮಳೆ ಕೊರತೆಯಿಂದ ರೈತರು ಯಾವ ರೀತಿ ಪರದಾಡುತ್ತಿದ್ದಾರೆ? ಬರದ ಛಾಯೆ ಈ ಎಲ್ಲದರ ಬಗ್ಗೆ ಸರ್ಕಾರವನ್ನು ಎಚ್ಚರಿಸಬೇಕಿದೆ ಎಂದರು.
ರಾಜ್ಯದಲ್ಲಿ ಭೀಕರ ಬರದ ಛಾಯೆ ಆವರಿಸಿದೆ.196 ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರದ ವಾತಾವರಣ ಇದೆ.ತುರ್ತಾಗಿ ತೀರ್ಮಾನ ತಗೊಂಡು ಮುಂದೆ ಹೋಗಬೇಕಾದ ಸರ್ಕಾರಕ್ಕೆ ಮಂಪರು ಕವಿದಿದೆ.ಈ ಸರ್ಕಾರ ಆಮೆ ನಡಿಗೆಯಲ್ಲಿ ಸಾಗುತ್ತಿದೆ. ಮುಂದೆ ಏನೇ ಅನಾಹುತ ಆದರೂ ಸರ್ಕಾರವೇ ಹೊಣೆ ಎಂದು ಗುಡುಗಿದರು.
ಬರದ ವಿಚಾರಕ್ಕೆ ನಿರಂತರ ಸಮೀಕ್ಷೆ ನಡೆದಿದೆ. ಮಾಧ್ಯಮಗಳೂ ಬರದ ಬಗ್ಗೆ ಸರ್ಕಾರ ಎಚ್ಚರಿಸುತ್ತಿವೆ.
ಇಷ್ಟಾದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ರೋಮ್ ದೇಶ ಹೊತ್ತಿ ಉರಿಯುತ್ತಿರುವಾಗ ದೊರೆ ನೀರೋ ಪಿಟೀಲು ನುಡಿಸುತ್ತಿದ್ದನಂತೆ. ಈ ಮಾತು ಈ ಸರ್ಕಾರಕ್ಕೆ ಅನರ್ಥವಾಗುತ್ತದೆ. ಇಂತ ಪರಿಸ್ಥಿತಿ ಹರಾಜ್ಯದಲ್ಲಿ ಮನೆ ಮಾಡಿದೆ.ರಾಜ್ಯದ ಜನರ, ರೈತರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ.ಈ ಸರ್ಕಾರದವರು ದುಂದು ವೆಚ್ಚ ಮಾಡಿಕೊಂಡು, ಗ್ಯಾರಂಟಿ ಜಾರಿಯಲ್ಲಿ ಜಾತ್ರೆ ಮಾಡಿಕೊಂಡು ಮುಳುಗಿದ್ದಾರೆ. ಹವಾಮಾನ ತಜ್ಞರು ಎಚ್ಚರಿಕೆ ಕೊಟ್ಟರೂ ಈ ಕಿವುಡ ಸರ್ಕಾರ ತಜ್ಞರ ಮಾತನ್ನು ಗಣನೆಗೆ ತೆಗೆದು ಕೊಂಡಿಲ್ಲ.ಇದು ರೈತ ವಿರೋಧಿ ಸರ್ಕಾರ.ಮಂತ್ರಿಗಳು ಬರದ ಪರಿಸ್ಥಿತಿಯನ್ನು ಹಗುರವಾಗಿ ತಗೊಂಡಿದ್ದಾರೆ ಎಂದರು.
ಇದೇ ವೇಳೆ ಹಾವೇರಿಯಲ್ಲಿ ರೈತರ ಆತ್ಮಹತ್ಯೆ ಕುರಿತಾಗಿ ಸಚಿವ ಶಿವಾನಂದ ಪಾಟೀಲ್ ಅವರಾಡಿದ ಮಾತಿಗೆ ಕಿಡಿಕಾರಿದ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ, ನಿನ್ನೆ ಒಬ್ಬ ಸಚಿವ ರೈತರು ಪರಿಹಾರದ ಆಸೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದಿರುವುದು ಆ ಸಚಿವರಿಗೆ ಅಧಿಕಾರದ ಮದ ಏರಿದೆ ಎಂದು ಕಿಡಿಕಾರಿದರು. ಸಚಿವ ಶಿವಾನಂದ್ ಪಾಟೀಲರ ಕ್ಷಮೆಗೆ ಆಗ್ರಹಿಸಿದರು.
