ನವದೆಹಲಿ: ದೇಶದ ಜನರಿಗೆ ಮತ್ತೊಮ್ಮೆ ಗ್ಯಾಸ್ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಪೆಟ್ರೋಲಿಯಂ ಕಂಪೆನಿಗಳು ಬೆಳ್ಳಂಬೆಳಗ್ಗೆ ಬಿಗ್ ಶಾಕ್ ನೀಡಿದೆ, ಎಲ್ ಪಿಜಿ ಸಿಲಿಂಡರ್ ಗಳಿಗೆ ಮತ್ತೆ 15 ರೂಪಾಯಿ ಹೆಚ್ಚಿಸಲಾಗಿದೆ. ಈ ಮೂಲಕ ಗ್ರಾಹಕರ ಜೇಬಿಗೆ ಮತ್ತೆ ಕನ್ನ ಹಾಕಲಾಗಿದೆ. 14.2 KGಯ ಗೃಹಬಳಕೆ ಸಿಲಿಂಡರ್ ಬೆಲೆಯನ್ನು ಯಾವುದೇ ಸಬ್ಸಿಡಿ ಇಲ್...
ಜೈಪುರ: 9 ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ 25 ವರ್ಷ ವಯಸ್ಸಿನ ಅಪರಾಧಿಗೆ ಕೋರ್ಟ್ ಕೃತ್ಯ ನಡೆದು ಕೇವಲ 9 ದಿನಗಳಲ್ಲಿಯೇ ಶಿಕ್ಷೆ ಪ್ರಕಟ ಮಾಡುವ ಮೂಲಕ ಹೊಸ ದಾಖಲೆಯೊಂದು ಸೃಷ್ಟಿಯಾಗಿದೆ. ಜೈಪುರ ನ್ಯಾಯಾಲಯ ಮಂಗಳವಾರ ಅತ್ಯಾಚಾರ ಪ್ರಕರಣದ ಅಪರಾಧಿ ಕಮಲೇಶ್ ಮೀನಾ ಎಂಬಾತನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ...
ಲಖೀಂಪುರ್ ಖೇರಿ: ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ನಡೆದ ರೈತರ ಪ್ರತಿಭಟನೆಯ ವೇಳೆ ಸಚಿವರ ಪುತ್ರ ಕಾರು ಹರಿಸಿದ ಪರಿಣಾಮ ಗಾಯಗೊಂಡು ಮೃತಪಟ್ಟ 19 ವರ್ಷ ವಯಸ್ಸಿನ ಯುವಕನ ತಂದೆ ಬಿಕ್ಕಿಬಿಕ್ಕಿ ಅಳುತ್ತ, ಕೊನೆಯ ಕ್ಷಣದಲ್ಲಿ ತನ್ನ ಮಗನೊಂದಿಗೆ ಆಡಿದ ಮಾತುಗಳನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನೂ ಬಾಳಿ ಬದುಕಬೇಕಿದ್ದ ಲವಪ್ರೀತ...
ಲಖೀಂಪುರ್ ಖೇರ್: ಲಖೀಂಪುರ್ ಖೇರ್ ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಎಫ್ ಐಆರ್ ನಲ್ಲಿ ಕೇಂದ್ರ ಸಚಿವರ ಪುತ್ರ ಅಶಿಶ್ ಮಿಶ್ರಾ ಅಲಿಯಾಸ್ ಮೋನು ಪ್ರತಿಭಟನಾನಿರತ ರೈತರನ್ನು ಕೆಣಕಿ, ಅವರ ಮೇಲೆ ಗುಂಡು ಹಾರಿಸಿರುವುದನ್ನು ಉಲ್ಲೇಖಿಸಲಾಗಿದೆ. ಕಾರಿನಲ್ಲಿ ಕುಳಿತಿದ್ದ ಸಚಿವರ ಪುತ್ರ ಆಶಿಶ್ ...
ಅಸ್ಸಾಂ: ತೂಗು ಸೇತುವೆಯನ್ನು ದಾಟುತ್ತಿದ್ದ ವೇಳೆ ಸೇತುವೆ ಮುರಿದು ಬಿದ್ದ ಘಟನೆ ಅಸ್ಸಾಂನ ಕರೀಂ ಗಂಜ್ ಜಿಲ್ಲೆಯಲ್ಲಿ ನಡೆದಿದ್ದು, ಪರಿಣಾಮವಾಗಿ ಸುಮಾರು 30 ವಿದ್ಯಾರ್ಥಿಗಳು ನದಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಸ್ಸಾಂ ಕರೀಂ ಗಂಜ್ ಜಿಲ್ಲೆಯ ಸಿಂಗ್ಲಾ ನದಿಯ ಮೇಲೆ ನಿರ್ಮಾಣವಾಗಿರುವ ತೂಗು ಸೇತುವೆ ವಿದ್ಯಾರ್ಥಿಗಳು ಸೇತುವೆಯನ...
