7:16 AM Friday 11 - September 2026

ಸಿಡಿಯಲ್ಲಿದ್ದ ಯುವತಿಯ ಜೊತೆ ಮತ್ತೋರ್ವ ಶಾಸಕ ಸಂಪರ್ಕದಲ್ಲಿ!

mla
23/03/2021

ಬೆಂಗಳೂರು:  ರಮೇಶ್ ಜಾರಕಿಹೊಳಿ ಜೊತೆ ಸಿಡಿಯಲ್ಲಿ ಕಾಣಿಸಿಕೊಂಡಿದ್ದ ಯುವತಿ ಉತ್ತರ ಕರ್ನಾಟಕ ಮೂಲದ ಶಾಸಕರೊಬ್ಬರ ಜೊತೆಗೆ ಸುಮಾರು 4 ತಿಂಗಳುಗಳಿಂದ ಸಂಪರ್ಕದಲ್ಲಿದ್ದಳು ಎಂದು ಹೇಳಲಾಗಿದೆ.

ಈ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಜೊತೆಗೆ ಗುರುತಿಸಿಕೊಂಡಿಲ್ಲ, ಆದರೆ ಅವರ ವಿರುದ್ಧ ಬಣದಲ್ಲಿ ಗುರುತಿಸಿಕೊಂಡಿದ್ದರು ಎಂದು ಹೇಳಲಾಗಿದೆ.  ಸಿಡಿ ಬಿಡುಗಡೆಯ ರಹಸ್ಯ ಈ ಶಾಸಕಗೆ ನಾಲ್ಕೈದು ತಿಂಗಳ ಹಿಂದೆಯೇ ತಿಳಿದಿತ್ತು ಎಂದು ಹೇಳಲಾಗುತ್ತಿದೆ.

ಸಿಡಿಯಲ್ಲಿರುವ ಯುವತಿಯ ಸಿಡಿಆರ್ ಶೋಧ ನಡೆಸಿದಾಗ ಆ ಶಾಸಕರ ಮೊಬೈಲ್ ಗೆ ನಿರಂತರ ಕರೆಗಳು ಹೋಗಿರುವುದು ಪತ್ತೆಯಾಗಿದೆ. ಶಾಸಕ ಈ ಯುವತಿಗೆ  ವಾಟ್ಸಾಪ್ ಕಾಲ್ ಗಳನ್ನು ಹೆಚ್ಚಾಗಿ ಮಾಡಿರುವುದು ತಿಳಿದು ಬಂದಿದೆ ಎಂದು ವರದಿಯಾಗಿದ್ದು, ಪ್ರಕರಣದಲ್ಲಿ ಶಾಮೀಲಾಗಿರುವ ನರೇಶ್ ಗೌಡ ಹಾಗೂ ಶ್ರವಣ್ ಗೂ ಕರೆ ಹೋಗಿದೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti
Exit mobile version