ಗ್ಯಾಸ್ ಕಟ್ಟರ್ ಬಳಸಿ ಕೆನರಾ ಬ್ಯಾಂಕ್ ಎಟಿಎಂ ದರೋಡೆ

chikamagalore
16/08/2023

ಚಿಕ್ಕಮಗಳೂರು: ಗ್ಯಾಸ್ ಕಟ್ಟರ್ ಬಳಸಿ ಕೆನರಾ ಬ್ಯಾಂಕ್ ಎಟಿಎಂ ದರೋಡೆ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿ ನಡೆದಿದೆ.ಕೆನರಾ ಬ್ಯಾಂಕ್ ಎಟಿಎಂನಲ್ಲಿ ಕಳ್ಳರು ಕೈಚಳಕ ತೋರಿದ್ದು, ರಾತ್ರೋರಾತ್ರಿ ಕೆನರಾ ಬ್ಯಾಂಕ್ ಎಟಿಎಂ ಲೂಟಿ ಮಾಡಿದ್ದಾರೆ.

ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ಕತ್ತರಿಸಿದ ಕಳ್ಳರು, ಎಟಿಎಂನಲ್ಲಿದ್ದ 14 ಲಕ್ಷ ಹಣವನ್ನು ಲೂಟಿ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು, ಕೆನರಾ ಬ್ಯಾಂಕ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದರೋಡೆ ಕೋರರು ಮೊದಲು ಸಿಸಿ ಟಿವಿಯನ್ನು ನಿಷ್ಕ್ರಿಯಗೊಳಿಸಿದ್ದು, ಆ ಬಳಿಕ ಎಟಿಎಂ ದರೋಡೆ ಮಾಡಿದ್ದಾರೆ.
ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

ಇತ್ತೀಚಿನ ಸುದ್ದಿ

Exit mobile version