ರಾಷ್ಟ್ರ ರಾಜಧಾನಿಗೆ ನೀರು ನೀಡುವಂತೆ ಒತ್ತಾಯಿಸಿ ಅನಿರ್ದಿಷ್ಟ ಉಪವಾಸದ ಪರಿಣಾಮವಾಗಿ ದೆಹಲಿ ಜಲ ಸಚಿವೆ ಅತಿಶಿ ಅವರ ಆರೋಗ್ಯ ಹದಗೆಟ್ಟ ನಂತರ ಅವರನ್ನು ಮಂಗಳವಾರ ಮುಂಜಾನೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಡಳಿತಾರೂಢ ಆಮ್ ಆದ್ಮಿ ಪಕ್ಷ ತಿಳಿಸಿದೆ. ಸಚಿವೆಯನ್ನು ಲೋಕ ನಾಯಕ ಆಸ್ಪತ್ರೆಯ ತುರ್ತು ಐಸಿಯುಗೆ ದಾಖಲಿಸಲಾಗಿದೆ ಎಂದು ಪಕ್ಷವು 'ಎಕ...
ನೂತನ ಸಂಸತ್ ಭವನ ಸೆಂಟ್ರಲ್ ವಿಸ್ಟಾದಲ್ಲಿ ಇಂದಿನಿಂದ 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭಗೊಂಡಿತು. ಪ್ರಮಾಣ ವಚನ ಸ್ವೀಕಾರದ ಸಂಪ್ರದಾಯದಂತೆ ಪ್ರಧಾನಿ ನರೇಂದ್ರ ಮೋದಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ಲೋಕಸಭಾ ಸ್ಪೀಕರ್ ಮುಂದಿದ್ದ ಪೀಠದ ಮುಂದೆ ಬಂದಾಗ ರಾಹುಲ್ ಗಾಂಧಿ ನೇತೃತ್ವದ ಇಂಡಿಯಾ ಒಕ್ಕೂಟದ ಸದಸ್ಯರು ಸಂವಿಧಾನದ ಪ್ರತಿ ಪ್ರ...
ಹಿಂಸಾಚಾರ ಪೀಡಿತ ಮಣಿಪುರದ ಹಲವು ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಅಧಿಕ ಭದ್ರತಾ ಪಡೆ ನಿಯೋಜನೆ ಮಾಡಿರುವುದರ ವಿರುದ್ಧ ಮತ್ತು ರಾಜ್ಯದ ಕಣಿವೆ ಜಿಲ್ಲೆಗಳ ಗಡಿಯಲ್ಲಿ ಕಾವಲು ಕಾಯುತ್ತಿದ್ದ ಗ್ರಾಮ ಸ್ವಯಂಸೇವಕರ ಬಂಧನದ ವಿರುದ್ಧ ಕಣಿವೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಫಾಲ್ನಲ್ಲಿ, ತಂಗ್ಮೈಬಾಂಡ್ ಡಿಎಂ ಕಾಲೇಜಿನ ...
ರಾಜ್ಯದಲ್ಲಿ ಮೀನಿನ ಬೆಲೆ ಗಗನಕ್ಕೇರುತ್ತಿದೆ. ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಯಂತ್ರ ಚಾಲಿತ ಬೋಟ್ ಮೂಲಕ ಮೀನುಗಾರಿಕೆಗೆ ರಾಜ್ಯದಲ್ಲಿ ನಿಷೇಧ ಹೇರಳಾಗಿದೆ. ಆದ್ದರಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ಮಾತ್ರ ಅವಕಾಶ ಇದೆ. ಆದರೆ ಈ ಮೀನುಗಾರಿಕೆಯಿಂದ ರಾಜ್ಯದ ಜನರ ಬೇಡಿಕೆಗೆ ತಕ್ಕಂತೆ ಮೀನನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ನೆಲೆಯಲ್ಲಿ ಓ...
