ರಾಹುಲ್ ಗಾಂಧಿಯನ್ನು ಹೊಗಳಿದ ಬಿಜೆಪಿ ನಾಯಕಿ: ಮೋದಿಗಿಂತ ರಾಹುಲ್ ಬೆಸ್ಟ್ ಎಂದ ಮಣಿಪುರದ ಕೇಸರಿ ನಾಯಕಿ..!

01/07/2023

ರಾಹುಲ್ ಗಾಂಧಿಯ ಮಣಿಪುರ ಭೇಟಿಯನ್ನು ಹೊಗಳುವ ಮೂಲಕ ಬಿಜೆಪಿ ನಾಯಕಿ ಅಚ್ಚರಿ ಮೂಡಿಸಿದ್ದಾರೆ. ರಾಹುಲ್ ಗಾಂಧಿಯನ್ನು ಮಣಿಪುರ ಬಿಜೆಪಿಯ ಅಧ್ಯಕ್ಷೆ ಶಾರದಾ ದೇವಿ ಹೊಗಳಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ.
ಈ ಸಂದರ್ಭದಲ್ಲಿ ರಾಜ್ಯದಲ್ಲಿ ಶಾಂತಿಯನ್ನು ಸ್ಥಾಪಿಸುವುದಕ್ಕಾಗಿ ಪ್ರತಿಯೊಬ್ಬರೂ ಪ್ರಯತ್ನಿಸಬೇಕಾಗಿದೆ. ಈ ಗಲಭೆಯನ್ನು ರಾಜಕೀಯಗೊಳಿಸಬಾರದು ಎಂದವರು ತಿಳಿಸಿದ್ದಾರೆ.
ಕಳೆದ ಎರಡು ತಿಂಗಳಿಗಿಂತಲೂ ಅಧಿಕ ಸಮಯದಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಗೃಹ ಸಚಿವರು ಒಂದಕ್ಕಿಂತ ಹೆಚ್ಚು ಭಾರಿ ಭೇಟಿ ನೀಡಿ ಮತ್ತು ಹಲವು ಮಾತುಕತೆಗಳನ್ನು ನಡೆಸಿದ ಬಳಿಕವೂ ಗಲಭೆ ತಣಿಯುತ್ತಿಲ್ಲ. ಈ ನಡುವೆ ರಾಹುಲ್ ಗಾಂಧಿ ಮಣಿಪುರಕ್ಕೆ ಭೇಟಿ ನೀಡಿದ್ದಾರೆ. ಅವರ ಭೇಟಿಗೆ ಮಣಿಪುರ ಜನತೆ ವ್ಯಾಪಕ ಸ್ವಾಗತವನ್ನು ಕೋರಿತ್ತು. ಅವರು ಸಂತ್ರಸ್ತರ ಜೊತೆ ಬೆರೆತು ಅವರ ಅಹವಾಲುಗಳನ್ನು ಆಲಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಈವರೆಗೆ ಮಣಿಪುರದ ಬಗ್ಗೆ ಒಂದೇ ಒಂದು ಮಾತನ್ನು ಆಡದಿರುವುದು ಮತ್ತು ಅಲ್ಲಿಗೆ ಭೇಟಿ ಕೊಡದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

 

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version