6:38 PM Saturday 13 - December 2025

ಬಿಜೆಪಿ-ಎಸ್ ಡಿಪಿಐ ಅಣ್ಣ ತಮ್ಮಂದಿರು | “ತಾಂಟ್ ರೇ” ಎಂದು ಹೋದರೆ ಜೈಲಿಗೆ ಹೋಗುತ್ತಾರೆ | ಮುನೀರ್ ಕಾಟಿಪಳ್ಳ

18/02/2021

ಮಂಗಳೂರು: ಬಿಜೆಪಿ ಹಾಗೂ ಎಸ್ ಡಿಪಿಐ ಅಣ್ಣ ತಮ್ಮಂದಿರು ಎಂದು ಡಿವೈಎಫ್ ಐನ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದು, ಅವರು ಚೆನ್ನಾಗಿರಲಿ ಎಂದು ವ್ಯಂಗ್ಯ ಮಾಡಿದ್ದಾರೆ.

ಸ್ಥಳೀಯ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮುನೀರ್ ಕಾಟಿಪಳ್ಳ ಮಾತನಾಡಿ,  ಬಿಜೆಪಿ ಹಾಗೂ ಎಸ್ ಡಿಪಿಐ ತಾಂಟು(ತಾಗುವುದು ಅಥವಾ ಘರ್ಷಣೆ ನಡೆಸುವುದು) ಎಂದು ಹೇಳಿಕೊಂಡು ಜನರ ನಡುವೆ ವಿಷ ಬೀಜ ಬಿತ್ತಿ, ಪಂಚಾಯತ್ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಾರೆ ಎಂದು ಟೀಕಿಸಿದರು.

ಕ್ರಿಮಿನಲ್ ಚಟುವಟಿಕೆ, ಧರ್ಮ ರಕ್ಷಣೆ ವಿಚಾರದಲ್ಲಿ  ಜೈಲಿಗೆ ಹೋಗುವ ಬದಲು ಜನರು ನಮ್ಮ ಜೊತೆಗೆ ಬರಲಿ,  ತಾಂಟುರೇ ಎಂದು ಹೇಳಿಕೊಂಡು ಹೋಗುವವರಿಗೆ ಜೈ ಎಂದು ಕೊಂಡು ಹೋಗುವವರು ಜೈಲಿಗೆ ಹೋಗುತ್ತಾರೆ ಎಂದು ಮುನೀರ್ ಹೇಳಿದರು.

ಇತ್ತೀಚಿನ ಸುದ್ದಿ

Exit mobile version