4:47 AM Wednesday 3 - September 2025

ಐಪಿಎಸ್ ಅಧಿಕಾರಿಗೆ ‘ಖಲಿಸ್ತಾನಿ’ ಎಂದು ನಿಂದನೆ: ಸಂಕಷ್ಟದಲ್ಲಿ ಬಿಜೆಪಿ ಸಂಸದ ಸುವೇಂದು ಅಧಿಕಾರಿ

21/02/2024

ಪಶ್ಚಿಮ ಬಂಗಾಳದಲ್ಲಿ ಸಿಖ್ ಪೊಲೀಸ್ ಅಧಿಕಾರಿಯನ್ನು ಬಿಜೆಪಿ ನಾಯಕರೊಬ್ಬರು “ಖಲಿಸ್ತಾನಿ” ಎಂದು ನಿಂದಿಸಿದ ನಂತರ ಈ ಘರ್ಷಣೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಮುಂದಿನ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಿಖ್ ಸಂಘಟನೆ ಎಸ್ಜಿಪಿಸಿ (ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ) ಮತ್ತು ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿವೆ.

ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಈ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ ರಾಜ್ಯ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಆರೋಪವನ್ನು ಬಿಜೆಪಿ ನಿರಾಕರಿಸಿದ್ದು, ಪೊಲೀಸರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಗೆ ಅಧೀನರಾಗಿದ್ದಾರೆ ಎಂದು ಆರೋಪಿಸಿದೆ.

ನಮ್ಮದೇ ಅಧಿಕಾರಿಯೊಬ್ಬರನ್ನು ರಾಜ್ಯದ ವಿರೋಧ ಪಕ್ಷದ ನಾಯಕರು ‘ಖಲಿಸ್ತಾನಿ’ ಎಂದು ಕರೆದಿದ್ದಾರೆ. ಅದು ಅವರ ತಪ್ಪು. ಅವರು ಹೆಮ್ಮೆಯ ಸಿಖ್ ಮತ್ತು ಕಾನೂನನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದ ಸಮರ್ಥ ಪೊಲೀಸ್ ಅಧಿಕಾರಿ. ಈ ಹೇಳಿಕೆಯು ಕೋಮು ಪ್ರಚೋದನೆಯಷ್ಟೇ ದುರುದ್ದೇಶಪೂರಿತ ಮತ್ತು ಜನಾಂಗೀಯವಾಗಿದೆ. ಇದು ಕ್ರಿಮಿನಲ್ ಕೃತ್ಯ ಎಂದು ರಾಜ್ಯ ಪೊಲೀಸರ ಅಧಿಕೃತ ಹ್ಯಾಂಡಲ್‌ನಿಂದ ಸರಣಿ ಪೋಸ್ಟ್ ಗಳು ತಿಳಿಸಿವೆ.

ಸುವೆಂದು ಅಧಿಕಾರಿ ನೇತೃತ್ವದಲ್ಲಿ ಪ್ರತಿಭಟನಾಕಾರರು ಸಂದೇಶ್ಖಾಲಿಗೆ ತೆರಳುತ್ತಿದ್ದಾಗ ಪೊಲೀಸರು ಅವರನ್ನು ತಡೆದರು. ನಂತರ ನಡೆದ ಘರ್ಷಣೆಯಲ್ಲಿ, ಪ್ರತಿಭಟನಾಕಾರರಲ್ಲಿ ಒಬ್ಬರು ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಯನ್ನು “ಖಲಿಸ್ತಾನಿ” ಎಂದು ಕರೆದು ನಿಂದಿಸಿದ್ದರು.

ಆಗ ಕೋಪಗೊಂಡ ಪೊಲೀಸ್ ಅಧಿಕಾರಿ ಪ್ರತಿಕ್ರಿಯಿಸಿದ್ದು “ನಾನು ಪೇಟ ಧರಿಸಿದ್ದೇನೆ, ಅದಕ್ಕಾಗಿಯೇ ನೀವು ನನ್ನನ್ನು ಖಲಿಸ್ತಾನಿ ಎಂದು ಕರೆಯುತ್ತೀರಿ? ನಾನು ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ… ನೀವು ನನ್ನ ಧರ್ಮದ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲ. ನಿಮ್ಮ ಧರ್ಮದ ಬಗ್ಗೆ ನಾನು ಏನನ್ನೂ ಹೇಳಿಲ್ಲ” ಎಂದು ಅಧಿಕಾರಿ ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಬಿಜೆಪಿ ಕಾರ್ಯಕರ್ತರು ಪಟ್ಟು ಬಿಡಲಿಲ್ಲ. “ನೀವು ನಿಮ್ಮ ಕೆಲಸವನ್ನು ಮಾಡಿ ಎಂದು ದಬಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version