ಭಾತೃತ್ವ: ಕೈ ಕಳೆದುಕೊಂಡ ಮುಸ್ಲಿಂ ಯೋಧನಿಗೆ ಕ್ರೈಸ್ತ ವ್ಯಕ್ತಿಯಿಂದ ಕೈ ದಾನ: ಯಶಸ್ವಿ ಆಪರೇಷನ್ ಮಾಡಿ ಕೈ ಜೋಡಿಸಿದ ಹಿಂದೂ ವೈದ್ಯ

15/08/2023

ಮನುಷ್ಯತ್ವ ಇದ್ದವರಿಗೆ ಮಾನವೀಯತೆ ಇರುತ್ತದೆ. ನಮ್ಮ ದೇಶದಲ್ಲಿ ಸೌಹಾರ್ದತೆ ಮತ್ತು ಭ್ರಾತೃತ್ವಕ್ಕೆ ಸತ್ತಿಲ್ಲ ಎಂಬುದಕ್ಕೆ ನಾವು ಹೇಳುತ್ತಿರುವ ಈ ಸ್ಟೋರಿಯೇ ಉದಾಹರಣೆ. ಇದು ದೇಶದ ಕೋಮು ಸೌಹಾರ್ದತೆಯನ್ನು ಜೀವಂತವಾಗಿಡುವ ತಾಜಾ ನಿದರ್ಶನ.

ಹೌದು. ಸೇನೆಯಲ್ಲಿ ಹೋರಾಡುವಾಗ ಬಾಂಬ್ ಸ್ಫೋಟದಲ್ಲಿ ಕೈ ಕಳೆದುಕೊಂಡಿದ್ದ ಅಫ್ಘಾನಿಸ್ತಾನದ ಮುಸ್ಲಿಂ ಯೋಧನಿಗೆ, ಕ್ರಿಶ್ಚಿಯನ್ ದಾನಿಯೊಬ್ಬ ಕೈಯನ್ನು ಜೋಡಿಸಿದ ಮಾನವೀಯ ಕಥೆ ಇದು. ಆಪರೇಷನ್ ಯಶಸ್ವಿಯಾಗಿ ಮಾಡಿದ್ದು ಹಿಂದೂ ವೈದ್ಯ..

ಅಬ್ದುಲ್ ರಹೀಮ್ ಎಂಬ ಯೋಧ ತಾಲಿಬಾನ್ ಉಗ್ರರೊಡನೆ ಹೋರಾಡುವಾಗ ಗ್ರೆನೇಡ್ ವೊಂದನ್ನು ಡಿಫ್ಯೂಸ್ ಮಾಡುವ ಸಂದರ್ಭ ಬಂದಿತ್ತು. ದುರದೃಷ್ಟವಶಾತ್ ಗ್ರೆನೇಡ್ ಕೈಯಲ್ಲೇ ಸ್ಫೋಟಗೊಂಡಿತ್ತು. ಇದೇ ವೇಳೆಗೆ ಕೇರಳದಲ್ಲಿ ಜೋಸೆಫ್ ಎಂಬಾತ ತನ್ನ ಮರಣ ಶಯ್ಯೆಯಲ್ಲಿ ಅಂಗಾಂಗ ದಾನ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದ.

ಸುಬ್ರಹ್ಮಣಿಯನ್ ಎಂಬ ತಜ್ಞ ವೈದ್ಯರೊಬ್ಬರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಅಬ್ದುಲ್ ರಹೀಮ್ ಗೆ ಜೋಸೆಫ್ ನ ಕೈಯನ್ನು ಜೋಡಿಸುವಲ್ಲಿ ಸಫಲರಾಗಿದ್ದಾರೆ.
ತಮ್ಮನ್ನು ಮುದ್ದಾಡಿದ್ದ ಅಪ್ಪ ಸತ್ತರೂ ಆಶೀರ್ವದಿಸುವ ಕೈ ಜೀವಂತವಾಗಿರುವುದನ್ನು ಕಂಡ ಜೋಸೆಫ್ ಮಕ್ಕಳು ಹಾಗೂ ಕಳೆದುಕೊಂಡಿದ್ದ ಕೈಯನ್ನು ಮರಳಿ ಪಡೆದ ಅಬ್ದುಲ್ ಪರಸ್ಪರರಿಗೆ ‘ಕೈ’ ಮುಗಿಯುತ್ತಿರುವ ಈ ದೃಶ್ಯ ಮನೋಜ್ಞವಾಗಿತ್ತು. ಇಹಲೋಕ ತ್ಯಜಿಸಿದ ಆ ವ್ಯಕ್ತಿ ಜೀವನ ಮಾದರಿಯಾಗಿತ್ತು. ಇದೇ ಅಲ್ಲವೇ ಸೌಹಾರ್ದ, ಭಾತೃತ್ವ..?

ಇತ್ತೀಚಿನ ಸುದ್ದಿ

Exit mobile version