ಅಮೆರಿಕಾದ ಬಹು ಪ್ರಸಿದ್ಧ ಯುನಿವರ್ಸಿಟಿಯಾದ ಹಾರ್ವರ್ಡ್ ನಲ್ಲಿ ಮುಸ್ಲಿಂ ಮತ್ತು ಫೆಲೆಸ್ತೀನಿ ವಿದ್ಯಾರ್ಥಿಗಳ ವಿರುದ್ಧ ಪಕ್ಷಪಾತದಿಂದ ನಡೆದುಕೊಳ್ಳಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸುವುದಾಗಿ ವಿಶ್ವವಿದ್ಯಾಲಯ ಹೇಳಿದೆ. ಹಾರ್ವರ್ಡ್ ವಿರುದ್ಧ ಮುಸ್ಲಿಂ ಲೀಗಲ್ ಫಂಡ್ ಆಫ್ ಅಮೆರಿಕ ನೀಡಿರುವ ದೂರಿನಂತೆ ಈ ತನಿಖೆ ನಡೆಯಲಿದೆ...
ಇಸ್ರೇಲ್ ನ ಬಾಂಬ್ ನಿಂದಾಗಿ ಮನೆಮಠ ಕಳೆದು ರಫಾದ ನಿರಾಶ್ರಿತ ಶಿಬಿರದಲ್ಲಿ ಕಳೆಯುತ್ತಿರುವ 15 ವರ್ಷದ ಪೋರನೋರ್ವ ಸ್ವತಃ ವಿದ್ಯುತ್ ಉತ್ಪಾದನೆಯ ಯಂತ್ರವನ್ನು ಸಂಶೋಧಿಸಿ ಜಾಗತಿಕವಾಗಿ ಅಚ್ಚರಿಗೆ ಕಾರಣವಾಗಿದ್ದಾನೆ. ಹುಸಾಮ್ ಅಲ್ ಅತ್ತರ್ ಎಂಬ ಹೆಸರಿನ ಈ ಬಾಲಕ ಮತ್ತು ಆತನ ಕುಟುಂಬ ಪಶ್ಚಿಮ ಗಾಝಾದಿಂದ ನಿರಾಶ್ರಿತರಾಗಿ ರಫಾದ ಗಡಿಗೆ ವರ್ಗಾವಣೆಗ...
ಇಂಡಿಯಾನಾದ ಪರ್ಡ್ಯೂ ವಿಶ್ವವಿದ್ಯಾಲಯದ ಭಾರತೀಯ ಮೂಲದ ಡಾಕ್ಟರೇಟ್ ವಿದ್ಯಾರ್ಥಿ ಸಮೀರ್ ಕಾಮತ್ ಎಂಬುವವರು ಪ್ರಕೃತಿ ಸಂರಕ್ಷಿತ ಪ್ರದೇಶದಲ್ಲಿ ಕಾಡಿನಲ್ಲಿ ಶವವಾಗಿ ಪತ್ತೆಯಾಗಿದ್ದು, ತಲೆಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾರೆನ್ ಕೌಂಟಿ ಕೊರೋನರ್ ಜಸ್ಟಿನ್ ಬ್ರುಮೆಟ್ ಅವರ ಪ್ರಕಾರ, ಸಮೀರ್ ಕಾಮತ್...
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ 22 ವರ್ಷದ ಯುವತಿಯೊಬ್ಬಳು ತನ್ನ ಒಂದೂವರೆ ವರ್ಷದ ಮಗಳೊಂದಿಗೆ ವಾಟ್ಸಾಪ್ನಲ್ಲಿ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ತೆರಳಿದ್ದಾಳೆ. ಪೂಂಚ್ನ್ ಖಾದಿ ಕರ್ಮದಾ ನಿವಾಸಿ ಶಬ್ನಮ್ ಬಿ ಗುಲಾಮ್ ರುಬಾನಿ ಅವರನ್ನು ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿದ್ದಾ...
ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನ ಮೇಲೆ ಗುಂಪೊಂದು ಹಲ್ಲೆ ನಡೆಸಿ ಮೊಬೈಲ್ ಫೋನ್ ದೋಚಿದ ಘಟನೆ ಚಿಕಾಗೋದಲ್ಲಿ ನಡೆದಿದೆ. ಹೈದರಾಬಾದ್ ನ ಲಂಗರ್ ಹೌಜ್ ನಿವಾಸಿ ಸೈಯದ್ ಮಜಾಹಿ ಅಲಿ ಅಮೆರಿಕದ ಚಿಕಾಗೋದ ಇಂಡಿಯಾನಾ ವೆಸ್ಲಿಯನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ದಾಳಿಯಲ್ಲಿ ಈ ವಿದ್ಯಾರ್ಥಿಗೆ ಹಲವಾರು ಗಾ...
