4:30 PM Tuesday 18 - November 2025

ಸಿದ್ದರಾಮಯ್ಯ ಪುತ್ರ ಯತೀಂದ್ರರನ್ನು  ಶ್ಯಾಡೋ ಸಿಎಂ ಎಂದ ಬಿಜೆಪಿ!

shadow cm
11/07/2023

ಬೆಂಗಳೂರು: ಮಾಜಿ ಶಾಸಕ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರರನ್ನು ಬಿಜೆಪಿ ಶ್ಯಾಡೋ ಸಿಎಂ ಎಂದು ವ್ಯಂಗ್ಯವಾಡಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜ್ ಬಿಜೆಪಿ, ಯತೀಂದ್ರ ಅವರ ಅತಿಯಾದ ಹಸ್ತಕ್ಷೇಪದಿಂದ, ಮುಖ್ಯಮಂತ್ರಿ ಮತ್ತು ಸಚಿವರುಗಳ ಮಧ್ಯೆ ಈಗಾಗಲೇ ಆಂತರಿಕ ಸಂಘರ್ಷ ಶುರುವಾಗಿದೆ

ರಾಜ್ಯದ ಎಟಿಎಂ ಸರ್ಕಾರದ ವರ್ಗಾವಣೆ ದಂಧೆಯಲ್ಲಿ ಶ್ಯಾಡೋ ಸಿಎಂ ಯತೀಂದ್ರರಿಂದ ಈಗಾಗಲೇ ಆಂತರಿಕ ಸಂಘರ್ಷ ಸಿದ್ದರಾಮಯ್ಯರವರು ಅಂತಿಮಗೊಳಿಸಿ ನೇಮಿಸಿದ ಅಧಿಕಾರಿಗಳಿಗೆ, ಸಂಬಂಧಪಟ್ಟ ಸಚಿವರು ಅಧಿಕಾರ ಸ್ವೀಕರಿಸಲು ಬಿಡದೇ ಅಧಿಕಾರಿಗಳನ್ನು ಸತಾಯಿಸುತ್ತಿದ್ದಾರೆಂದು ಆರೋಪ ಮಾಡಿದೆ.

ಅವಮಾನಗೊಂಡ ಅಧಿಕಾರಿಗಳು ಈ ಬಗ್ಗೆ ಸಿಎಂಗೆ ಸಚಿವರ ವಿರುದ್ಧ ದೂರು ನೀಡುತ್ತಿದ್ದು, ಕಾರ್ಯಾಂಗ ಮತ್ತು ಸಚಿವಾಂಗದ ಮಧ್ಯೆ ಬಿಕ್ಕಟ್ಟು ಏರ್ಪಡುವ ಸಾಧ್ಯತೆ ನಿಚ್ಚಳವಾಗಿದೆ. ಸಿಎಂ ಆಪ್ತ ಬಣ ಹಾಗೂ ಸಿಎಂ ವಿರೋಧಿ ಬಣದ ಹಗ್ಗ ಜಗ್ಗಾಟದಲ್ಲಿ ಅಧಿಕಾರಿಗಳು ಹೈರಾಣಾಗಿದ್ದಾರೆ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಟ್ವಿಟ್ಟರ್‌ನಲ್ಲಿ ಬಿಜೆಪಿ ಹೇಳಿದೆ.

ಸಿಎಂ ಮತ್ತು ಶ್ಯಾಡೋ ಸಿಎಂರವರೇ ವರ್ಗಾವಣೆ ದಂಧೆಯನ್ನು ಕೈಗೆತ್ತಿಕೊಂಡಿರುವುದರಿಂದ ಸಚಿವರ ಜೇಬುಗಳು ತುಂಬುತಿಲ್ಲ. ಹೀಗಾಗಿ ಅಧಿಕಾರಿಗಳು ತಮ್ಮ ಹುದ್ದೆಗಳನ್ನು ರಕ್ಷಿಸಿಕೊಳ್ಳಲು ಈಗ ಸಚಿವರ ಜೇಬನ್ನು ಸಹ ತುಂಬಿಸಬೇಕಾಗಿದೆ. ರಾಜ್ಯದ ಜನರ ಹಿತ ಕಾಯುತ್ತೇವೆ ಎಂದು ಸುಳ್ಳು ಹೇಳಿಕೊಂಡು ಅಧಿಕಾರ ಪಡೆದ ಕಾಂಗ್ರೆಸ್, ಈಗ ವರ್ಗಾವಣೆ ದಂಧೆಯಿಂದ ಕರ್ನಾಟಕದಲ್ಲಿ ಭರ್ಜರಿ ಲೂಟಿಗಿಳಿದಿದೆ ಎಂದು ಆರೋಪಿಸಿದೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/CnfTzNYsUl5CgUXEpffmDp

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version