ಇಸ್ರೇಲಿ ದೂತಾವಾಸ ಕಚೇರಿ ಮುಂದೆ ಆತ್ಮಾಹುತಿ ಪ್ರಕರಣ: ಅಮೆರಿಕಾದ ವಾಯುಪಡೆ ಅಧಿಕಾರಿ ಸಾವು - Mahanayaka

ಇಸ್ರೇಲಿ ದೂತಾವಾಸ ಕಚೇರಿ ಮುಂದೆ ಆತ್ಮಾಹುತಿ ಪ್ರಕರಣ: ಅಮೆರಿಕಾದ ವಾಯುಪಡೆ ಅಧಿಕಾರಿ ಸಾವು

27/02/2024

“ಫೆಲೆಸ್ತೀನ್ ಅನ್ನು ಮುಕ್ತಗೊಳಿಸಿ” ಎಂಬ ಘೊಷಣೆ ಕೂಗುತ್ತಾ ವಾಷಿಂಗ್ಟನ್ ಡಿಸಿ ಯಲ್ಲಿರುವ ಇಸ್ರೇಲಿ ದೂತಾವಾಸ ಕಚೇರಿ ಮುಂದೆ ಆತ್ಮಾಹುತಿಗೆ ಯತ್ನಿಸಿದ್ದ ಅಮೆರಿಕಾದ ವಾಯುಪಡೆ ಅಧಿಕಾರಿ 25 ವರ್ಷದ ಆರೋನ್ ಬುಶ್ನೆಲ್ ಮೃತಪಟ್ಟಿದ್ದಾರೆ. ಘಟನೆ ರವಿವಾರ ನಡೆದಿತ್ತು. ಅಮೆರಿಕದ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಆರೋನ್ ರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೂ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ರವಿವಾರ ಟ್ವಿಚ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆರಂಭಿಸಿದ್ದ ಆರೋನ್ ಬುಶ್ನೆಲ್ ಮಿಲಿಟರಿ ಸಮವಸ್ತ್ರ ಧರಿಸಿದ್ದು ಕಂಡು ಬಂದಿತ್ತು. ತಾವು ಪ್ರತಿಭಟನೆಯ ವಿಪರೀತ ಕ್ರಮಕ್ಕೆ ಮುಂದಾಗಿರುವುದಾಗಿ ಹಾಗೂ ಇನ್ನು ಗಾಝಾದಲ್ಲಿನ ನರಮೇಧದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂದಿದ್ದರು.
ಈ ಘಟನೆಗೂ ಮುನ್ನ ಆರೋನ್ ಹಲವಾರು ವರದಿಗಾರರು ಹಾಗೂ ಎಡಪಂಥೀಯ ವೆಬ್‌ಸೈಟ್‌ಗಳಿಗೆ ಇಮೇಲ್ ಮಾಡಿದ್ದರು.

“ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವ ನರಮೇಧದ ವಿರುದ್ಧ ತೀವ್ರ ರೂಪದ ಪ್ರತಿಭಟನೆಯನ್ನು ಇಂದು ನಾನು ಕೈಗೊಳ್ಳಲಿದ್ದೇನೆ” ಎಂದು ಆರೋನ್ ಇಮೇಲ್‌ನಲ್ಲಿ ಹೇಳಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