ಸರ್ಕಾರ ಪ್ರತೀ ಹಂತದಲ್ಲೂ ಕೇಂದ್ರವನ್ನೇ ದೂರುತ್ತಿದೆ. ಹಿಂದೆ ಅಕ್ಕಿ ವಿಚಾರದಲ್ಲಿ ಕೇಂದ್ರವನ್ನು ದೂರಿದರು. ಈಗ ಎರಡನೇ ಹಂತದಲ್ಲಿ ಚಾಲಾಕಿನಿಂದ ಬರ ನಿಯಮಗಳ ಸಡಿಲಿಕೆಗೆ ಪತ್ರ ಬರೆದಿದ್ದಾರೆಇದರ ಹಿಂದೆ ಉದ್ದೇಶ ಇಲ್ಲ ದುರುದ್ದೇಶ ಇದೆ. ಡಿಕೆಶಿ ಮೇಕೆದಾಟು ಪಾದಯಾತ್ರೆ ನಾಟಕ ಆಡಿದರು. ಈ ಬಜೆಟ್ನಲ್ಲಿ ಮೇಕೆದಾಟುವಿಗೆ ಎಷ್ಟು ಹಣ ಇಟ್ಟಿದ್ದಾರೆ ?ಎಂದು ಪ್ರಶ್ನಿಸಿದರು.
ಕಾವೇರಿ ರೈತರ ಧ್ವನಿ, ಹೋರಾಟಗಾರರ ಧ್ವನಿ ಹುದುಗಿಸುವ ಕೆಲಸ ಮಾಡುತ್ತಿದ್ದಾರೆ. ರೈತ ಹೋರಾಟಗಾರರಿಗೆ ಇಷ್ಟು ದಿನ ಎಲ್ಲಿದ್ದೀರಿ ಎಂದು ಪ್ರಶ್ನೆ ಮಾಡುತ್ತಾರಷ್ಟೆ.ಸರ್ಕಾರಕ್ಕೆ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕಳಕಳಿ ಇಲ್ಲ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಪದೇ ಪದೇ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಯಡಿಯೂರಪ್ಪ ಅವರೊಬ್ಬರೇ ಮುಖ್ಯಮಂತ್ರಿಯಾಗಿದ್ದಾಗ ಈಮ ಪ್ರವಾಹ ಪರಿಸ್ಥಿತಿ ವೇಳೆ ಓಡಾಡಿದರೇ ಹೊರತು ಕೇಂದ್ರದ ಹಣಕ್ಕೆ ಕಾಯಲಿಲ್ಲ. ತಾವೇ ಪರಿಹಾರ ಹಣ ಘೋಷಣೆ ಮಾಡಿದರು.
ಒಂದೇ ತಿಂಗಳು ಅಕ್ಕಿ ಹಣ ಜಮೆ ಆಗಿದೆ. ಈ ತಿಂಗಳ ಹಣ ಜಮೆ ಆಗಿಲ್ಲ.ಇದರ ಜೊತೆಗೆ ಬರ ವಿಚಾರಕ್ಕೆ ಕೇಂದ್ರಕ್ಕೆ ಕಾಂಗ್ರೆಸ್ ಸರ್ಕಾರ ಪತ್ರ ಬರೆದು ಕೈಕಟ್ಟಿ ಕೂತಿದ್ದಾರೆ. ಕಳೆದ ವಾರವೇ ಬರ ತಾಲ್ಲೂಕುಗಳ ಘೋಷಣೆ ಮಾಡಬೇಕಿತ್ತು. ಆದರೆ ಇವರು ಹಾಗೇ ಮಾಡಲಿಲ್ಲ. ರೈತರು ಬರ ಘೋಷಣೆ ಮಾಡುತ್ತಾರೆಂದು ಎದುರು ನೋಡುತ್ತಿದ್ದಾರೆ.ರಾಜ್ಯ ಸರ್ಕಾರ ಬರಘೋಷಣೆ ಮುಂದೂಡಿದ್ದಾರೆ.
ಗ್ಯಾರಂಟಿಗಳ ಜಾರಿಯ ಜಾತ್ರೆಯೇ ಇವರಿಗೆ ಮುಖ್ಯ .ಅಧಿಕಾರಿಗಳನ್ನು ಗ್ಯಾರಂಟಿಗಳ ಜಾರಿಯಲ್ಲಿ ತೊಡಗಿಸಿಕೊಂಡಿದೆ ಸರ್ಕಾರ. ಜನರ, ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶ ಇವರಿಗಿಲ್ಲ ಎಂದು ಬಿ.ವೈ.ವಿಜಯೇಂದ್ರ ಕಿಡಿಕಾರಿದರು.