ಫೋಕ್ಸೋ ಪ್ರಕರಣದಲ್ಲಿ ಮುರುಗಶ್ರೀ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ 2 ದಿನಗಳ ಕಾಲ ಸಂಧಾನ ನಡೆದಿತ್ತು ಎನ್ನಲಾಗುತ್ತಿದ್ದು, ಸಂಧಾನದಿಂದ ಯಾವುದೇ ಪ್ರಯೋಜನವಾಗಿರಲಿಲ್ಲ ಎನ್ನಲಾಗಿದೆ. ಸದ್ಯದ ಮಾಹಿತಿ ಪ್ರಕಾರ, ಸಂಧಾನ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಳ್ಳಲು ಸ್ವಾಮೀಜಿ ತೆರಳಿದ್ದರು ಎ...
ಚಿತ್ರದುರ್ಗ: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಮುರುಘಾ ಶ್ರೀಯನ್ನು ಇಂದು ಬಂಧಿಸಲಾಗಿದ್ದು, ಇಂದು ಬೆಳಗ್ಗಿನಿಂದ ಸ್ವಾಮೀಜಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾಗಿ ಹೇಳಲಾಗುತ್ತಿತ್ತು. ಇದೀಗ ಅವರ ಬಂಧನವಾಗಿದೆ. ಹಾವೇರಿ ಜಿಲ್ಲೆಯಲ್ಲಿರುವ ಬಂಕಾಪುರ ಟೋಲ್ ಬಳಿ ಶ್ರೀಯನ್ನು ಬಂಧಿಸಲಾಗಿದೆ. ಇದೀಗ ಚಿತ್ರದುರ್ಗಕ್ಕೆ ಸ್ವಾಮೀಜಿ...
ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಆಳಸಮದ್ರ ಬೋಟ್ ಮಂಗಳೂರು ಸಮೀಪ ಸಮುದ್ರ ಮಧ್ಯೆ ಮುಳುಗಡೆಗೊಂಡಿದ್ದು ಬೋಟಿನಲ್ಲಿದ್ದ 10 ಮಂದಿ ತಮಿಳುನಾಡಿನ ಮೀನುಗಾರರನ್ನು ರಕ್ಷಿಸಲಾಗಿದೆ. ಮಲ್ಪೆಯ ಮಹೇಶ್ ಕುಂದರ್ ಎಂಬವರಿಗೆ ಸೇರಿದ ಮಕರಧ್ವಜ ಹೆಸರಿನ ಆಳಸಮುದ್ರ ಬೋಟು ಆ.17ರಂದು ಸಂಜೆ ಮಲ್ಪೆ ಬಂದರಿನಿಂದ ಮೀನುಗಾರಿಕೆ ತೆರಳಿತ್ತು. ಆ.23ರ...
ಬೆಳ್ತಂಗಡಿ; ಪ್ರವಾಸೋದ್ಯಮ ಅಭಿವೃದ್ದಿಯ ದೃಷ್ಟಿಯಿಂದ ಹಾಗೂ ಶ್ರೀ ಕ್ಷೇತ್ರಕ್ಕೆ ಬರುವ ಯಾತ್ರಿಕರಿಗೆ ಪ್ರಯೋಜನವಾಗುವಂತೆ ಧರ್ಮಸ್ಥಳದಲ್ಲಿ ಸಣ್ಣ ವಿಮಾನ ನಿಲ್ದಾಣ ನಿರ್ಮಿಸುವುದಾಗಿ ರಾಜ್ಯ ಸರಕಾರದ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಹೇಳಿದರು. ಅವರು ಬೆಳ್ತಂಗಡಿಯಲ್ಲಿ ಶನಿವಾರ ವಸತಿ ಇಲಾಖೆಯಿಂದ ತಾಲೂಕಿನ ಫಲಾನುಭಾ...
ಕಡಬ: ಗುಡ್ಡವೊಂದರಲ್ಲಿ ಗುಂಡಿ ತೆಗೆಯುವ ವೇಳೆ ಗುಹೆಯೊಂದು ಪತ್ತೆಯಾಗಿ ಅದರಲ್ಲಿ ಪ್ರಾಚೀನ ಕಾಲದ ಮಣ್ಣಿನ ಪರಿಕರಗಳು ಪತ್ತೆಯಾಗಿರುವ ಕುತೂಹಲಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲ ಗ್ರಾಮದ ಕಲ್ಲೆಂಬಿ ಎಂಬಲ್ಲಿ ನಡೆದಿದೆ. ಕಲ್ಲೆಂಬಿ ವಿಶ್ವನಾಥ ಗೌಡ ಎಂಬುವವರ ಜಮೀನಿನಲ್ಲಿ ಈ ಪ್ರಾಚೀನ ಪರಿಕರಗಳು ಪತ್ತೆಯಾಗಿವೆ. ...
