ಕಡಬ: “ಗ್ರಾಮಕ್ಕೆ ನೆಟ್ ವರ್ಕ್ ಇಲ್ಲದಿದ್ದರೂ, ಹೆಸರಿಗೆ ಡಿಜಿಟಲ್ ಇಂಡಿಯಾ” ಈ ರೀತಿಯ ಹೊಸ ಗಾದೆ ಮಾತುಗಳು ಸೃಷ್ಟಿಯಾಗುವ ಕಾಲ ಇನ್ನು ಬಹಳ ದೂರ ಇಲ್ಲ ಎಂದೆನಿಸುತ್ತಿದೆ. ಇತ್ತೀಚೆಗೆ ರಾಜ್ಯದ ಆಹಾರ ಸಚಿವರು, ಆಹಾರ ಇಲ್ಲದಿದ್ದರೆ ಸತ್ತು ಹೋಗಿ ಎಂದು ಹೇಳಿಕೆ ನೀಡಿದ್ದರು. ಆದರೆ ಅಂತಹ ಪರಿಸ್ಥಿತಿ ಬರಲು ರಾಜ್ಯದಲ್ಲಿ ಇನ್ನು ಹೆಚ್ಚು ಕಾಲ ...
ಮೈಸೂರು: ವ್ಯಕ್ತಿಯೋರ್ವ ಮನೆ ಮಂದಿಯ ಮೇಲೆಯೇ ದಾಳಿ ನಡೆಸಿ ನಾಲ್ವರನ್ನು ಹತ್ಯೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆಸಿದ್ದು, ಮದ್ಯದ ಅಮಲಿನಲ್ಲಿ ತನ್ನ ಗರ್ಭಿಣಿ ಪತ್ನಿ, ಇಬ್ಬರು ಸಣ್ಣ ಮಕ್ಕಳು ಅತ್ತೆಯನ್ನು ಆರೋಪಿ ಹತ್ಯೆ ಮಾಡಿದ್ದಾನೆ. ಸರಗೂರು ಠಾಣಾ ವ್ಯಾಪ್ತಿಯ ಚಾಮೇಗೌಡನಹುಂಡಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ಈ ಘಟನೆ ನಡೆದಿದ್ದು, ...
ಬೆಳಗಾವಿ: ಹಿಂದೂ ಧರ್ಮಿಯರು ಸೇರಿದಂತೆ ಕೊವಿಡ್ ನಿಂದ ಮೃತಪಟ್ಟ ಎಲ್ಲ ಜಾತಿ, ಧರ್ಮಗಳ ಜನರ ಮೃತದೇಹಗಳಿಗೆ ಮುಸ್ಲಿಮ್ ಯುವಕರು ಹೆಗಲು ನೀಡುತ್ತಿದ್ದು, ಧರ್ಮದ ಹೆಸರಿನಲ್ಲಿ ಉದ್ದುದ್ದ ಭಾಷಣ ಮಾಡುತ್ತಾ, ಸಮಾಜದಲ್ಲಿ ಕಲಹ ಸೃಷ್ಟಿಸಿದ ದೊಡ್ಡ ದೊಡ್ಡ ನಾಯಕರು ಮನೆಯಿಂದ ಹೊರ ಬಾರದೇ ಇರುವ ಸಂದರ್ಭದಲ್ಲಿಯೇ ದೇಶದ ಮೂಲೆ ಮೂಲೆಗಳಲ್ಲಿಯೂ ಮುಸ್ಲಿಮ್ ಯ...
ಹಾಸನ: ಕೊರೊನಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಮಾದರಿಯ ಕರ್ಫ್ಯೂ ಜಾರಿಯಾಗಿದೆ. ಈ ನಡುವೆ ಉತ್ಸವ, ಜಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಿಂತು ಹೋಗಿವೆ. ಆದರೆ ಅರ್ಚಕರೇ, ಉತ್ಸವ ಜಾತ್ರೆ ಬೇಡ ಎಂದು ಹೇಳಿದರೂ ಜನ ಕೇಳುತ್ತಿಲ್ಲ. ಉತ್ಸವ ಬೇಡ ಎಂದು ಹೇಳಿದ ಇಲ್ಲೊಬ್ಬ ಅರ್ಚಕನಿಗೆ ಗ್ರಾಮದ ಭಕ್ತರು ಹಿಗ್ಗಾಮುಗ್ಗಾ ಥಳಿಸಿದ್ದಾರ...
ಚಿಕ್ಕಮಗಳೂರು: ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧನಾಗಿದ್ದ ಯುವಕನೋರ್ವ ಕೊವಿಡ್ ಸೋಂಕಿಗೆ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ದೇವರಕೊಡಿಗೆ ಗ್ರಾಮದಲ್ಲಿ ನಡೆದಿದೆ. 3 ವರ್ಷ ವಯಸ್ಸಿನ ಪೃಥ್ವಿರಾಜ್ ಮೃತಪಟ್ಟ ಯುವಕನಾಗಿದ್ದು, 10 ದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ತಮ್ಮ ಗ್ರಾಮಕ್ಕೆ ಬಂದಿದ್ದರು. ಅವರಿಗೆ ಕೊವ...
