2:56 AM Wednesday 19 - November 2025

ದೇಶದಲ್ಲಿ ಜಾತಿ ಗಣತಿಯ ‘ಎಕ್ಸ್ ರೇ’ ಅಗತ್ಯವಿದೆ: ರಾಹುಲ್ ಗಾಂಧಿ ಉವಾಚ

11/10/2023

ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳ ಸತ್ಯಾಸತ್ಯತೆ ಅರಿಯಲು ದೇಶದಲ್ಲಿ ಜಾತಿ ಗಣತಿಯ ‘ಎಕ್ಸ್ ರೇ’ ಅಗತ್ಯವಿದೆ ಎಂದು ಮಧ್ಯ ಪ್ರದೇಶದ ಶಾಹದೋಲ್‌ನ ಸಾರ್ವಜನಿಕ ರ‍್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ದೇಶದಲ್ಲಿ ಜಾತಿ ಗಣತಿ ನಡೆಯಬೇಕಿದೆ. ಇದು ಅಲ್ಪಸಂಖ್ಯಾತರ ಸತ್ಯದ ‘ಎಕ್ಸ್-ರೇ’ ಕೂಡ ಆಗಲಿದೆ. ಏನೇ ಬಂದರೂ ಜಾತಿ ಗಣತಿ ನಡೆಸುವಂತೆ ಕೇಂದ್ರಕ್ಕೆ ಒತ್ತಾಯಿಸುತ್ತೇವೆ. ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳ ಸತ್ಯಾಸತ್ಯತೆ ಅರಿಯಲು ಜಾತಿ ಗಣತಿ ‘ಎಕ್ಸ್ ರೇ’ ಆಗಿದೆ. ಇಂದು ಆದಿವಾಸಿಗಳಿಗೆ ಯಾವ ಹಕ್ಕುಗಳನ್ನು ನೀಡಬೇಕು, ಒಬಿಸಿ ಮತ್ತು ಎಸ್‌ಟಿ ವರ್ಗಗಳಿಗೆ ಯಾವ ಸ್ಥಾನಮಾನವನ್ನು ನೀಡಬೇಕು ಎಂಬುದನ್ನು ಇದು ನಿರ್ಧರಿಸುತ್ತದೆ.

ಜಾತಿ ಗಣತಿ ದೇಶದ ಮುಂದಿರುವ ಪ್ರಶ್ನೆ. ನಾವು ಜಾತಿ ಗಣತಿಯ ಬಗ್ಗೆ ಏಕೆ ಮಾತನಾಡುತ್ತಿದ್ದೇವೆ ಎಂದರೆ ನಾವು ಅದನ್ನು ಖಂಡಿತಾ ಜಾರಿಗೊಳಿಸುತ್ತೇವೆ” ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ

Exit mobile version