ಖಮ್ಮಂ: ವಿವಾಹಿತನೋರ್ವನ ಮಾನಸಿಕ ಕಿರುಕುಳದಿಂದ ಬೇಸತ್ತು, ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದ್ದು, ತನ್ನ ಕುಟುಂಬಕ್ಕೆ ಆಧಾರವಾಗಿದ್ದ ಬಾಲಕಿಯ ಸಾವಿನಿಂದಾಗಿ ಆಕೆಯ ಕುಟುಂಬ ಅನಾಥವಾಗಿದೆ. ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ಸೋಮವಾರ ಈ ಘಟನೆ ನಡೆದಿದ್ದು, 17 ವರ್ಷ ವಯಸ್ಸಿನ ಕುಸುಮರಾಜು ವ...
ನವದೆಹಲಿ: ಬಾಂಗ್ಲಾದೇಶದಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದ ಆರೋಪಿಯೋರ್ವನನ್ನು ಮಧ್ಯಪ್ರದೇಶದ ಇಂದೂರ್ ಪೊಲೀಸರು ಬಂಧಿಸಿದ್ದು, ಈ ಮೂಲಕ ಬೃಹತ್ ವಂಚನೆ ಹಾಗೂ ವೇಶ್ಯಾವಾಟಿಕೆಯೊಂದು ಬೆಳಕಿಗೆ ಬಂದಿದೆ. ಮುನೀರ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಬಂಧಿಸಿದ ಪೊಲೀಸರು, ತಮ್ಮ ಶೈಲಿಯಲ್ಲಿ ವಿಚಾರಣೆ ...
ನವದೆಹಲಿ: ಪ್ರಮುಖ ಸಾಮಾಜಿಕ ಜಾಲತಾಣಗಳಾಗಿರುವ ವಾಟ್ಸಾಪ್, ಮೆಸೆಂಜರ್, ಫೇಸ್ ಬುಕ್, ಇನ್ಟಾಗ್ರಾಮ್ ಸೋಮವಾರ ರಾತ್ರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಇದರಿಂದಾಗಿ ಸಾಮಾಜಿಕ ಜಾಲತಾಣಗಳ ಬಳಕೆ ಸಾಧ್ಯವಾಗದೇ ಬಳಕೆದಾರರು ಗೊಂದಲಕ್ಕೀಡಾಗಿದ್ದಾರೆ. ಈ ಹಿಂದೆಯೂ ಹಲವು ಬಾರಿ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಂಡಿದ್ದರೂ, ತಕ್ಷಣದಲ್ಲಿ ಈ ಸಮಸ...
ಕೋಲ್ಕತ್ತ: ದೇಶದಲ್ಲಿ ನಿರಂಕುಶ ಪ್ರಭುತ್ವ ಅಸ್ತಿತ್ವದಲ್ಲಿದ್ದು, ಉತ್ತರ ಪ್ರದೇಶದಲ್ಲಿ ಕೊಲೆಗಡುಕ ಸರ್ಕಾರವಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದು, ಲಖಿಂಪುರ್ ಖೇರಿ ಘಟನೆಯನ್ನು ಉಲ್ಲೇಖಿಸಿ ಅವರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಇಂದು ನಡೆಯುತ್ತಿರುವ ಘಟನೆಗಳು ...
ವೆಲ್ಲೂರ್: ಜ್ಯೂಸ್ ಎಂದು ಭಾವಿಸಿ ಆಲ್ಕೋ ಹಾಲ್ ಸೇವಿಸಿದ್ದ 5 ವರ್ಷ ವಯಸ್ಸಿನ ಬಾಲಕ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಅಣ್ಣಾನಗರ್ ನಲ್ಲಿ ನಡೆದಿದ್ದು, ತಾತ ಕುಡಿಯಲು ತಂದಿಟ್ಟಿದ್ದ ಬ್ರಾಂಡಿ ಮೊಮ್ಮಗನ ಸಾವಿಗೆ ಕಾರಣವಾಗಿದೆ. 62 ವರ್ಷ ವಯಸ್ಸಿನ ತಾತಾ ಚಿನ್ನಸ್ವಾಮಿ ತಮ್ಮ ರೂಮ್ ನಲ್ಲಿ ಬ್ರಾಂಡಿ ಬಾಟಲಿ ಇಟ್ಟಿದ್ದು, ಅವರ ರೂಮ್ ಗೆ ಯ...