ರೈತರ ಹೋರಾಟಕ್ಕೆ ಭಾರತೀಯ ವಿದ್ಯಾರ್ಥಿ ಸಂಘ ಬೆಂಬಲ

08/12/2020

ಬೆಂಗಳೂರು: ಕರಾಳ ಕೃಷಿ ಕಾನೂನಿನ ವಿರುದ್ಧ ಇಂದು ರೈತರು ಭಾರತ್ ಬಂದ್ ನಡೆಸುತ್ತಿದ್ದು, ಈ ರೈತರ ಹೋರಾಟಕ್ಕೆ ಭಾರತೀಯ ವಿದ್ಯಾರ್ಥಿ ಸಂಘ(BVS) ಬೆಂಬಲ ಸೂಚಿಸಿದೆ.




ರೈತರು ಕರೆನೀಡಿರುವ ‘ಭಾರತ್ ಬಂದ್’ಗೆ ಭಾರತೀಯ ವಿದ್ಯಾರ್ಥಿ ಸಂಘ ( BVS) ಕರ್ನಾಟಕ, ಸಂಪೂರ್ಣವಾಗಿ ಬೆಂಬಲ ಘೋಷಿಸಿದೆ.  ಬನ್ನಿ, ನಾವೆಲ್ಲರೂ ಅನ್ನದಾತರ ಜೊತೆ ನಿಲ್ಲೋಣ ಎಂದು ಭಾರತೀಯ ವಿದ್ಯಾರ್ಥಿ ಸಂಘವು ತನ್ನ ಅಧಿಕೃತ ಫೇಸ್ ಬುಕ್ ಪುಟ ‘ಬಿವಿಎಸ್ ಕರ್ನಾಟಕ’ದಲ್ಲಿ  ಕರೆ ನೀಡಿದೆ.

ರೈತ ಉಳಿದರೆ ದೇಶ ಉಳಿಯುತ್ತದೆ.  ರೈತರನ್ನು  ಉಳಿಸೋಣ, ಅವರೊಂದಿಗೆ ನಿಲ್ಲೋಣ ಭಾರತ್ ಬಂದ್ ಯಶಸ್ವಿಗೊಳಿಸೋಣ ಎಂದು ಬಿವಿಎಸ್ ಕರೆ ನೀಡಿದೆ.

 

ಇತ್ತೀಚಿನ ಸುದ್ದಿ

Exit mobile version