8:39 AM Wednesday 22 - October 2025

ಅರೆಸ್ಟ್ ವಾರಂಟ್ ನೀಡೋ ವೇಳೆ ಮಾತಿನ ಚಕಮಕಿ: ಪೊಲೀಸ್ ನನ್ನು ಗುಂಡಿಕ್ಕಿ ಕೊಂದ ಆರೋಪಿ

23/09/2023

ಕೆನಡಾದ ವ್ಯಾಂಕೋವರ್ ಉಪನಗರದಲ್ಲಿ ಬಂಧನ ವಾರಂಟ್ ನೀಡಲು ಪ್ರಯತ್ನಿಸುತ್ತಿದ್ದ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಅಧಿಕಾರಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಇದೇ ವೇಳೆ ಇತರ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವ್ಯಾಂಕೋವರ್ ನಿಂದ ಪೂರ್ವಕ್ಕೆ 30 ಕಿಲೋಮೀಟರ್ (ಸುಮಾರು 18 ಮೈಲಿ) ದೂರದಲ್ಲಿರುವ ಕೋಕ್ವಿಟ್ಲಾಮ್ ಎಂಬ ಪಟ್ಟಣದಲ್ಲಿ ಪೊಲೀಸ್ ಅಧಿಕಾರಿಗಳು ವ್ಯಕ್ತಿಯೊಬ್ಬರೊಂದಿಗೆ ವಾಗ್ವಾದ ನಡೆಸಿದಾಗ ಈ ಗುಂಡಿನ ದಾಳಿ ನಡೆದಿದೆ ಎಂದು ಬ್ರಿಟಿಷ್ ಕೊಲಂಬಿಯಾದ ಪೊಲೀಸ್ ಕಾವಲು ಸಂಸ್ಥೆಯಾದ ಸ್ವತಂತ್ರ ತನಿಖಾ ಕಚೇರಿ ತಿಳಿಸಿದೆ.

20ರ ಹರೆಯದ ಶಂಕಿತನಿಗೂ ಗುಂಡು ಹಾರಿಸಲಾಗಿದ್ದು, ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೃತ ಅಧಿಕಾರಿಯನ್ನು 51 ವರ್ಷದ ಕಾನ್ಸ್ ಟೇಬಲ್ ರಿಕ್ ಒಬ್ರಿಯಾನ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಓರ್ವ ಅಧಿಕಾರಿಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಯ ನಂತರ ಬಿಡುಗಡೆ ಮಾಡಲಾಗಿದೆ. ಇನ್ನೊಬ್ಬರು ಗಾಯಗಳೊಂದಿಗೆ ಆಸ್ಪತ್ರೆಯಲ್ಲಿದ್ದಾರೆ.

ಇತ್ತೀಚಿನ ಸುದ್ದಿ

Exit mobile version