ಚಂದ್ರಯಾನ 3: ಇಸ್ರೋ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ: ನಿರ್ಮಲಾ ಸೀತಾರಾಮನ್

nirmala
14/07/2023

ಚಂದ್ರಯಾನ 3 ಉಡಾವಣೆ ಯಶಸ್ವಿಯಾಗಲಿ. ನಾವೆಲ್ಲರೂ ಒಂದಾಗಿ ಚಂದ್ರಯಾನದ ಯಶಸ್ಸಿಗೆ ಹಾರೈಸೋಣ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಮಣಿಪಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತರಿಕ್ಷ ಸಾಧನೆಗಳಲ್ಲಿ ಭಾರತ ಮುಂಚೂಣಿ ರಾಷ್ಟ್ರವಾಗಿದೆ. ಇವರಿಗೆ ಅನೇಕ ಯಶಸ್ವಿ ಉಡಾವಣೆಗಳನ್ನು ಮಾಡಿದ್ದೇವೆ. ಜನರ ಶುಭ ಹಾರೈಕೆಯಿಂದ ಇಸ್ರೋ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ. ಇದು ಇಸ್ರೋ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಎಂದರು.

ಬಾಹ್ಯಾಕಾಶ ಕ್ಷೇತ್ರದಲ್ಲಿ ಕರ್ನಾಟಕ ಕರಾವಳಿಯ ಕೊಡುಗೆ ದೊಡ್ಡದು. ಇಸ್ರೋ ನಿರ್ವಹಣೆಯಲ್ಲಿ ಪ್ರಮುಖರಾದ ಯುಆರ್ ರಾವ್ ಕರ್ನಾಟಕದ ಉಡುಪಿಯವರು. ಯು ಆರ್ ರಾವ್ ರಂತಹ ಶ್ರೇಷ್ಠ ವಿಜ್ಞಾನಿಗಳಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಈ ಹಂತ ತಲುಪಿದ್ದೇವೆ ಎಂದು ತಿಳಿಸಿದರು.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version