ಬಿಜೆಪಿ ಸಂಗ ತೊರೆದ ನಿತೀಶ್ ಕುಮಾರ್:  ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ

nithish kumar
09/08/2022

ಬಿಹಾರ: ಬಿಜೆಪಿ ಜೊತೆಗಿನ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡ ಬಳಿಕ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಮಂಗಳವಾರ ರಾಜ್ಯಪಾಲ ಫಾಗು ಚೌಹಾನ್ ಅವರಿಗೆ  ರಾಜೀನಾಮೆಯನ್ನು ಸಲ್ಲಿಸಿದ್ದು, ಈ ಮೂಲಕ ಎನ್ ಡಿಎ ಮಿತ್ರಕೂಟ ತೊರೆದಿದ್ದಾರೆ.

ಜೆಡಿಯುವನ್ನು ಒಡೆಯಲು ಬಿಜೆಪಿ ಸಂಚು ನಡೆಸುತ್ತಿದೆ ಎನ್ನುವ ಬೆಳವಣಿಗೆಯ ನಂತರ ಬಿಜೆಪಿಯೊಂದಿಗಿನ ಮೈತ್ರಿಯನ್ನು ರದ್ದುಗೊಳಿಸುವುದಾಗಿ ನಿತೀಶ್ ಹೇಳಿದ್ದಾರೆ. ಪಕ್ಷದ ಶಾಸಕರು ಹಾಗೂ ಸಂಸದರ ಒಮ್ಮತದ ನಿರ್ಧಾರದೊಂದಿಗೆ ನಿತೀಶ್ ಕುಮಾರ್ ಅವರು ಈ ನಿರ್ಧಾರವನ್ನು  ಕೈಗೊಂಡಿದ್ದಾರೆ.

ಬಿಹಾರದಲ್ಲಿ ಇದೀಗ ಆರ್ ಜೆಡಿಯೊಂದಿಗೆ ಜೆಡಿಯು ಮೈತ್ರಿ ಮಾಡಿಕೊಳ್ಳಲಿದ್ದು, ಬಿಜೆಪಿಯನ್ನು ಹೊರಗಿಟ್ಟು ಸರ್ಕಾರ ರಚನೆಗೆ ಸಿದ್ಧತೆ ನಡೆಸಲಾಗಿದೆ. ಸದ್ಯದ ಮಾಹಿತಿಗಳ ಪ್ರಕಾರ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಗೃಹ ಸಚಿವರನ್ನಾಗಿಸಬೇಕು ಎಂಬ ಬೇಡಿಕೆ ಆರ್ ಜೆಡಿಯುನಿಂದ ಕೇಳಿ ಬಂದಿದೆ ಎನ್ನಲಾಗಿದೆ. ಜೊತೆಗೆ ಸ್ಪೀಕರ್ ಕೂಡ ಆರ್ ಜೆಡಿ ಸ್ಥಾನಕ್ಕೆ ಬೇಡಿಕೆ ಇಟ್ಟಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ

Exit mobile version