ದಾವಣಗೆರೆ: 11 ತಿಂಗಳ ಮಗುವನ್ನು ನೇಣಿಗೇರಿಸಿ ತಾಯಿ ಕೂಡ ನೇಣಿಗೆ ಶರಣಾಗಿರುವ ಘಟನೆ ದಾವಣಗೆರೆಯ ಚನ್ನಗಿರಿ ತಾಲೂಕಿನ ದೊಡ್ಡೇರಿಕಟ್ಟೆ ಗ್ರಾಮದಲ್ಲಿ ಇಂದು ಸಂಭವಿಸಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. 26 ವರ್ಷದ ಶ್ವೇತಾ ಹಾಗೂ ಅವರ ಕಿರಿಯ ಪುತ್ರಿ...
ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೊರೆ ಹೋಗಿದ್ದ ಸಚಿವ ಎಸ್.ಟಿ.ಸೋಮಶೇಖರ್, ಕಾಂಗ್ರೆಸ್ ನಾಯಕ ಮೇಟಿ ಪ್ರಕರಣ ಹಾಗೂ ರಮೇಶ್ ಜಾರಕಿಹೊಳಿ ಪ್ರಕರಣ ನಮಗೆ ಪಾಠ ಎಂದು ಹೇಳಿದ್ದಾರೆ. ಮೇಟಿ ಅವರು ರಾಸಲೀಲೆ ಪ್ರಕರಣದ ಬಳಿಕ ಅವರು ರಾಜೀನಾಮೆ ನೀಡಿದರು. ರಾಜೀನಾಮೆ ನೀಡಿ 3 ತಿಂಗಳ ಬಳಿಕ ಅವರಿಗೆ ಕ್ಲೀನ್ ಚಿಟ್ ಸಿಕ್ಕಿತು. ...
ಬೆಂಗಳೂರು: ಝೊಮೆಟೊ ಡೆಲಿವರಿ ಬಾಯ್ ಕಾಮರಾಜ್ ಅವರು ಹಲ್ಲೆ ನಡೆಸಿದ್ದಾರೆ ಎಂದು ಸೀನ್ ಕ್ರಿಯೇಟ್ ಮಾಡಿ, ಯುವಕನ ಜೀವನವನ್ನೇ ಸಂಕಷ್ಟಕ್ಕೆ ಸಿಲುಕಿಸಿದ್ದ, ಹಿತಾಶಾ ಚಂದ್ರಾನಿ ಇದೀಗ ತಾನೇ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಈ ಘಟನೆ ನಡೆದ ಆರಂಭದಲ್ಲಿ ಎಲ್ಲರು ಕೂಡ ಕಾಮರಾಜ್ ಅವರದ್ದೇ ತಪ್ಪು ಎಂದು ಅಂದುಕೊಂಡಿದ್ದರು. ಕಾಮರಾಜ್ ನೋಡಲು ದೃಢಕಾಯರಾಗ...
ದಾವಣಗೆರೆ: ಕಳೆದ 8 ತಿಂಗಳಿನಿಂದ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಂಡಜ್ಜಿ ಪೌಲ್ಟ್ರಿ ಫಾರಂನಲ್ಲಿ 7ರಿಂದ 8 ಸಾವಿರ ಕೋಳಿಗಳು ಮೃತಪಟ್ಟಿರುವ ಘಟನೆ ನಡೆದಿದ್ದು, ಜಿಲ್ಲೆಯಲ್ಲಿ ಕೋಳಿ ಜ್ವರದ ಭೀತಿ ಸೃಷ್ಟಿಯಾಗಿದ್ದು, ನೆರೆಯ ಜಿಲ್ಲೆಯವರೂ ಆತಂಕಕ್ಕೀಡಾಗಿದ್ದಾರೆ. ಸತ್ತ ಕೋಳಿಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಕೊಂಡಜ್ಜಿ ...
ಹುಬ್ಬಳ್ಳಿ: ಪತ್ನಿಯನ್ನು ನೇಣಿಗೆ ಹಾಕಿ ಪತಿಯೋರ್ವ ಹತ್ಯೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು, ಇಲ್ಲಿನ ಹನುಮಂತನಗರ ಬಡಾವಣೆಯ ನಿವಾಸಿಯಾಗಿದ್ದಾನೆ. ಈತ ಕಾರು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ. ಕೋಲ್ಕತ್ತಾ ಮೂಲದ ರೇಣುಕ ಹತ್ಯೆಗೀಡಾದ ಮಹಿಳೆಯಾಗಿದ್ದಾಳೆ. ಹನುಮಂತನಗರ ಬಡಾವಣೆಯ ಮಹಾದೇವಪ್ಪ ಹತ್ಯೆ ನಡ...
