ಚಿಕ್ಕಮಗಳೂರಿನ ಪ್ರಭಾವಿ‌ ಕಾಂಗ್ರೆಸ್ ಮುಖಂಡೆಯ ಮನೆಗೆ ಐಟಿ ದಾಳಿ

gayathri shante gowda
18/11/2022

ಮಾಜಿ ಎಂ.ಎಲ್.ಸಿ. ಚಿಕ್ಕಮಗಳೂರಿನ ಪ್ರಭಾವಿ‌ ಕಾಂಗ್ರೆಸ್ ಮುಖಂಡೆ ಗಾಯತ್ರಿ ಶಾಂತೇಗೌಡ ಮನೆ ಮೇಲಿನ ಐಟಿ ದಾಳಿ ಇಂದೂ ಕೂಡ ಮುಂದುವರೆದಿದ್ದು, ಸತತ ಎರಡನೇ ದಿನವೂ ಐಟಿ ಅಧಿಕಾರಿಗಳ ಶೋಧ ಮುಂದುವರೆದಿದೆ.

ನಿನ್ನೆಯಿಂದ ದಾಳಿ ನಡೆಯುತ್ತಿದ್ದರು ಕೂಡ   ಗಾಯತ್ರಿ ಶಾಂತೇಗೌಡ ಬೆಂಗಳೂರಿನಲ್ಲಿ ಇದ್ದು, ಈವರೆಗೂ ಮನೆಗೆ ಬಂದಿಲ್ಲ. ನಿನ್ನೆ ಗಾಯತ್ರಿ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಹಿನ್ನೆಲೆ ಗಾಯತ್ರಿ ನಿವಾಸದ ಮುಂದಿನ ರಸ್ತೆಯನ್ನ ಪೊಲೀಸರು ಕಂಪ್ಲೀಟ್ ಕ್ಲೋಸ್ ಮಾಡಿದ್ದಾರೆ.

ಸಾರ್ವಜನಿಕರು ಓಡಾಡದಂತೆ ಎರಡು ಬದಿಯಲ್ಲಿ ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದಾರೆ. ಇನ್ನು ಈ ದಾಳಿಯನ್ನ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ.

ಐ.ಟಿ. ಅಧಿಕಾರಿಗಳು ರಾಜಕೀಯ ಪ್ರೇರಿತವಾಗಿ ದಾಳಿ ಮಾಡಿದ್ದಾರೆ. ಭ್ರಷ್ಟಾಚಾರ ವಿರೋಧಿಸಿ ಕಡೂರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ 10ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಸರ್ಕಾರ ಪೊಲೀಸ್ ಹಾಗೂ ಅಧಿಕಾರಿಗಳನ್ನು ಕೈ ಗೊಂಬೆಗಳಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ

Exit mobile version