ಬೆಂಗಳೂರು: ಮುರುಗಶ್ರೀ(Murugha Sharanaru)ರ ಮೇಲೆ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಯಡಿಯೂರಪ್ಪನವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. "ಅವರ ಬಗ್ಗೆ ಆ ರೀತಿ ಸುಳ್ಳು ಆರೋಪ ಮಾಡಿದ್ದಾರೆ. ಅದರಲ್ಲಿ ಸತ್ಯಾಂಶವಿಲ್ಲ" ಎಂದು ಹೇಳಿರುವ ಬಿಎಸ್ ವೈ "ತನಿಖೆ ಆದ್ಮೇಲೆ ಸತ್ಯ ಹೊರ ಬರುತ್ತದೆ" ಎಂದು ಹೇಳಿದ್ದಾರೆ. ...
ಚಿತ್ರದುರ್ಗ: ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿದ್ದು, ಮಠದ ಆಡಳಿತಾಧಿಕಾರಿ ಬಸವರಾಜನ್ ವಿರುದ್ಧವೂ ಅತ್ಯಾಚಾರ ಯತ್ನ ಕೇಸ್ ದಾಖಲಾಗಿದೆ. ಈ ನಡುವೆ ಆರೋಪದ ಹಿನ್ನೆಲೆಯಲ್ಲಿ ಮಠದಲ್ಲಿ ಶ್ರೀಗಳು ಸಲಹಾ ಸಮಿತಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮುರುಘಾಶ್ರೀ, ನಾನು ಸಮರಕ್ಕೂ ಸಿದ್ಧ, ಸಂಧಾನಕ್ಕೂ ಸಿದ್ಧ...
ಮೈಸೂರು: ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಡಾ.ಶಿವರಾತ್ರಿ ಮುರುಘಾ ಶರಣರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ತನ್ನ ಮಠದ ಹಲವು ವಿದ್ಯಾರ್ಥಿನಿಯರಿಗೆ ಸ್ವಾಮೀಜಿ ಲೈಂಗಿಕವಾಗಿ ತೊಂದರೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಚಿತ್ರದುರ್ಗದ ಬೃಹನ್ಮಠದ ಆಡಳಿತದಲ್ಲಿರುವ ವಿದ್ಯಾರ್ಥಿನಿಲಯದ ಹಲವು ವಿದ್ಯಾರ್ಥಿನಿಯರಿಗೆ ಸ...
ಮೈಸೂರು: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಿಎಂ ಅವರ ಕೊನೆಯ ಸಹೋದರ ರಾಮೇಗೌಡ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಮೈಸೂರಿನ ಸಿದ್ದರಾಮನಹುಂಡಿಯಲ್ಲಿ ವಾಸವಾಗಿದ್ದ ಸಿದ್ದರಾಮೇಗೌಡ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಮೇಗೌಡರನ್ನು ಸಿದ್ದರಾಮಯ್ಯನವರು ...
ಬೆಳಗಾವಿ: ಜಿಲ್ಲೆಯ ಗಾಲ್ಫ್ ಮೈದಾನದಲ್ಲಿ ಚಿರತೆ ರಾಜಾರೋಷವಾಗಿ ತಿರುಗಾಡುತ್ತಿದ್ದು, ದಿನವೊಂದಕ್ಕೆ 3 ಲಕ್ಷ ರೂ.ವರೆಗೆ ಖರ್ಚಾಗುತ್ತಿರೋದು ಬಿಟ್ಟರೆ, ಈವರೆಗೆ ಚಿರತೆಯನ್ನು ಹಿಡಿಯಲು ಸಾಧ್ಯವಾಗಿಲ್ಲ. ಈ ನಡುವೆ ಸಾರ್ವಜನಿಕರು ವಿವಿಧ ಟ್ರೋಲ್ ಗಳ ಮೂಲಕ ಸರ್ಕಾರದ ನಿರ್ಲಕ್ಷ್ಯತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಚಿರತೆ...