ಸೂರತ್: ಪ್ರೇಮ ನಿವೇದನೆಯನ್ನು ನಿರಾಕರಿಸಿದ ಯುವತಿಯನ್ನು ಯುವಕನೋರ್ವ ಹಾಡಹಗಲೇ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುಜರಾತ್ ನ ಸೂರತ್ ನ ಕಮ್ರೇಜ್ ಬಳಿಯ ಪಸೋದರ ಎಂಬಲ್ಲಿ ನಡೆದಿದೆ. 21 ವರ್ಷ ವಯಸ್ಸಿನ ಗ್ರೀಷ್ಮಾ ವೆಕಾರಿಯಾ ಎಂಬವರು ಹತ್ಯೆಗೀಡಾಗಿರುವ ಯುವತಿಯಾಗಿದ್ದು, ಫೆನಿಲ್ ಗೋಯಾನಿ ಎಂಬಾತ ಹತ್ಯೆ ಆರೋಪಿಯಾಗಿದ್ದಾನೆ....
ಚಂಡೀಗಢ: ಕ್ಯಾಬ್ ಚಾಲಕನಿಗೆ ವಿದೇಶಿ ಮಹಿಳೆಯೊಬ್ಬಳು ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿರುವ ಘಟನೆ ಗುರುಗ್ರಾಮ್ನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಮಹಿಳೆ ಬುರ್ಕಾ ಧರಿಸಿ ಬೆಳಗ್ಗೆ 11 ಗಂಟೆ ಸುಮಾರಿಗೆ ಗುರುಗ್ರಾಮದ ಸೈಬರ್ ಸಿಟಿ ಪ್ರದೇಶದಿಂದ ಕ್ಯಾಬ್ ಹತ್ತಿದ್ದಾಳೆ. ನಂತರ ಚಾಲಕನಿಗೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್...
ಲಕ್ನೋ: ನಿಂತಿದ್ದ ಕಂಟೈನರ್ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ. ರಾಮಸ್ನೇಹಿ ಘಾಟ್ ಕೊತ್ವಾಲಿ ಪ್ರದೇಶದ ನಾರಾಯಣಪುರ ಗ್ರಾಮದ ಬಳಿ ಮುಂಜಾನೆ 3 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ವೇಗವಾ...
ಮುಂಬೈ: ಬಾಲಿವುಡ್ನ ಹಿರಿಯ ಗಾಯಕ, ಸಂಗೀತ ನಿದೇರ್ಶಕ ಬಪ್ಪಿ ಲಹರಿ ಅನಾರೋಗ್ಯದಿಂದಾಗಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಒಂದು ತಿಂಗಳಿಂದ ಮುಂಬೈನ ಜುಹುವಿನಲ್ಲಿರುವ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಸೋಮವಾರವಷ್ಟೇ ಡಿಸ್ಚಾರ್ಜ್ ಆಗಿದ್ದರು. ಮನೆಗೆ ತೆರಳಿದ ನಂತರ ಮಂಗಳವಾರ ಮತ್ತೆ ಅವರ ಆರ...
ದೆಹಲಿ: ರೈಲು ಹಳಿಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ದೆಹಲಿಯ ಗುರುಗ್ರಾಮದಲ್ಲಿ ನಡೆದಿದೆ. ದೂರದಲ್ಲಿ ರೈಲು ಬರುತ್ತಿರುವ ವೇಳೆ ಸೆಲ್ಫಿ ತೆಗೆದರೆ ಚೆನ್ನಾಗಿ ಬರುತ್ತದೆ ಎಂದು ನಾಲ್ವರು ಯುವಕರಾದ ದೇವಿಲಾಲ್ ಕಾಲೋನಿಯ ಸಮೀರ್ (19), ಮೊಹಮ್ಮದ್ ಅನಸ್...
