ಇಸ್ರೇಲ್ ನಿಂದ ತನ್ನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡ ಬ್ರೆಜಿಲ್

ಇಸ್ರೇಲಿನಿಂದ ಬ್ರೆಜಿಲ್ ತನ್ನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಇಸ್ರೇಲ್ ಮತ್ತು ಬ್ರೆಜಿಲ್ ನ ನಡುವಿನ ಸಂಬಂಧ ತಿಂಗಳುಗಳ ಹಿಂದೆಯೇ ಹದಗೆಡಲು ಪ್ರಾರಂಭಿಸಿತ್ತು. ಗಾಝಾದಲ್ಲಿ ಇಸ್ರೇಲ್ ಜನಾಂಗ ಹತ್ಯೆಯನ್ನು ನಡೆಸುತ್ತಿದೆ ಎಂದು ಬ್ರೆಜಿಲ್ ಅಧ್ಯಕ್ಷ ಲುಲ ಡಿಸಿಲ್ವಾ ಆರೋಪಿಸಿದ್ದರು. ಈ ನಡುವೆ ಇಸ್ರೇಲ್ ವಿರುದ್ಧ ಮೆಕ್ಸಿಕೋದಲ್ಲಿ ಭಾರೀ ಪ್ರತಿಭಟನೆ ನಡೆದಿದ್ದು ಇಸ್ರೇಲಿ ರಾಯಭಾರ ಕಚೇರಿಯ ವಿರುದ್ಧ ಪೆಟ್ರೋಲ್ ಬಾಂಬನ್ನು ಎಸೆಯಲಾಗಿದೆ.
ಸುಮಾರು 200ರಷ್ಟು ಪ್ರತಿಭಟನಾಕಾರರು ನಗರದ ಇಸ್ರೇಲಿ ರಾಯಭಾರ ಕಚೇರಿಯ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಇದರಿಂದ ಪತ್ರಕರ್ತರೂ ಸೇರಿದಂತೆ ಅನೇಕ ಮಂದಿಗೆ ಸುಟ್ಟ ಗಾಯಗಳಾಗಿವೆ. ರಫಾ ಮೇಲಿನ ಇಸ್ರೇಲಿ ದಾಳಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪೊಲೀಸರು ಬ್ಯಾರಿಕೆಡ್ ಇಟ್ಟಿದ್ದರು. ಆದರೆ ಅದನ್ನು ದಾಟಿ ಪ್ರತಿಭಟನಾಕಾರರು ಇಸ್ರೇಲ್ ರಾಯಭಾರ ಕಚೇರಿಯ ಮುಂದೆ ತಲುಪಿದರು. 18 ಪೊಲೀಸರಿಗೂ ಗಾಯಗಳಾಗಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth