ಸಹೋದ್ಯೋಗಿಗಳಿಂದ ಜಾತಿ ಆಧಾರಿತ ಕಿರುಕುಳ: ಸಾವಿಗೆ ಶರಣಾದ ದಲಿತ ಉದ್ಯೋಗಿ
ಸಹೋದ್ಯೋಗಿಗಳಿಂದ ಜಾತಿ ಆಧಾರಿತ ನಿಂದನೆ, ಕಿರುಕುಳ ಅನುಭವಿಸುತ್ತಿದ್ದ ಕಾರಣಕ್ಕೆ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಮನನೊಂದು ಸಾವಿಗೆ ಶರಣಾದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಎಚ್ ಎಎಲ್ ನಿವಾಸಿ ವಿವೇಕ್ ಕುಮಾರ್ (35) ಮೃತ ದುರ್ದೈವಿ. ವಿವೇಕ್ ಯೆಮಲೂರಿನ ಲೈಫ್ ಸ್ಟೈಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.
ವಿವೇಕ್ ಹಲವಾರು ತಿಂಗಳುಗಳಿಂದ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದರು ಮತ್ತು ಅವರ ಮೇಲೆ ಜಾತಿ ನಿಂದನೆಗಳನ್ನು ಮಾಡಲಾಗಿತ್ತು. ಕಚೇರಿಯಲ್ಲಿನ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಕ್ರಮ ಕೈಗೊಂಡಿರಯವುದಿಲ್ಲ. ಹೀಗಾಗಿ ಬೇಸತ್ತ ವಿವೇಕ್ ಜೂನ್ 3ರ ಶನಿವಾರ ತನ್ನ ಸಹೋದ್ಯೋಗಿಗಳ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೇ ತನ್ನ ಸಾವಿಗೆ ಕಾರಣವೇನೆಂದು ವಿವರಿಸಿ ವಿಡಿಯೋ ಮಾಡಿ, ಅದನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಬಳಿಕ ಕೆಲವೇ ಗಂಟೆಗಳ ನಂತರ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ.
ವಿವೇಕ್ ಅವರ ತಂದೆ ರಾಜಕುಮಾರ್ ಜೂನ್ 4 ರಂದು ದೂರು ನೀಡಿದ್ದು, ಅವರು ನೀಡಿದ ದೂರಿನ ಆಧಾರದ ಮೇಲೆ ಎಫ್ ಐಆರ್ ದಾಖಲಿಸಿರುವ ವೈಟ್ಫೀಲ್ಡ್ ಪೊಲೀಸರು ಸಂಸ್ಥೆಯ ವ್ಯವಸ್ಥಾಪಕಿ ಮಾಲತಿ ಮತ್ತು ಸಹೋದ್ಯೋಗಿಗಳಾದ ಕುಮಾರ್ ಸೂರಜ್ ಮತ್ತು ನಿತೇಶ್ ಕುಮಾರ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























