ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆಗೆ ಕೆಲವೇ ಗಂಟೆಗಳ ಮೊದಲು ಫ್ರೆಂಚ್ ರೈಲ್ವೆ ಸಂಸ್ಥೆ ಸೊಸಿಯೆಟೆ ನ್ಯಾಷನಲ್ ಡೆಸ್ ಚೆಮಿನ್ಸ್ ಡಿ ಫೆರ್ ಫ್ರಾಂಕೈಸ್ (ಎಸ್ಎನ್ಎಫ್ಸಿ) ಕಳೆದ ರಾತ್ರಿ ಭಾರಿ ವಿಧ್ವಂಸಕ ದಾಳಿಗೆ ಒಳಗಾಗಿದೆ. ಹೀಗಾಗಿ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದೆ. ಕೆಲವು ರೈಲುಗಳನ್ನು ರದ್ದುಪಡಿಸಲಾಗಿದ್ದರೂ, ಡಜನ್ಗಟ್ಟಲೆ ರೈಲು ವಿಳಂಬ...
ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಹಿಜಾಬ್ ನ ಬದಲು ತಲೆಗೆ ಟೊಪ್ಪಿ ಧರಿಸಿ ಆಥ್ಲಿಟ್ ಗಳು ಭಾಗವಹಿಸುವುದಕ್ಕೆ ಒಲಿಂಪಿಕ್ಸ್ ಕಮಿಟಿ ಅನುಮತಿ ನೀಡಿದೆ. ಅಥ್ಲಿಟ್ ಗಳು ಹಿಜಾಬ್ ಧರಿಸಿ ಕ್ರೀಡಾಕೂಟದಲ್ಲಿ ಭಾಗವಹಿಸುವುದಕ್ಕೆ ಫ್ರೆಂಚ್ ಒಲಿಂಪಿಕ್ಸ್ ಸಮಿತಿ ಈ ಮೊದಲು ನಿಷೇಧ ಹೇರಿತ್ತು. ಫ್ರೆಂಚ್ ಅಥ್ಲೆಟ್ ಸಂಕಂಬ ಸಿಲ...
ಇಸ್ರೇಲ್ ಪ್ರಧಾನಿ ಬೆಂಜಮೀನ್ ನೆತನ್ಯಾಹು ಅವರು ಅಮೆರಿಕನ್ ಪಾರ್ಲಿಮೆಂಟ್ ನಲ್ಲಿ ಭಾಷಣ ಮಾಡುತ್ತಿದ್ದಾಗ ಹೊರಗಡೆ ಫೆಲೆಸ್ತೀನ್ ಪರ ರ್ಯಾಲಿ ನಡೆದಿದೆ. ಇಸ್ರೇಲ್ ಗೆ ಸೇನಾ ನೆರವು ನೀಡುವುದನ್ನು ನಿಲ್ಲಿಸಬೇಕು ಎಂದು ಅಮೇರಿಕವನ್ನು ಸಾವಿರಾರು ಮಂದಿ ಆಗ್ರಹಿಸಿದ್ದಾರೆ. ಪ್ರತಿಭಟನಾಕಾರರು ಪ್ಲೇಕಾರ್ಡ್ ಮತ್ತು ಬ್ಯಾನರ್ ಗಳನ್ನು ಹಿಡಿದಿದ್ದರು. ...
ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆ ಮಮತಾ ಬ್ಯಾನರ್ಜಿ ಅವರು ನೀಡಿದ ಹೇಳಿಕೆಗಳ ಬಗ್ಗೆ ಬಾಂಗ್ಲಾದೇಶ ಸರ್ಕಾರವು ಭಾರತೀಯ ಹೈಕಮಿಷನ್ಗೆ ಔಪಚಾರಿಕವಾಗಿ ದೂರು ನೀಡಿದೆ. ಬಾಂಗ್ಲಾದೇಶದ ಪರಿಸ್ಥಿತಿಯ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಸರ್ಕಾರವು ಭಾರತೀಯ ಹೈಕಮಿಷನ್ಗೆ ಔಪಚಾರಿ...
ಫೆಲೆಸ್ತೀನಿನ ಐಕ್ಯತೆಗೆ ಸಂಬಂಧಿಸಿ ಚೀನಾದ ಪ್ರಸ್ತಾಪಕ್ಕೆ ಫೆಲೆಸ್ತೀನಿನ ಪ್ರಮುಖ ರಾಜಕೀಯ ಪಕ್ಷಗಳಾದ ಹಮಾಸ್ ಮತ್ತು ಫತಹ್ ಒಪ್ಪಿಗೆ ನೀಡಿದೆ ಎಂದು ಚೀನಾ ತಿಳಿಸಿದೆ. ಮೂರು ದಿನಗಳ ಕಾಲ ಚೀನಾದ ಬೀಜಿಂಗ್ ನಲ್ಲಿ ನಡೆದ ಚರ್ಚೆಯ ಬಳಿಕ ಒಪ್ಪಂದಕ್ಕೆ ಹಮಾಸ್ ಮತ್ತು ಫತಹ್ ಅಲ್ಲದೆ ಉಳಿದ ಸುಮಾರು 14 ರಷ್ಟು ಸಂಘಟನೆಗಳು ಕೂಡ ಒಪ್ಪಿಗೆ ಸೂಚಿಸಿವೆ ಎಂ...