ಚಂಡೀಗಢ: ಕೆಂಪು ಕೋಟೆಯಲ್ಲಿ ರೈತರ ಧ್ವಜ ಹಾರಿಸಿದ ಗಲಾಟೆಯ ಪ್ರಮುಖ ಆರೋಪಿ ನಟ ದೀಪ್ ಸಿಧು ಕಾರು ಅಪಘಾತದಲ್ಲಿ ಮೃತಪಟ್ಟಿದ್ದು, ಮಂಗಳವಾರ ರಾತ್ರಿ ಈ ಅಪಘಾತ ಸಂಭವಿಸಿದೆ. ದೆಹಲಿಯಿಂದ ಮಂಗಳವಾರ ಸ್ಕಾರ್ಫಿಯೋ ಕಾರಿನಲ್ಲಿ ಪಂಜಾಬ್ ಗೆ ತೆರಳುತ್ತಿದ್ದ ವೇಳೆ ವೆಸ್ಟರ್ನ್ ಪೆರಿಪರಲ್ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಬರುತ್ತಿದ್ದ ವೇಳೆ ಸಿಘು ...
ಮುಂಬೈ: ವಾಟ್ಸಾಪ್ನಲ್ಲಿ ಮಗಳು ಹಾಕಿದ್ದ ಸ್ಟೇಟಸ್ನಿಂದ ತಾಯಿ ಕೊಲೆಯಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. 20 ವರ್ಷದ ಯುವತಿ ಇತ್ತೀಚೆಗೆ ವಾಟ್ಸಾಪ್ನಲ್ಲಿ ಸ್ಟೇಟಸ್ ಒಂದನ್ನು ಹಾಕಿದ್ದು, ಅದು ಯಾರಿಗೋ ಬೈಯುವಂತಿತ್ತು. ಅದನ್ನು ಕಂಡ ಆಕೆಯ ಸ್ನೇಹಿತೆಯೊಬ್ಬಳು, ತನಗೆ ಬೈಯುವುದಕ್ಕೆ ಈ ಸ್ಟೇಟಸ್ ಹಾಕಿದ್ದಾ...
ರಾಂಚಿ: ಡೊರಾಂಡಾ ಮೇವು ಹಗರಣದ ಪ್ರಕರಣದಲ್ಲಿ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ದೋಷಿ ಎಂದು ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದಲ್ಲಿ 36 ಮಂದಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಪ್ರಮುಖ ಆರೋಪಿ ಲಾಲೂ ಪ್ರಸಾದ್ ಯಾದವ್ ಶಿಕ್ಷೆಯನ್ನು ಫೆ. 21ರಂದು...
ಜೈಪುರ: ಆರೋಪಿಯೊಬ್ಬನನ್ನು ದೆಹಲಿಯಿಂದ ಗುಜರಾತ್ ಕರೆತರುತ್ತಿದ್ದ ಪೊಲೀಸ್ ವಾಹನವೊಂದು ಅಪಘಾತಕ್ಕೀಡಾಗಿದ್ದು, ನಾಲ್ವರು ಪೊಲೀಸರು ಸೇರಿದಂತೆ ಐದು ಮಂದಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ. ದೆಹಲಿಯಿಂದ ಗುಜರಾತ್ ಆರೋಪಿಯನ್ನು ಕರೆತರುತ್ತಿದ್ದ ಗುಜರಾತ್ ಪೊಲೀಸರ ಫಾರ್...
ಬೆಂಗಳೂರು: ಹುಟ್ಟಿದ ಮಗು 6 ತಿಂಗಳಿಗೇ ಮೃತಪಟ್ಟಿದ್ದರಿಂದ ಮನನೊಂದ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಎಸ್.ಜಿ.ಪಾಳ್ಯದ ತಾವರೆಕೆರೆಯಲ್ಲಿ ನಡೆದಿದ್ದು, ಈ ಆತ್ಮಹತ್ಯೆಯ ಬಗ್ಗೆ ಅನುಮಾನ ಕೂಡ ಸೃಷ್ಟಿಯಾಗಿದೆ. ಮಂಡ್ಯ ಮೂಲದ ಪಲ್ಲವಿ ಎಂಬವರು ಆತ್ಮಹತ್ಯೆಗೆ ಶರಣಾದವರು ಎಂದು ಹೇಳಲಾಗಿದೆ. ನಾಲ್ಕು ವರ್ಷಗಳ ಹಿಂದೆ ಇವರು ಸಿದ್ದ...