ಒಡಿಶಾ ರೈಲು ದುರಂತ: ಈ ಮೂವರ ತಪ್ಪುಗಳೇ ಅವಘಡಕ್ಕೆ ಕಾರಣವಾಯಿತೇ..?

07/07/2023

ಕಳೆದ ಜೂನ್ 2 ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ ಶುಕ್ರವಾರ ಮೂವರು ರೈಲ್ವೆ ಅಧಿಕಾರಿಗಳನ್ನು ಬಂಧಿಸಿದೆ.

ಈ ರೈಲ್ವೆ ಅಧಿಕಾರಿಗಳ ಕೃತ್ಯಗಳೇ ರೈಲು ಅಪಘಾತಕ್ಕೆ ಕಾರಣವಾಯಿತು ಎಂಬ ಆರೋಪದಲ್ಲಿ ಇವರನ್ನು ಬಂಧಿಸಲಾಗಿದ ಎಂದು ಈ ಬಗ್ಗೆ ತಿಳಿದಿರುವವರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಬಂಧಿತ ರೈಲ್ವೆ ನೌಕರರನ್ನು ಅರುಣ್ ಕುಮಾರ್ ಮಹಂತ (ಹಿರಿಯ ಸೆಕ್ಷನ್ ಇಂಜಿನಿಯರ್), ಮೊಹಮ್ಮದ್ ಅಮೀರ್ ಖಾನ್ (ಸೆಕ್ಷನ್ ಇಂಜಿನಿಯರ್) ಮತ್ತು ಪಪ್ಪು ಕುಮಾರ್ (ತಂತ್ರಜ್ಞ) ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 304 ಮತ್ತು 201 (ಸಾಕ್ಷ್ಯ ನಾಶ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಒಂದು ತಿಂಗಳ ಅವಧಿಯ ತನಿಖೆಯ ನಂತರ ಸಿಬಿಐ ಎರಡು ಕಠಿಣ ಸೆಕ್ಷನ್‌ಗಳನ್ನು ಸೇರಿಸಿದೆ. ಒಡಿಶಾ ಪೊಲೀಸರು ಮೊದಲು ದಾಖಲಿಸಿದ ಪ್ರಕರಣದ ಆಧಾರದ ಮೇಲೆ ಕಳೆದ ತಿಂಗಳು ದಾಖಲಿಸಿದ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಅನ್ವಯಿಸಲಾಗಿಲ್ಲ. ಒಡಿಶಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 293 ಜನರು ಸಾವಿಗೀಡಾಗಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version