ಇದು ಹೊಸ ಇತಿಹಾಸ. ಹೌದು. ಆಸ್ಟ್ರೇಲಿಯಾದ ಸೆನೆಟ್ನಲ್ಲಿ ಹಿಂದೂ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆಯ ಮಹತ್ವ ಪಸರಿಸಿದೆ. ಭಾರತೀಯ ಮೂಲದ ಆಸ್ಟ್ರೇಲಿಯನ್ ಸೆನೆಟರ್ ವರುಣ್ ಘೋಷ್ ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ವರುಣ್ ಘೋಷ್ ಅವರು ಮಂಗಳವಾರ ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಭಗವದ್...
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸ್ನೇಹಕ್ಕೆ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಮಾಲ್ಕಮ್ ಟರ್ನ್ಬುಲ್ 10ರಲ್ಲಿ 10 ಅಂಕ ನೀಡಿದ್ದಾರೆ. ತಮ್ಮ ಪತ್ನಿಯೊಂದಿಗೆ ಭಾರತ ಪ್ರವಾಸದಲ್ಲಿರುವ ಮಾಲ್ಕಮ್ ಟರ್ನ್ಬುಲ್ ಜೈಪುರ 17ನೇ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತ ಪ್ರವಾಸ ನನಗೆ ಅತ್ಯಂತ ಸುಂದರವಾದ ಅನುಭವ.ಇತ್ತೀಚೆಗೆ ಜಪಾ...
ಪ್ಯಾರಿಸ್ ನ ಗ್ಯಾರೆ ಡಿ ಲಿಯಾನ್ ರೈಲ್ವೆ ನಿಲ್ದಾಣದಲ್ಲಿ ಶನಿವಾರ ನಡೆದ ಚಾಕು ದಾಳಿಯಲ್ಲಿ ಕನಿಷ್ಠ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಬ್ಬರಿಗೆ ಗಂಭೀರ ಗಾಯಗಳಾಗಿವೆ. ಆದರೆ ಅವರು ಮಾರಣಾಂತಿಕ ಪರಿಸ್ಥಿತಿಯಲ್ಲಿಲ್ಲ. ಇನ್ನಿಬ್ಬರಿಗೆ ಲಘು ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಶಂಕಿತ ದಾಳಿಕೋರನನ್ನು ಬಂಧಿ...
ನಿನ್ನೆಯಷ್ಟೇ ಬಾಲಿವುಡ್ ನಟಿ ಪೂನಾಂ ಪಾಂಡೆ ಸಾವನ್ನಪ್ಪಿದ್ರು ಎಂಬ ಸುದ್ದಿ ಬಹಳಷ್ಟು ವೈರಲ್ ಆಗಿತ್ತು. ಇದೀಗ ಈ ವಿಚಾರ ಫೇಕ್ ಎಂಬುದು ಬಯಲಾಗಿದೆ. ಈಗಲೂ ಜನರು ಪೂನಂ ಪಾಂಡೆಯ ಸಾವನ್ನು ನಿಜವೆಂದು ನಂಬಿದ್ದಾರೆ. ಆದರೆ ಈ ವೈರಲ್ ಸುದ್ದಿ ಮಧ್ಯೆ ಈಕೆ ವೀಡಿಯೋ ಮೂಲಕ ಮಾತನಾಡಿದ್ದು ತಾನು ಬದುಕಿದ್ದೀನಿ ಎಂದಿದ್ದಾರೆ. ಗರ್ಭಕಂಠದ ಕ್ಯಾನ್ಸರ್...
ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿದೆ ಎಂದು ಕತಾರ್ ತಿಳಿಸಿದೆ. ಓರ್ವ ಇಸ್ರೇಲಿ ಒತ್ತೆಯಾಳನ್ನು ಬಿಡುಗಡೆಗೊಳಿಸುವುದಕ್ಕೆ ಪ್ರತಿಯಾಗಿ 100 ಫೆಲಿಸ್ತೀನಿ ಕೈದಿಗಳನ್ನು ಇಸ್ರೇಲ್ ಬಿಡುಗಡೆಗೊಳಿಸಬೇಕು ಎಂಬುದು ಒಪ್ಪಂದದ ಪ್ರಮುಖ ಬೇಡಿಕೆಯಾಗಿದೆ. ಈ ಕುರಿತು ಕಳೆದ ಕೆಲವು ದಿನಗಳಿಂದ ಫ್ರೆಂಚ್ ರಾಜಧಾನಿ ಪ್ಯಾರಿಸ್ ನ...