ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮರಿ ಮೊಮ್ಮಗ ಚಂದ್ರ ಕುಮಾರ್ ಬೋಸ್ ಬಿಜೆಪಿ ಪಕ್ಷವನ್ನು ತೊರೆದಿದ್ದಾರೆ. ಬಿಜೆಪಿ ನಾಯಕರು ನನ್ನ ವಿಚಾರವನ್ನು ಪ್ರಚಾರ ಮಾಡುವ ಭರವಸೆ ನೀಡಿದ್ದರು. ಆದರೆ ಅದ್ಯಾವುದಕ್ಕೂ ಬಿಜೆಪಿ ಅವಕಾಶ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿರುವ ಚಂದ್ರಕುಮಾರ್ ಬೋಸ್ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿಗೆ ವಿದಾಯ ಹೇಳಿದ್ದಾರೆ. ...
ವ್ಯಕ್ತಿಯೊಬ್ಬ ಬಾಲಕಿ ಮೇಲೆ ಸುಮಾರು ಒಂದು ತಿಂಗಳ ಕಾಲ ಅತ್ಯಾಚಾರ ಮಾಡಿದ ಘಟನೆ ಭಾರತ- ನೇಪಾಳ ಗಡಿ ಬಳಿಯ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ಖೋರಿಬರಿ ಪ್ರದೇಶದಲ್ಲಿ ನಡೆದಿದೆ. ಸಂತ್ರಸ್ತೆ 5 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಈ ಕುರಿತು ವಿದ್ಯಾರ್ಥಿನಿಯು ತನ್ನ ತಾಯಿಗೆ ವಿವರಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ. ಬಾಲಕಿ ...
ಭಾರತದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ವಿವಿಧ ದೇಶಗಳ ನಾಯಕರಿಗೆ ಬೆಳ್ಳಿ ಹಾಗೂ ಚಿನ್ನ ಲೇಪಿತ ತಟ್ಟೆಯಲ್ಲಿ ಊಟೋಪಚಾರ ಮಾಡಲು ತಯಾರಿ ನಡೆದಿದೆ. ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕಲಾತ್ಮಕ ಕೆತ್ತನೆಯ ವಿನ್ಯಾಸಗಳಿರುವ ಕೆಲವು ಬೆಳ್ಳಿಯ ಪಾತ್ರೆ ಹಾಗೂ ತಟ್ಟೆಗಳನ್ನೇ ಬಳಸಲು ನಿರ್ಧರಿಸಲಾಗಿದೆ. G-20 ಶೃಂಗಸಭೆ...
ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರ ನಿರ್ದೇಶನವನ್ನು ಒಂದು ವೇಳೆ ಪಾಲಿಸಿದರೆ ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳ ವಿರುದ್ಧ ಆರ್ಥಿಕ ಅಡೆತಡೆಗಳನ್ನು ಹಾಕುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಯಾವುದೇ ಉಪಕುಲಪತಿಯನ್ನು ಹೆಸರಿಸದೆ ಹೇಳಿಕೆ ನೀಡಿದ್ದಾರೆ. ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು 16 ಸರ್ಕಾರಿ ವ...
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು 'ಭಾರತ್' ಕರೆಯನ್ನು ಪುನರುಚ್ಚರಿಸಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಂತಹ ಸಂಸ್ಥೆಗಳಿಗೆ ಹೊಸ ಹೆಸರನ್ನು ನೀಡಬೇಕು ಎಂದು ವಾದಿಸಿದ್ದಾರೆ. ಇಂದಿರಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಈ ಹಿಂದೆ ಭಾರತ ಎಂಬ ಹೆಸರಲ್ಲೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು ಎಂದು ಅವರು ಪ್ರತಿಪ...
ಸನಾತನ ಧರ್ಮದ ಬಗ್ಗೆ ತಮಿಳುನಾಡಿನ ಯುವ ಕಲ್ಯಾಣ ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ತಿರುಚಿದ್ದಕ್ಕಾಗಿ ತಮಿಳುನಾಡಿನ ತಿರುಚಿರಾಪಳ್ಳಿಯ ಬಿಜೆಪಿ ಐಟಿ ವಿಭಾಗದ ಉಸ್ತುವಾರಿ ಅಮಿತ್ ಮಾಳವೀಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಉದಯನಿಧಿ ಅವರ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ನಿರೂಪಿಸಿದ್ದಕ್ಕಾಗಿ ಮತ್ತು ವಿವಿಧ ವರ್ಗಗಳ ಜನರ...
