ಚಾರ್ಮಾಡಿ ಘಾಟ್’ನ ಇಳಿಜಾರಿನ ತಿರುವಿನಲ್ಲಿ ಬ್ರೇಕ್ ಫೇಲ್: ಚಾಲಕನ ಸಮಯ ಪ್ರಜ್ಞೆಯಿಂದ ಉಳಿಯಿತು 70 ಜನರ ಜೀವ

bus
08/03/2024

ಕೊಟ್ಟಿಗೆಹಾರ:   ಚಾರ್ಮಾಡಿ ಘಾಟ್ ತಿರುವಿನಲ್ಲಿ KSRTC  ಬಸ್ ಬ್ರೇಕ್‌ ಫೇಲ್ ಆಗಿದ್ದು,  ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ  ಅನಾಹುತ ತಪ್ಪಿದಂತಾಗಿದೆ.

ಬಸ್ಸಿನ ಬ್ರೇಕ್ ಕಂಟ್ರೋಲ್ ತಪ್ತಿದ್ದಂತೆ ಚಾಲಕ ಸಂತೋಷ್ ಬಸ್ಸನ್ನು  ಡಿವೈಡರ್ ಗೆ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದಾರೆ. ಬಸ್ ವೇಗವಾಗಿ ಡಿವೈಡರ್ ಗೆ ಉಜ್ಜಿಕೊಂಡು ಹೋದ ಪರಿಣಾಮ ಭಾರೀ ಪ್ರಮಾಣದ ಹೊಗೆ ಕಾಣಿಸಿಕೊಂಡಿತು.

KSRTC ಬಸ್ ಕಡೂರಿನಿಂದ ಮಂಗಳೂರಿಗೆ ತೆರಳುತ್ತಿತ್ತು.  ಇಳಿಜಾರಿನಲ್ಲಿ ಬಸ್ ನ ಬ್ರೇಕ್ ಫೇಲ್ ಆಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ 70ಕ್ಕೂ ಅಧಿಕ ಪ್ರಯಾಣಿಕರ ಪ್ರಾಣ ಉಳಿದಿದೆ.

ಚಿಕ್ಕಮಗಳೂರು–ದಕ್ಷಿಣ ಕನ್ನಡ ಸಂಪರ್ಕಿಸೋ ಚಾರ್ಮಾಡಿ ಘಾಟ್ ಭಯಾನಕ ತಿರುವುಗಳಿಂದಲೇ ಕೂಡಿದೆ. ಈ ಜಾಗದಲ್ಲಿ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ನಡೆಯಬಹುದಾಗಿದ್ದ ಭಾರೀ ಅಪಾಯದಿಂದ  ಇದೀಗ ಚಾಲಕ ನಿರ್ವಾಹಕ ಸೇರಿದಂತೆ 70 ಪ್ರಯಾಣಿಕರು ಪಾರಾದಂತಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version