11:20 AM Saturday 23 - August 2025

ಚಂದ್ರಯಾನ3: ವಿಕ್ರಂ, ಪ್ರಜ್ಞಾನ್‌ ರೋವರ್ ಸಂಪರ್ಕ ಗಳಿಸಲು ಇಸ್ರೋ ಶತಪ್ರಯತ್ನ: ಅಷ್ಟಕ್ಕೂ ಏನಾಯ್ತು ಅಲ್ಲಿ..?

22/09/2023

ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3ರ ವಿಕ್ರಂ, ಪ್ರಜ್ಞಾನ್‌ ರೋವರ್ ನಿದ್ರೆಗೆ ಜಾರಿದೆ. ಹೀಗಾಗಿ ಇದರ ಸಂಪರ್ಕವನ್ನು ಪುನಃ ಸಾಧಿಸುವ ಕಾರ್ಯವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಂದುವರಿಸಿದೆ. ಆದರೆ ಈವರೆಗೂ ಅವುಗಳಿಂದ ಯಾವುದೇ ಸಿಗ್ನಲ್‌ಗಳು ಬಂದಿಲ್ಲ ಎಂದು ಇಸ್ರೋ ಮಾಹಿತಿ ನೀಡಿದೆ.

ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ಗಳನ್ನು ನಿದ್ದೆಯಿಂದ ಎಚ್ಚರಗೊಳಿಸಿ ಸಂಪರ್ಕ ಸಾಧಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ. ಆದರೆ ಸದ್ಯಕ್ಕೆ ಅವುಗಳಿಂದ ಯಾವುದೇ ಸಿಗ್ನಲ್‌ಗಳು ಬಂದಿಲ್ಲ. ಆದರೂ ಅವುಗಳನ್ನು ಮರುಸಕ್ರಿಯಗೊಳಿಸಲು ಪ್ರಯತ್ನಗಳು ಮುಂದುವರೆದಿದೆ.

ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಂ ಲ್ಯಾಂಡರ್‌ ಲ್ಯಾಂಡ್‌ ಆಗಿತ್ತು. ಆ ಬಳಿಕ ಪ್ರಜ್ಞಾನ ರೋವರ್‌ ಹೊರಬಂದು 12 ದಿನಗಳ ಕಾಲ ಕಾರ್ಯ ನಿರ್ವಹಿಸಿ ನಿದ್ರೆಗೆ ಜಾರಿತ್ತು. ಇದೀಗ ಸುದೀರ್ಘ 14 ದಿನಗಳ ನಿದ್ರೆಯನ್ನು ವಿಕ್ರಂ ಲ್ಯಾಂಡರ್‌ ಹಾಗೂ ಪ್ರಜ್ಞಾನ್‌ ರೋವರ್‌ ಮುಗಿಸಿ ಮತ್ತೆ ಮರು ಸಕ್ರಿಯಗೊಳಿಸಲು ಇಸ್ರೋ ಪ್ರಯತ್ನ ನಡೆಸುತ್ತಿದೆ.

ಪ್ರಗ್ಯಾನ್ ರೋವರ್ ಚಂದ್ರನ ಮೇಲೆ 100 ಮೀಟರ್‌ಗಿಂತಲೂ ಹೆಚ್ಚು ದೂರವನ್ನು ಕ್ರಮಿಸಿತ್ತು. ದಕ್ಷಿಣ ಧ್ರುವದ ಬಳಿ ಚಂದ್ರನ ಮೇಲ್ಮಯಲ್ಲಿ ಸಲ್ಪರ್ (ಎಸ್) ಇರುವಿಕೆಯನ್ನು ದೃಢಪಡಿಸಿತು. ವಿಕ್ರಮ್ ಲ್ಯಾಂಡ‌ ದಕ್ಷಿಣ ಧ್ರುವ ಪ್ರದೇಶದ ಮೇಲೆ ಚಂದ್ರನ ಪ್ಲಾಸ್ಮಾ ಪರಿಸರದ ಸಮೀಪ ಮೇಲ್ಮೀಯ ಮಾಪನಗಳನ್ನು ನಡೆಸಿದೆ ಎಂಬ ಮಾಹಿತಿ ಸಿಕ್ಕಿದೆ.

ಇತ್ತೀಚಿನ ಸುದ್ದಿ

Exit mobile version