ಕೊರೋನಾ ಕಾಲದಲ್ಲಿ ಮೃತಪಟ್ಟ ಮುಸ್ಲಿಮರ ಶರೀರವನ್ನು ದಫನ ಮಾಡುವ ಬದಲು ಶ್ರೀಲಂಕಾದಲ್ಲಿ ದಹನ ಮಾಡಲಾಗಿತ್ತು. ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯೂ ಸೇರಿದಂತೆ ಜಾಗತಿಕವಾಗಿಯೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಶ್ರೀಲಂಕಾದ ಸರ್ಕಾರ ಅದಕ್ಕಾಗಿ ಮುಸ್ಲಿಮರಿಂದ ಕ್ಷಮೆ ಯಾಚಿಸಿದೆ. ಕೊರೋನಾ ಕಾಲದಲ್ಲಿ ಶ್ರೀಲಂಕಾ ಸರಕಾರ ಅತ್ಯಂತ ಕಠಿಣವಾಗಿ ...
ಇಥಿಯೋಪಿಯಾದಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತದಲ್ಲಿ ಕನಿಷ್ಠ 229 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಬದುಕುಳಿದವರನ್ನು ರಕ್ಷಿಸಲು ಪ್ರಯತ್ನಿಸಿದ ಅನೇಕರು ಸೇರಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಇಥಿಯೋಪಿಯಾದ ಕೆಂಚೊ ಶಾಚಾ ಗೊಜ್ಡಿ ಜಿಲ್ಲೆಯಲ್ಲಿ ಬಲಿಯಾದವರಲ್ಲಿ ಚಿಕ್ಕ ಮಕ್ಕಳು ಮತ್ತು ಗರ್ಭಿಣಿಯರು ಸೇರ...
ಕೆನಡಾದ ಎಡ್ಮಂಟನ್ ನಲ್ಲಿ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ. ಅಲ್ಲದೇ ಗೋಡೆಗಳ ಮೇಲೆ ಗೀಚುಬರಹವನ್ನು ಬರೆಯಲಾಗಿದೆ. ಈ ಘಟನೆಯ ನಂತರ, ಕೆನಡಾದ ವಿಶ್ವ ಹಿಂದೂ ಪರಿಷತ್ ಇದನ್ನು ಖಂಡಿಸಿದ್ದು ಬೆಳೆಯುತ್ತಿರುವ ಉಗ್ರಗಾಮಿ ಸಿದ್ಧಾಂತದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆನಡಾ ಸರ್ಕಾರಕ್ಕೆ ಮನವಿ ಮಾಡಿದೆ. ಎಡ್ಮಂಟನ್ ನ ಬಿಎಪಿಎಸ್ ಮಂದಿರ...
ಯುಎಇಯ ವಿವಿಧ ಪ್ರದೇಶಗಳಲ್ಲಿ ಗುಂಪುಗೂಡಿ ಪ್ರತಿಭಟನೆ ನಡೆಸಿದ ಬಾಂಗ್ಲಾದೇಶಿ ನಾಗರಿಕರಿಗೆ ಅಬುಧಾಬಿ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ. ಮೂರು ಮಂದಿಗೆ ಜೀವಾವಧಿ ಶಿಕ್ಷೆ, 53 ಮಂದಿಗೆ 10 ವರ್ಷಗಳ ಜೈಲು ಮತ್ತು ಗಡಿಪಾರು ಹಾಗೂ ಓರ್ವನಿಗೆ 11 ವರ್ಷ ಜೈಲು ಮತ್ತು ಗಡಿಪಾರು ಶಿಕ್ಷೆಯನ್ನು ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಬಾಂಗ್ಲಾದೇಶದಲ...
ಉತ್ತರ ಪ್ರದೇಶದ ಆಗ್ರಾ ಮೂಲದ 29 ವರ್ಷದ ವ್ಯಕ್ತಿಯನ್ನು ಆತನ ಹೆಂಡತಿಯ ಮುಂದೆಯೇ ಗುಂಡಿಕ್ಕಿ ಕೊಂದ ಘಟನೆ ಯುಎಸ್ ನಲ್ಲಿ ನಡೆದಿದೆ. ಪೊಲೀಸ್ ತನಿಖೆಯಲ್ಲಿ ಲೋಪವಾಗಿದೆ ಎಂದು ಕುಟುಂಬ ಆರೋಪಿಸಿದೆ ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆ ಮತ್ತು ಗೇವಿನ್ ಗೆ ನ್ಯಾಯವನ್ನು ಕೋರಿದೆ. ಇತ್ತೀಚೆಗೆ ಅಮೆರಿಕದಲ್ಲಿ ವಿವಾಹವಾಗಿದ್ದ ಗೇವಿನ್ ದಸೌರ್ ಎಂಬು...