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಹೆಸರನ್ನು ಮರುನಾಮಕರಣ ಮಾಡುವ ಹುನ್ನಾರದಲ್ಲಿದ್ದಾರೆ. ಹೀಗಾಗಿ ಜವಾಹರ್ ಲಾಲ್ ನೆಹರೂ ಅವರ ಬದಲಿಗೆ ಸ್ವತಂತ್ರ್ಯ ಸೇನಾನಿ ಸುಭಾಶ್ ಚಂದ್ರ ಬೋಸ್ ರನ್ನು ಮೊದಲ ಪ್ರಧಾನಿ ಎಂದು ಘೋಷಣೆ ಮಾಡಿ ಎಂದು ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ. ಸುಭಾಷ್ ಚಂದ್ರ ಬೋಸ್ ಅವರನ್ನು 1943ರ ಭ...
ದೇಶದಲ್ಲಿ ಮತ್ತೊಂದು ಗಡಿ ಮೀರಿದ ಪ್ರೇಮ ಪ್ರಕರಣವೊಂದು ಬಯಲಾಗಿದೆ. ಬಾಂಗ್ಲಾದೇಶದ ಯುವತಿಯೊಬ್ಬಳು ತನ್ನ ಪ್ರೇಮಿಯನ್ನು ಭೇಟಿ ಮಾಡಲು ರಾಜಸ್ಥಾನದ ಅನುಪ್ಗಢಕ್ಕೆ ಬಂದಿದ್ದಾಳೆ. ಆರು ತಿಂಗಳ ಹಿಂದೆ ಇವರಿಬ್ಬರು ಸೋಷಿಯಲ್ ಮೀಡಿಯಾ ಆಪ್ ಮೂಲಕ ಸ್ನೇಹಿತರಾಗಿದ್ದರು. ಯುವತಿ ತನ್ನ ಪ್ರಿಯಕರನನ್ನು ಭೇಟಿ ಮಾಡಲು ಸುಮಾರು 2200 ಕಿಲೋಮೀಟರ್ ಪ್ರಯಾ...
ಇತ್ತೀಚಿಗೆ ಸಂಸತ್ ನಿಂದ ಅನರ್ಹಗೊಂಡು ಕೊನೆಗೂ ಮತ್ತೆ ಸದಸ್ಯತ್ವ ಪಡೆದ ರಾಹುಲ್ ಗಾಂಧಿಗೆ ಇದೀಗ ಹೊಸ ತಲೆನೋವು ಶುರುವಾಗಿದೆ. ರಾಹುಲ್ ಗಾಂಧಿಗೆ ಲೋಕಸಭೆ ಕಾರ್ಯದರ್ಶಿಗಳು ಮತ್ತೆ ಸಂಸತ್ ಸದಸ್ಯತ್ವವನ್ನು ನೀಡಿರುವುದನ್ನು ಪ್ರಶ್ನಿಸಿ ವಕೀಲ ಅಶೋಕ್ ಪಾಂಡೆ ಎಂಬುವವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಒಮ್ಮೆ ಜನಪ್ರತಿನಿಧಿಗಳು...
ಮುಂಬರುವ ಹಬ್ಬಗಳು ಮತ್ತು ಪ್ರಮುಖ ಸಾರ್ವಜನಿಕ ಸಭೆಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು, ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಾದ್ಯಂತ ಸೆಪ್ಟೆಂಬರ್ 6 ರಿಂದ 15 ರವರೆಗೆ ಕಾನೂನುಬಾಹಿರ ಸಭೆಯನ್ನು ನಿರ್ಬಂಧಿಸುವ ಸಿಆರ್ ಪಿಸಿ ಸೆಕ್ಷನ್ 144 ಅನ್ನು ಜಾರಿಗೆ ತರಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ರಸ್ತೆಗಳಲ್ಲಿ ಪೂಜ...