ಬಡವರ ವಿರುದ್ದ ಬುಲ್ಡೋಜರ್ ಹರಿಸಿದ್ದೇ ಬಿಜೆಪಿಗೆ ಮುಳುವಾಯಿತು: ಯೋಗಿ ಸರ್ಕಾರದ ಸಚಿವನಿಂದಲೇ ಆಕ್ರೋಶದ ಹೇಳಿಕೆ

17/07/2024

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಕಳಪೆ ಸಾಧನೆ ಕುರಿತು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಆತ್ಮಾವಲೋಕನ ಮುಂದುವರೆದಿದೆ. ಬಡವರ ವಿರುದ್ದ ಬುಲ್ಡೋಜರ್ ಹರಿಸಿದ್ದೇ ಬಿಜೆಪಿಗೆ ಮುಳುವಾಯಿತು ಎಂದು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರದ ಸಚಿವ ಸಂಜಯ ನಿಷಾದ್ ಟೀಕಿಸಿದ್ದಾರೆ.

ರಾಜಕಾರಣದಲ್ಲಿ ಬಡವರ ಮನೆಮಠಗಳನ್ನು ಕೆಡವಿ ಅಳಿಸಿ ಹಾಕಿದರೆ, ಬಡವರು ನಮ್ಮನ್ನು ಕೆಡವುತ್ತಾರೆ ಎಂದು ಬಿಜೆಪಿ ಮಿತ್ರಪಕ್ಷ ನಿಷಾದ್ ಪಾರ್ಟಿಯ ಮುಖ್ಯಸ್ಥ ಸಂಜಯ ನಿಷಾದ್ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಸೋಲಿಗೆ ರಾಜ್ಯ ಸರ್ಕಾರದ ಆಡಳಿತವೇ ಕಾರಣ ಎಂಬ ಮಿತ್ರ ಪಕ್ಷಗಳ ದೂರಿಗೆ ಅವರು ದನಿಗೂಡಿಸಿದ್ದಾರೆ.

ಬುಲ್ಡೋಜರ್ ಇರೋದು ‘ಮಾಫಿಯಾ’ವನ್ನು ಮಟ್ಟ ಹಾಕಲು ಮತ್ತು ರಸ್ತೆಗಳನ್ನು ಮಾಡಲೆಂದೇ ವಿನಾ ಬಡವರ ಮನೆಮಠ ಕೆಡವಲು ಅಲ್ಲ. ವಾತಾವರಣ ಈಗಾಗಲೇ ಕೆಟ್ಟಿದೆ. ಅಧಿಕಾರಿಗಳು ಅದನ್ನು ಮತ್ತಷ್ಟು ಹದಗೆಡಿಸುತ್ತಿದ್ದಾರೆ ಎಂದು ನಿಷಾದ್ ಸುದ್ದಿಗಾರರ ಮುಂದೆ ದೂರಿದರು.

ನಿಷಾದ್ ಹೇಳಿಕೆ ಹೊರ ಬಿದ್ದ ಕೆಲವೇ ತಾಸುಗಳಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಟ್ವೀಟ್ ಮಾಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಗೆಲುವು ಒಟ್ಟು 80 ಸ್ಥಾನಗಳಲ್ಲಿ 62ರಿಂದ 33 ಕ್ಕೆ ಕುಸಿದಿತ್ತು.‌

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version