ಪ್ರಶ್ನೆ ಕೇಳಿದ್ದಕ್ಕೆ ಗರಂ: ಟಿವಿ ವರದಿಗಾರ್ತಿ ಜೊತೆಗೆ ಬಿಜೆಪಿ ಸಂಸದನ ಅನುಚಿತ ವರ್ತನೆ; ವ್ಯಾಪಕ ಟೀಕೆ

11/07/2023

ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ವರದಿಗಾರ್ತಿಯೊಂದಿಗೆ ಅನುಚಿತ ವರ್ತನೆ ತೋರಿದ ಘಟನೆ ನಡೆದಿದೆ.

ಬ್ರಿಜ್‌ ಭೂಷಣ್‌ ವಿರುದ್ಧ ಮಾಡಲಾಗಿರುವ ಆರೋಪಗಳ ಕುರಿತು ವರದಿಗಾರ್ತಿಯೊಬ್ಬರು ಸರಣಿ ಪ್ರಶ್ನೆಗಳನ್ನು ಕೇಳಿದಾಗ ಸಂಸದ ಬ್ರಿಜ್‌ ಭೂಷಣ್‌ ಕೋಪಗೊಂಡಿದ್ದಾರೆ.

ಉತ್ತರವನ್ನು ಪಡೆಯಲು ವರದಿಗಾರ್ತಿ ಸಿಂಗ್ ಅವರ ಕಾರಿನವರೆಗೆ ಹಿಂಬಾಲಿಸಿದ್ದಾರೆ. ಸಂಸದ ಬ್ರಿಜ್‌ ಭೂಷಣ್‌ ಕಾರಿನ ಬಾಗಿಲನ್ನು ಜೋರಾಗಿ ಹಾಕಿದ್ದಾರೆ. ಇದರಿಂದ ವರದಿಗಾರ್ತಿಯ ಕೈಯಿಂದ ಮೈಕ್‌ ಕೆಳಕ್ಕೆ ಬಿದ್ದು ಒಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಸಂಸದರೊಬ್ಬರು ಮಹಿಳೆಯೊಂದಿಗೆ ಸಾರ್ವಜನಿಕವಾಗಿ ನಡೆದುಕೊಂಡ ರೀತಿಗೆ ಟೀಕೆ ವ್ಯಕ್ತವಾಗಿದೆ.

ಘಟನೆಯ ವೀಡಿಯೊವನ್ನು ಹಂಚಿಕೊಂಡಿರುವ ಭಾರತೀಯ ಯುವ ಕಾಂಗ್ರೆಸ್ ಮುಖ್ಯಸ್ಥ ಶ್ರೀನಿವಾಸ್ ಬಿವಿ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿಯನ್ನು ಉಲ್ಲೇಖಿಸಿ ʼಇದು ಯಾರ ಸಂಸ್ಕಾರ..?ʼ ಪ್ರಶ್ನಿಸಿದ್ದಾರೆ.

ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಪ್ರತಿಕ್ರಿಯಿಸಿ ಬ್ರಿಜ್‌ ಭೂಷಣ್‌ ರನ್ನು ‘ಗೂಂಡಾ’ ಎಂದು ಕರೆದಿದ್ದಾರೆ.

‘ಕ್ಯಾಮೆರಾದಲ್ಲಿ ಮಹಿಳಾ ವರದಿಗಾರರೊಂದಿಗೆ ಈ ರೀತಿ ವರ್ತಿಸುವ ಧೈರ್ಯ ಇರುವಾಗ ಕ್ಯಾಮೆರಾದ ಹೊರಗೆ ಮಹಿಳೆಯರೊಂದಿಗೆ ಆತ ಹೇಗೆ ವರ್ತಿಸುತ್ತಾನೆಂದು ಊಹಿಸಿ. ಈ ಮನುಷ್ಯನ ಸ್ಥಾನವು ಜೈಲಿನಲ್ಲಿದೆ, ಸಂಸತ್ತಿನಲ್ಲಿ ಅಲ್ಲ!ʼ ಎಂದು ಸ್ವಾತಿ ಟ್ವೀಟ್‌ ಮಾಡಿದ್ದಾರೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version