ಅಧಿಕಾರಕ್ಕೆ ಬಂದ ತಕ್ಷಣ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಾಧ್ಯಮಗಳ ಮೇಲೆ ಪ್ರಹಾರ ನಡೆಸಿದ್ದಾರೆ. ನಾಲ್ಕು ಟಿವಿ ಚಾನೆಲ್ ಗಳ ಪ್ರಸಾರಕ್ಕೆ ತಡೆ ಹೇರಿದ್ದಾರೆ. ಟಿವಿ9,, ಎನ್ ಟಿವಿ, ಟೆನ್ ಟಿವಿ ಮತ್ತು ಸಾಕ್ಷಿ ಟಿವಿಗಳ ಪ್ರಸಾರಕ್ಕೆ ನಿರ್ಬಂಧ ವಿಧಿಸಿದ್ದಾರೆ ಎಂದು ಹೇಳಲಾಗಿದೆ. ಕೇಬಲ್ ಟಿವಿ ಆಪರೇಟರ್ ಗಳು ಈ ಟಿ...
ಈ ವರ್ಷದ ಆರಂಭದಲ್ಲಿ ಪರಿಶೀಲನಾ ಅಧಿಕಾರಿಗಳು ಮತ್ತು ಸಹಾಯಕ ಪರಿಶೀಲನಾ ಅಧಿಕಾರಿಗಳ ಹುದ್ದೆಗಳಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಆರು ಮಂದಿಯನ್ನು ಬಂಧಿಸಿದೆ. ಉತ್ತರ ಪ್ರದೇಶ ಲೋಕಸೇವಾ ಆಯೋಗ (ಯುಪಿಪಿಎಸ್ಸಿ) ಫೆಬ್ರವರಿ 11 ರಂದು ರಾಜ್ಯಾದ್ಯಂತ ಪರೀಕ್ಷೆ ನಡೆಸಿತ...
ಮೊಬೈಲ್ ಫೋನ್ನಲ್ಲಿ ಮೆಸೇಜಿಂಗ್ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಡ ಎಂದು ತಂದೆ ಹೇಳಿದ ನಂತರ 16 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಡೊಂಬಿವ್ಲಿ ಪ್ರದೇಶದ ನಿಲ್ಜೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ತನ್ನ ಮೊಬೈಲ್ ಫೋನ್ನಲ್ಲಿ ಸ್ನ್ಯಾಪ್ ಚಾಟ್ ಅ...
ನೀಟ್ ಪದವಿಪೂರ್ವ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಇಬ್ಬರು ಶಿಕ್ಷಕರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಈ ಹಗರಣದಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಲಾತೂರಿನ ಶಿಕ್ಷಕರಾದ ಸಂಜಯ್ ತುಕಾರಾಮ್ ಜಾಧವ್ ಮತ್ತು ಜಲೀಲ್ ಉಮರ್ಖಾನ್ ಪಠಾಣ್ ಅವರನ್ನು ನಾಂದೇಡ್ ಭಯೋತ್ಪಾದನಾ...
ತಮ್ಮ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದೇಶದಲ್ಲಿ ಜಾತಿ ಜನಗಣತಿ ನಡೆಸುವುದನ್ನು ಬೆಂಬಲಿಸುತ್ತದೆ ಮತ್ತು ಅದಕ್ಕೆ ಯಾವುದಾದರೂ ಮಾರ್ಗವನ್ನು ಕಂಡುಹಿಡಿಯಬೇಕು ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ. ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಠಾವಳೆ, ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ...
ಅಮೆರಿಕದ ಅರ್ಕಾನ್ಸಾಸ್ ನ ಸೂಪರ್ಮಾರ್ಕೆಟ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಆಂಧ್ರಪ್ರದೇಶ ಮೂಲದ 32 ವರ್ಷದ ವ್ಯಕ್ತಿ ಕೂಡ ಸೇರಿದ್ದಾರೆ. ಉತ್ತಮ ಜೀವನೋಪಾಯಕ್ಕಾಗಿ ಎಂಟು ತಿಂಗಳ ಹಿಂದೆ ಯುಎಸ್ ಗೆ ತೆರಳಿದ್ದ ದಾಸರಿ ಗೋಪಿಕೃಷ್ಣ ಸೂಪರ್ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಇದಕ್ಕೂ ಮುನ್ನ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ...