ಮಹಾದೇವ್ ಬೆಟ್ಟಿಂಗ್ ಅಪ್ಲಿಕೇಶನ್ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಶುಭಂ ಸೋನಿ ಅವರ ಹೇಳಿಕೆಗಳ ನಂತರ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ ನನ್ನನ್ನು ದೂಷಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ದುಬೈನಲ್ಲಿ ಜೂಜಿನ ವ್ಯವಹಾರವನ್ನು ಸ್ಥಾಪಿಸಲು ಬಘೇಲ್ ತನ್ನನ್ನು ಪ್ರ...
ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಬಸ್ ನಿಯಂತ್ರಣ ಕಳೆದುಕೊಂಡು ರೈಲ್ವೆ ಹಳಿಯ ಮೇಲೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ದೌಸಾ ಕಲೆಕ್ಟರೇಟ್ ವೃತ್ತದ ಬಳಿ ಈ ಘಟನೆ ನಡೆದಿದ್ದು, ಬಸ್ 30 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಅಪಘಾತದ ನಂತರ 28 ಜನರನ್ನು ಆಸ್ಪತ್ರೆಗೆ ಸೇರಿಸಲ...
ಸಮಾಜ ವಿರೋಧಿ ಶಕ್ತಿಗಳಿಂದ ಹಾನಿಕಾರಕ ವಿಷಯ ಹರಡುವುದನ್ನು ತಡೆಗಟ್ಟಲು ಮಣಿಪುರ ಸರ್ಕಾರವು ಮೊಬೈಲ್ ಇಂಟರ್ ನೆಟ್ ಸ್ಥಗಿತಗೊಳಿಸುವಿಕೆಯನ್ನು ನವೆಂಬರ್ 8 ರವರೆಗೆ ವಿಸ್ತರಿಸಿದೆ. ಈ ಅಂಶಗಳು ಸಾಮಾಜಿಕ ಮಾಧ್ಯಮವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ವಿಸ್ತರಣೆ ಅಗತ್ಯವಾಗಿದೆ ಎಂದು ಗೃಹ ಆಯುಕ್ತ ಟಿ ರಂಜಿತ್ ಸಿಂಗ್ ಅಧಿಸೂಚನೆಯಲ...
ನೀವು ನನಗೆ ಚುನಾವಣಾ ಕರ್ತವ್ಯಕ್ಕೆ ಹಾಜರಾಗಬೇಕು ಅಂತಾ ಹೇಳಿದ್ರೆ ಮೊದಲು ನನಗೆ ಮದುವೆ ಮಾಡಿಸಿ ಎಂದು ಶಿಕ್ಷಕರೊಬ್ಬರು ಸರ್ಕಾರಕ್ಕೆ ಪತ್ರ ಬರೆದು ಕೊನೆಗೆ ಸಸ್ಪೆಂಡ್ ಆಗಿರಿವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶ ಸತ್ನಾ ಜಿಲ್ಲೆಯ ಅಮರಪಟ್ಟಣದ ಶಾಲೆಯ ಶಿಕ್ಷಕ ಅಖಿಲೇಶ್ ಕುಮಾರ್ ಮಿಶ್ರಾ ಪತ್ರ ಬರೆದು ಅಮಾನತಾದ ವ್ಯಕ್ತಿ. ಇ...
ಸರ್ಕಾರಿ ಬಸ್ ಮೆಟ್ಟಿಲಲ್ಲಿ ನಿಂತು ಪ್ರಯಾಣ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಥಳಿಸಿದ್ದ ತಮಿಳುನಾಡು ಬಿಜೆಪಿ ಮುಖಂಡೆ ಹಾಗೂ ನಟಿ ರಂಜನಾ ನಾಚಿಯಾರ್ ಅವರನ್ನು ಬಂಧಿಸಲಾಗಿದೆ. ಕಾಂಚೀಪುರಂನ ಕುಂದ್ರತ್ತೂರು ಎಂಬಲ್ಲಿ ಸರ್ಕಾರಿ ಬಸ್ನಲ್ಲಿ ಕಂಡಕ್ಟರ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿದ್ಯಾರ್ಥಿಗಳಿಗೆ ಥಳಿಸಿದ್ದಲ್ಲದೇ ಸರ್ಕಾರಿ ಸಿಬ್ಬಂ...
ಖಲಿಸ್ತಾನಿ ಭಯೋತ್ಪಾದಕ ಗುರ್ ಪತ್ವಂತ್ ಸಿಂಗ್ ಪನ್ನುನ್ ಅವರು ನವೆಂಬರ್ 19 ರಂದು ಏರ್ ಇಂಡಿಯಾ ಮೂಲಕ ಪ್ರಯಾಣಿಸಿದ್ರೆ ಹುಷಾರ್ ಎಂದು ಜನರಿಗೆ ಬೆದರಿಕೆ ಹಾಕುತ್ತಿರುವ ಹೊಸ ವೀಡಿಯೊ ವೈರಲ್ ಆಗಿದೆ. ನವೆಂಬರ್ 19 ರಂದು ಏರ್ ಇಂಡಿಯಾ ಮೂಲಕ ಹಾರಾಟ ನಡೆಸದಂತೆ ನಾವು ಸಿಖ್ ಜನರನ್ನು ಕೇಳುತ್ತಿದ್ದೇವೆ. ಜಾಗತಿಕ ದಿಗ್ಬಂಧನ ಉಂಟಾಗುತ್ತದೆ. ನವೆಂಬರ...
ಗುಜರಾತ್: ಕೋವಿಡ್ ಬಳಿಕ ಹಠಾತ್ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ದೇಶಾದ್ಯಂತ ಕಳವಳ ಇದೆ. ಈ ಉತ್ತರವಿಲ್ಲದ ಸಾವಿನ ಪ್ರಶ್ನೆಗಳ ನಡುವೆಯೇ ಅಲ್ಲೊಬ್ಬರು ಇಲ್ಲೊಬ್ಬರು ಸಾವಿನ ದವಡೆಗೆ ಸಿಲುಕುತ್ತಿದ್ದಾರೆ. ಇದೀಗ ಗುಜರಾತ್ ನ ರಾಜ್ ಕೋಟ್ ನಲ್ಲಿ ವಿದ್ಯಾರ್ಥಿನಿಯೋರ್ವಳು ಹಠಾತ್ ಸಾವಿಗೀಡಾಗಿದ್ದಾಳೆ. ನವೆಂಬರ್ 3ರಂದು ಈ ಘಟ...
ಕಾನ್ಪುರ: ಕಾನೂನನ್ನು ಕಾಯ ಬೇಕಿದ್ದ ಪೊಲೀಸ್ ಪೇದೆಗಳಿಬ್ಬರು ತಾವೇ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಿ ವಿಕೃತಿ ಮೆರೆದಿರುವ ಘಟನೆ ಕಾನ್ಪುರ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಡೆದಿದೆ. ಹೇಮಂತ್ ಕುಮಾರ್ ಮತ್ತು ಲೋಕೇಶ್ ರಜಪೂತ್ ಎಂಬ ಇಬ್ಬರು ಪೊಲೀಸ್ ಪೇದೆಗಳು ತಿಂಡಿ ತಿನ್ನಲು ಸ್ಥಳೀಯ ಗಾಡಿ ಅಂಗಡಿಯೊಂದಕ್ಕೆ ಹೋಗಿದ್ದರು. ಕುಡಿತದ...
ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಮಹದ್ ಎಂಐಡಿಸಿ ಪ್ರದೇಶದಲ್ಲಿರುವ ಬ್ಲೂ ಜೆಟ್ ಹೆಲ್ತ್ ಕೇರ್ ಲಿಮಿಟೆಡ್ ಕಂಪನಿಯ ಆವರಣದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ಪರಿಣಾಮವಾಗಿ ಔಷಧೀಯ ಕಂಪನಿಗೆ ವಿನಾಶಕಾರಿ ಬೆಂಕಿ ಆವರಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ. ಈ ಸ್ಥಳದಲ್ಲಿ ಸಂಗ್ರಹಿಸಿದ ರಾಸಾಯನಿಕಗಳಿಂದಾಗ...
ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್ಸಿಆರ್) ಇಂದು ಭೂಕಂಪನವಾಗಿದೆ. ಜನರು ತಮ್ಮ ನಿವಾಸಗಳಿಂದ ಹೊರಬರಲು ಪರದಾಡಿದ್ದಾರೆ. ರಾತ್ರಿ 11:32 ಕ್ಕೆ ಪ್ರಬಲ ಭೂಕಂಪ ಸಂಭವಿಸಿದ್ದು, ಅದರ ಕೇಂದ್ರಬಿಂದು ನೇಪಾಳದಲ್ಲಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.4ರಷ್ಟಿತ್ತು. ಆರಂಭದಲ್ಲಿ 6.2 ತೀವ್ರತೆಯೊಂದಿಗೆ ಭೂಕಂಪನವಾಗಿತ್ತು. ಇದು...