ಗದಗ: ಮೂರು ದಿನಗಳ ಹಿಂದೆ ಕರುವಿಗೆ ಜನ್ಮ ನೀಡಿದ್ದ ಹಸುವಿನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಹಸುವಿನ ಬಾಲ ಹಾಗೂ ಕೆಚ್ಚಲನ್ನು ಕೊಯ್ದು ವಿಕೃತಿ ಮೆರೆದಿದ್ದಾರೆ. ಇಲ್ಲಿನ ರಾಧಾಕೃಷ್ಣ ನಗರದಲ್ಲಿ ಈ ಘಟನೆ ಸಂಭವಿಸಿದ್ದು, ಭಾನುವಾರ ರಾತ್ರಿ ಹಸುವಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ...
ಕಾರವಾರ: ಅಂತ್ಯ ಸಂಸ್ಕಾರಕ್ಕೆ ಹೂವು ತರಲು ಬೈಕ್ ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರಿಗೆ ಬಸ್ ಡಿಕ್ಕಿಯಾಗಿ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶಿರಸಿ ನಗರದ ಎಸ್ ಬಿ ಐ ಸರ್ಕಲ್ ಬಳಿಯಲ್ಲಿ ನಡೆದಿದೆ. ಶಿರಸಿಯ ಗಣೇಶ ನಗರದ ನಿವಾಸಿಗಳಾದ 34 ವರ್ಷ ವಯಸ್ಸಿನ ರವಿಚಂದ್ರ ವಡ್ಡರ್ ಹಾಗೂ 26 ವರ್ಷ ವಯಸ್ಸಿನ ಇಂದೂರ ಮೃತಪಟ್ಟವರಾಗಿ...
ಗದಗ: ನಾಡಗೀತೆ ಬಹಳ ದೊಡ್ಡದಾಗಿದೆ ಹಾಗಾಗಿ ನಾಡಗೀತೆಗೆ ಕತ್ತರಿ ಹಾಕಲು ಚಿಂತನೆ ನಡೆಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಅರಣ್ಯ ಇಲಾಖೆ ಸಚಿವ ಅರವಿಂದ್ ಲಿಂಬಾವಳಿ ಹೇಳಿದ್ದಾರೆ. ಜಿಲ್ಲೆಯ ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನ ಕಪ್ಪತ್ತಗುಡ್ಡ ಹಾಗೂ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ ಅವರು, ಈ ವಿಚಾರ ತಿಳಿಸಿದ್ದು, ನಾಡಗೀತೆಗೆ...
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಲಭ್ಯವಾಗಿದ್ದು, ಸಿಡಿಯಲ್ಲಿ ಕೇಳಿ ಬಂದಿರುವ ಧ್ವನಿಯು ಬೇರೊಬ್ಬ ವ್ಯಕ್ತಿಯದ್ದು ಎಂದು ಹೇಳಲಾಗಿದೆ. ವಿಡಿಯೋದಲ್ಲಿರುವ 10 ನಿಮಿಷಗಳ ಧ್ವನಿಯನ್ನು ಪೊಲೀಸರು ಎಫ್ ಎಸ್ ಎಲ್ ಗೆ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಧ್ವನಿಯು ಚಿಕ್ಕಮಗಳೂರು ಮೂಲದ ವ...
ಚಿಕ್ಕಬಳ್ಳಾಪುರ: ಜೀವನಾಧಾರವಾಗಿದ್ದ 60ಕ್ಕೂ ಅಧಿಕ ಕುರಿ-ಮೇಕೆ-ಜಾನುವಾರುಗಳು ಸಜೀವವಾಗಿ ದಹಿಸಿದ ದಾರುಣ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಪೂಲಮಾಕಲಹಳ್ಳಿಯಲ್ಲಿ ನಡೆದಿದೆ. ಗಂಗಾಧರಪ್ಪ ಹಾಗೂ ತುಳಸಮ್ಮ ದಂಪತಿ ಇದೀಗ ತಮ್ಮ ಜೀವನಾಧಾರವಾಗಿದ್ದ ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ನಿನ್ನೆ ಸಂಜೆ ಹುಲ್ಲಿನ...