ಇವರಿಗೆ ಭಾರತ ಎಂದು ಕರೆಯುವುದು ಅವಮಾನ : ಕಾಂಗ್ರೆಸ್ ವಿರುದ್ಧ ಬಿ.ವೈ.ವಿಜಯೇಂದ್ರ ವಾಗ್ದಾಳಿ

ಬೆಂಗಳೂರು: ಇವರಿಗೆ ಭಾರತ ಎಂದು ಕರೆಯುವುದು ಅವಮಾನ ಈ ಮೂಲಕ ಇವರು ದೇಶದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಹುಟ್ಟು ಹಾಕಿರುವ ದೇಶದ ಹೆಸರು ಬದಲಾವಣೆಯ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಅವರು, ಸಿಎಂ ಸೇರಿದಂತೆ ಇತರರು ಹೇಳಿಕೆಗಳನ್ನು ಕೊಟ್ಟಿದ್ದಾರೆ, ಪ್ರಧಾನಿಯವ್ರು ಬಂದರೆ ಭಾರತದ ಪ್ರಧಾನಿಗಳು ಬಂದರು ಎನ್ನುತ್ತೇವೆ. ಭಾರತದ ರಾಷ್ಟ್ರಪತಿಗಳು ಬಂದರು ಎನ್ನುತ್ತೇವೆ. ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಇವರು ಎಲ್ಲವನ್ನೂ ಚುನಾವಣೆ ದೃಷ್ಟಿಯಿಂದ ಅಳೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಸಚಿವ ಶಿವಾನಂದ ಪಾಟೀಲ್ ಹೇಳಿಕೆ ಖಂಡನೀಯ:
ಇದೇ 8 ರಂದು ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ರೈತರ ಪರ ಹೋರಾಟ ನಡೆಯಲಿದೆ. ನಮ್ಮ ಎಲ್ಲ ಹಿರಿಯ ನಾಯಕರು ಬೆಂಗಳೂರಿನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ. ಜಿಲ್ಲಾ, ಮಂಡಲ ಮಟ್ಟದಲ್ಲೂ ಹೋರಾಟ ನಡೆಸುತ್ತೇವೆ.
ನುಡಿದಂತೆ ನಡೆದಿದ್ದೇವೆ ಎಂದು ಇವರು ಸುಳ್ಳು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ.ಈ ಸುಳ್ಳು ಪ್ರಚಾರ ಮೂಲಕ ಲೋಕಸಭೆ ಚುನಾವಣೆ ಗೆಲ್ಲುವ ಉದ್ದೇಶ ಇವರದ್ದಾಗಿದೆ.ಇದು ನುಡಿದಂತೆ ನಡೆದ ಸರ್ಕಾರ ಅಲ್ಲ ಎಡವಿದ ಸರ್ಕಾರ.
ಉಚಿತ ವಿದ್ಯುತ್ ಭರವಸೆ ಕೊಡ್ತಾರೆ, ಇನ್ನೊಂದು ಕಡೆ ಕರೆಂಟೇ ಕೊಡುವುದಿಲ್ಲ.ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಕೊಡುತ್ತಿಲ್ಲ.ರೈತರ ಬಗ್ಗೆ ಅನುಕಂಪ, ಕಾಳಜಿ ಇಲ್ಲ.ಕಾವೇರಿ ವಿಚಾರದಲ್ಲಿ ರಾಜ್ಯ ರೈತ ಸಂಘವೂ ಕೋರ್ಟ್ ನಲ್ಲಿ ಅರ್ಜಿ ಹಾಕಿದೆ.ಸರ್ಕಾರದ ವಾದ ಬಗ್ಗೆ ರೈತ ಸಂಘಟನೆಗೆ ಅನುಮಾನ ಇದೆ.ರೈತರಿಗೆ, ರೈತ ಸಂಘಟನೆಗಳಿಗೆ ಸರ್ಕಾರದ ಮೇಲೆ ವಿಶ್ವಾಸ ಇಲ್ಲ ಎಂದರು.