ಬೆಂಗಳೂರು: ಲಾಕ್ ಡೌನ್ ಮಾದರಿಯ ಕಠಿಣ ಕ್ರಮವನ್ನು ಸರ್ಕಾರ ಜಾರಿಗೊಳಿಸಿರುವ ಬೆನ್ನಲ್ಲೇ ಇದೀಗ ರಾಜ್ಯದ ಜನತೆಗೆ ಬಿಗ್ ಶಾಕ್ ನೀಡಿರುವ ರಾಜ್ಯ ಸರ್ಕಾರ ಇದೀಗ ವಿದ್ಯಾರ್ಥಿಗಳ ಪೋಷಕರಿಗೆ ಸಂಕಷ್ಟ ತಂದೊಡ್ಡಿದೆ. ರಾಜ್ಯದ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಬೋಧನಾ ಶುಲ್ಕ ಪಡೆಯಲು ಅನುಮತಿ ನೀಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿ...
ರಾಯಚೂರು: ಮರಳು ಸಾಗಣೆಯ ಟ್ರ್ಯಾಕ್ಟರ್ ಮಗುಚಿ ಬಿದ್ದ ಪರಿಣಾಮ ಸಹೋದರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ರಾಯಚೂರಿನ ಬುಳ್ಳಾಪುರ ಗ್ರಾಮದಲ್ಲಿ ನಡೆದಿದೆ. ಗಿಲ್ಲೆಸುಗೂರು ಕ್ಯಾಂಪ್ ನ 29 ವರ್ಷ ವಯಸ್ಸಿನ ಸಾಮ್ಯುವೆಲ್ ಹಾಗೂ 25 ವರ್ಷ ವಯಸ್ಸಿನ ಶಾಂತರಾಜ್ ಮೃತಪಟ್ಟ ಸಹೋದರರಾಗಿದ್ದಾರೆ. ತುಂಗಭದ್ರಾ ನದಿಯಿಂದ ಮರುಳು ಸಾಗಿಸುವ ಸಂದರ್...
ರಾಯಚೂರು: ನಿಂಬೆ ಹಣ್ಣಿನ ರಸ ಮೂಗಿಗೆ ಹಾಕಿಕೊಂಡ ಶಿಕ್ಷಕರೊಬ್ಬರು ಅಸ್ವಸ್ಥಗೊಂಡು ದಾರುಣವಾಗಿ ಸಾವನ್ನಪ್ಪಿದ್ದು, ಆರೋಗ್ಯವಾಗಿದ್ದ ವ್ಯಕ್ತಿ ಸುಳ್ಳು ಮಾಹಿತಿಗಳಿಂದ ಪ್ರೇರಿತರಾಗಿ ನಿಂಬೆ ರಸ ಮೂಗಿಗೆ ಸುರಿದುಕೊಂಡು ದಾರುಣವಾಗಿ ಸಾವನ್ನಪ್ಪಿದ್ದಾರೆ. ನಿಂಬೆ ಹಣ್ಣಿನಲ್ಲಿ “ಸಿ” ಮತ್ತು “ಎ” ವಿಟಮಿನ್ ಇವೆ. ನಿಂಬೆ ಹಣ್ಣಿನ ರಸವನ್ನು ಮೂಗಿಗ...
ಬೆಳಗಾವಿ: ರೈತ ಕೇಳಿದ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದ ಆ(ಹಂ)ಹಾರ ಸಚಿವ ಉಮೇಶ್ ಕತ್ತಿ ರಾಜ್ಯದ ಜನತೆಗೆ “ಸತ್ತು ಹೋಗಿ” ಎಂದು ಹೇಳಿಕೆ ನೀಡಿದ್ದು, ಇಂತಹವರೆಲ್ಲ ಸಚಿವರಾದರೆ ರಾಜ್ಯದ ಜನರ ಪರಿಸ್ಥಿತಿ ಏನು ಎಂದು ಪ್ರಶ್ನಿಸುವಂತಾಗಿದೆ. ಈಶ್ವರ ಆರ್ಯ ಎಂಬ ರೈತ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದ ಉಮೇಶ್ ಕತ್ತಿ ದುರಾಂಹಕಾರಿ ಹೇಳಿಕೆ ನೀಡ...
ದಾವಣಗೆರೆ: ನನ್ನ ತಾಯಿಗೆ ಊಟ ಕೊಡದೇ ಅವರ ಸಾವಿಗೆ ಕಾರಣರಾಗಿದ್ದಾರೆ ಎಂದು ಕೊರೊನಾ ಸೋಂಕಿತ ಮಹಿಳೆಯ ಪುತ್ರ ಜಿಲ್ಲಾಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯಾಹ್ನ ತಾಯಿಗೆ ತಾನು ಊಟ ಕೊಡಬೇಕೇ ಎಂದು ಕೇಳಿದಾಗ ಡಾಕ್ಟರ್ ನಾವಾ? ನೀವಾ? ಎಂದು ಕೇಳಿದ್ರು. ನಮ್ಮ ತಾಯಿ ರಾತ್ರಿಯೆಲ್ಲಾ ಊಟ ಬೇಕು ಎಂದು 10 ಬಾರಿ ಕೇಳ...