ವಿದ್ಯಾರ್ಥಿನಿ ಮೀನಾಳ  ಅಮಾನುಷ ಹತ್ಯೆ: ತಲೆಬುರುಡೆ ಪತ್ತೆ, ನಡೆಯದ ಪ್ರತಿಭಟನೆ, ಹೋರಾಟ!

meena sslc
11/05/2024

ಕೊಡಗು: SSLC ವಿದ್ಯಾರ್ಥಿನಿ ಮೀನಾಳನ್ನು ಅಮಾನುಷವಾಗಿ ಹತ್ಯೆ ಮಾಡಿದ ಆರೋಪಿ  ಪ್ರಕಾಶ್ ನನ್ನು ಪೊಲೀಸರು ಬಂಧಿಸಿದ್ದು, ಇದೀಗ ಆರೋಪಿ ಬಾಲಕಿಯ ತಲೆಯನ್ನು ಎಸೆದ ಸ್ಥಳವನ್ನು ತೋರಿಸಿದ್ದಾನೆ.

ಘಟನಾ ಸ್ಥಳದಿಂದ 50ಮೀ. ದೂರದಲ್ಲಿ ಆರೋಪಿ  ಅಪ್ರಾಪ್ತೆ ಮೀನಾಳ ರುಂಡ  ಎಸೆದಿದ್ದನು. ತನ್ನ ವಿಕೃತ ಮನಸ್ಥಿತಿಗೆ ಇನ್ನೂ ಪ್ರಪಂಚ ಅರಿಯದ ಮುಗ್ದ ಬಾಲಕಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಆರೋಪಿ ಪ್ರಕಾಶನನ್ನು  ಸ್ಥಳ ಮಹಜರು ಮಾಡಿದಾಗ ಬಾಲಕಿ ಮೀನಾಳ ತಲೆ ಎಸೆದ ಜಾಗವನ್ನು ತೋರಿಸಿದ್ದಾನೆ. ಸದ್ಯ ಈ ಪ್ರಕರಣದ ತನಿಖೆ ಮುಂದುವರಿದಿದೆ.

ಸೋಮವಾರಪೇಟೆ ತಾಲೂಕು ಕುಂಬಾರಗಡಿಗೆ ಗ್ರಾಮ 10ನೇ ತರಗತಿ ಪಾಸ್​ ಆಗಿದ್ದ ಬಾಲಕಿ ಮೀನಾಳನ್ನು ಪ್ರಕಾಶ ಹತ್ಯೆ ಮಾಡಿದ್ದನು. ಕತ್ತಿಯಿಂದ ಆಕೆಯ ರುಂಡವನ್ನು ಬೇರ್ಪಡಿಸಿದ್ದನು. ಬಳಿಕ ಆಕೆಯ ತಲೆಯನ್ನು ಕಾಡು ದಾರಿಯಲ್ಲಿ ಎಸೆದು ತನ್ನ ಮನೆ ಸೇರಿದ್ದನು. ಮನೆಗೆ ಹೋಗಿ ಅಲ್ಲಿದ್ದ ಕೋವಿ ಹಿಡಿದುಕೊಂಡು ಕಾಡಿನತ್ತ ಎಸ್ಕೇಪ್​ ಆಗಿದ್ದನು.

ಇಂದು ಬೆಳಗ್ಗೆ ಆರೋಪಿ ಪ್ರಕಾಶ್ ನನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ಬಳಿಕ ಬಾಲಕಿಯ ತಲೆ ಎಸೆದಿದ್ದ ಸ್ಥಳಕ್ಕೆ ಆತನನ್ನು ಕರೆತಂದಿದ್ದು, ಈ ವೇಳೆ ಬಾಲಕಿಯ ರುಂಡ ಪತ್ತೆಯಾಗಿದೆ.

ನಡೆಯದ ಪ್ರತಿಭಟನೆ, ಹೋರಾಟ!:

ಇತ್ತೀಚೆಗೆ ರಾಜ್ಯದಲ್ಲಿ ನೇಹಾ ಎಂಬ ಯುವತಿಯ ಕಗ್ಗೊಲೆ ಭಾರೀ ಸದ್ದಾಗಿತ್ತು.  ರಾಜ್ಯಾದ್ಯಂತ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು.  ಚುನಾವಣೆ ಸಂದರ್ಭದಲ್ಲಿ ನಡೆದ ಈ ಘಟನೆ ರಾಜಕೀಯಕ್ಕೂ ಬಳಕೆಯಾಗಿತ್ತು. ಇದೀಗ ಇನ್ನೂ ಬಾಳಿ ಬದುಕಬೇಕಿದ್ದ ಬಾಲಕಿ ಮೀನಾಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದರೂ, ಸಾರ್ವಜನಿಕರ ಪ್ರತಿಕ್ರಿಯೆ ನೀರಾಸವಾಗಿದೆ. ಯಾವುದೇ ರಾಜಕೀಯ ಪಕ್ಷಗಳು, ಸಂಘಟನೆಗಳು ಈ ಹತ್ಯೆಯ ವಿರುದ್ಧ ಧ್ವನಿ ಎತ್ತದಿರುವುದು ಅಚ್ಚರಿಗೆ ಕಾರಣವಾಗಿದೆ. ಮಹಿಳಾ, ಮಕ್ಕಳ ಆಯೋಗಗಳು ಕೂಡ ಮೌನಕ್ಕೆ ಶರಣಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version